20 ವರ್ಷಗಳ ಪ್ರಯತ್ನದ ಬಳಿಕ ಕೊನೆಗೂ ಸಿಕ್ಕಿತು ‘3 ಇಡಿಯಟ್ಸ್’ ಶಾಲೆಗೆ ಮಾನ್ಯತೆ

3 Idiots: ಆಮಿರ್ ಖಾನ್ ನಟನೆಯ ‘3 ಇಡಿಯಟ್ಸ್’ ಸಿನಿಮಾ ಯಾರಿಗೆ ನೆನಪಿಲ್ಲ. ಆ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಲಡಾಕ್​ನಲ್ಲಿ ಒಂದು ಶಾಲೆಯನ್ನು ತೋರಿಸಲಾಗುತ್ತದೆ. ಅಲ್ಲಿನ ವಿದ್ಯಾರ್ಥಿಗಳು ಪ್ರಯೋಗಿಕ ಶಿಕ್ಷಣ ಕಲಿಯುತ್ತಿರುತ್ತಾರೆ. ಅಸಲಿಗೆ ಈ ಶಾಲೆಯ ಹೆಸರು ಡ್ರಕ್ ಪದ್ಮಾ ಕಾರ್ಪೊ ಸ್ಕೂಲ್, 20 ವರ್ಷಗಳ ಸತತ ಪ್ರಯತ್ನದ ಬಳಿಕ ಕೊನೆಗೂ ಈ ಶಾಲೆಗೆ ಮಾನ್ಯತೆ ದೊರೆತಿದೆ.

20 ವರ್ಷಗಳ ಪ್ರಯತ್ನದ ಬಳಿಕ ಕೊನೆಗೂ ಸಿಕ್ಕಿತು ‘3 ಇಡಿಯಟ್ಸ್’ ಶಾಲೆಗೆ ಮಾನ್ಯತೆ
3 Idiots

Updated on: Apr 27, 2025 | 6:48 PM

3 ಇಡಿಯಟ್ಸ್’ (3 Idiots) ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಲಡಾಕ್​ನಲ್ಲಿನ ಶಾಲೆಯೊಂದನ್ನು ತೋರಿಸಲಾಗುತ್ತದೆ. ಆಮಿರ್ ಖಾನ್ ಶಿಕ್ಷಕರಾಗಿರುವ ಆ ಶಾಲೆಯಲ್ಲಿ ಮಕ್ಕಳು ಭಿನ್ನ ರೀತಿಯ ಕಲಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಬದಲಿಗೆ ಪ್ರಯೋಗಿಕ ಶಿಕ್ಷಣವನ್ನು ಅಲ್ಲಿ ಕಲಿಸಲಾಗುತ್ತಿರುತ್ತದೆ. ಅಸಲಿಗೆ ‘3 ಇಡಿಯಟ್ಸ್’ ಸಿನಿಮಾನಲ್ಲಿ ತೋರಿಸಲಾಗಿರುವ ಆ ಶಾಲೆಯ ಹೆಸರು ಡ್ರಕ್ ಪದ್ಮಾ ಕಾರ್ಪೊ ಸ್ಕೂಲ್. ಈ ಶಾಲೆಗೆ ಹಲವು ವರ್ಷದ ಪ್ರಯತ್ನದ ಬಳಿಕ ಕೊನೆಗೂ ಸಿಬಿಎಫ್​ಸಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಮಾನ್ಯತೆ ದೊರೆತಿದೆ.

ರ್ಯಾಂಚೊ ಸ್ಕೂಲ್ (3 ಇಡಿಯಟ್ಸ್​ ಸಿನಿಮಾನಲ್ಲಿ ಆಮಿರ್ ಖಾನ್ ಹೆಸರು ರ್ಯಾಂಚೊ) ಎಂದೇ ಖ್ಯಾತವಾಗಿರುವ ಈ ಶಾಲೆ ಜಮ್ಮು ಕಾಶ್ಮೀರ ಸ್ಟೇಟ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ ಅಡಿಯಲ್ಲಿ ಬರುತ್ತದೆ. ಹಲವು ವರ್ಷಗಳಿಂದಲೂ ತನ್ನ ಭಿನ್ನ ರೀತಿಯ ಕಲಿಕೆಯಿಂದ ಗಮನ ಸೆಳೆದಿದೆ. ಎನ್​ಇಪಿ (ನ್ಯೂ ಎಜುಕೇಶನ್ ಪಾಲಿಸಿ) ಬರುವ ಮೊದಲಿನಿಂದಲೂ ಈ ಶಾಲೆಯಲ್ಲಿ ಕಲಿಕೆಯನ್ನು ಪ್ರಯೋಗಿಕ ರೀತಿಯಿಂದಲೇ ಮಾಡಲಾಗುತ್ತಿತ್ತು. ಈ ಶಾಲೆಯು ಸುಮಾರು 20 ವರ್ಷಗಳಿಂದಲೂ ಸಿಬಿಎಫ್​ಸಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಮಾನ್ಯತೆಗಾಗಿ ಪ್ರಯತ್ನ ಮಾಡುತ್ತಲೇ ಇತ್ತು. ಆದರೆ ದೊರೆತಿರಲಿಲ್ಲ. ಈಗ ಶಾಲೆಗೆ ಸಿಬಿಎಫ್​ಸಿ ಮಾನ್ಯತೆ ದೊರೆತಿದೆ.

2009 ರಲ್ಲಿ ಬಿಡುಗಡೆ ಆದ ‘3 ಇಡಿಯಟ್ಸ್’ ಸಿನಿಮಾ ಇದೇ ಶಾಲೆಯಲ್ಲಿ ಚಿತ್ರೀಕರಣವಾಗಿತ್ತು. ಆಗಿನಿಂದಲೂ ಈ ಶಾಲೆಯನ್ನು ರ್ಯಾಂಚೊ ಶಾಲೆ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ವಿದ್ಯಾರ್ಥಿಗಳು ಜಮ್ಮು ಕಾಶ್ಮೀರ ಬೋರ್ಡ್​ನ ಇತರೆ ಶಾಲೆಗಳಿಗಿಂತಲೂ ಭಿನ್ನರೀತಿಯ ಶಿಕ್ಷಣವನ್ನು ಕಲಿಯುತ್ತಿದ್ದರು. ಶಾಲೆಯು ರಾಷ್ಟ್ರೀಯ ಮಾನ್ಯತೆಗಾಗಿ ಪ್ರಯತ್ನ ಮಾಡುತ್ತಲೇ ಇತ್ತಾದರೂ ಜಮ್ಮು ಕಾಶ್ಮೀರ ಬೋರ್ಡ್​ನ ಕಾರಣದಿಂದ ಮಾನ್ಯತೆ ದೊರೆತಿರಲಿಲ್ಲ. ಆದರೆ ಕೊನೆಗೂ ಈಗ ಸಿಬಿಎಫ್​ಸಿ ಮಾನ್ಯತೆ ಸಿಕ್ಕಿದೆ.

ಇದನ್ನೂ ಓದಿ:ಶಾರುಖ್ ಖಾನ್ ರೀತಿಯೇ ಮನೆ ಬಿಡಲು ನಿರ್ಧರಿಸಿದ ಆಮಿರ್ ಖಾನ್; ಕಾರಣ ಏನು?

ಸಿಬಿಎಫ್​ಸಿ ಮಾನ್ಯತೆ ದೊರಕಲು ಜಮ್ಮು ಕಾಶ್ಮೀರ ಬೋರ್ಡ್​ನಿಂದ ‘ನೋ ಅಬ್ಜೆಕ್ಷನ್’ ಪ್ರಮಾಣ ಪತ್ರ ಪಡೆಯಬೇಕಿರುವ ನಿಯಮ ಇದೆ. ಆದರೆ ರ್ಯಾಂಚೊ ಶಾಲೆಗೆ ಜಮ್ಮು ಕಾಶ್ಮೀರ ಬೋರ್ಡ್ ಸುಮಾರು 20 ವರ್ಷದಿಂದಲೂ ನೋ ಅಬ್ಜೆಕ್ಷನ್ ಪ್ರಮಾಣ ಪತ್ರ ನೀಡಿಯೇ ಇರಲಿಲ್ಲವಂತೆ. ಇದೀಗ ಹಲವು ಪ್ರಯತ್ನಗಳ ಬಳಿಕ ಕೊನೆಗೂ ಮಾನ್ಯತೆ ದೊರೆತಿದ್ದ, ರ್ಯಾಂಚೊ ಶಾಲೆಯ ಮಕ್ಕಳು ಇನ್ನು ಮುಂದೆ ಸಿಬಿಎಫ್​ಸಿ ಪಠ್ಯವನ್ನು ಓದಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ