ಬಾಲಿವುಡ್ ಮಂದಿಗೆ ಮದುವೆ ಅನ್ನೋದು ಪ್ರತಿಷ್ಠೆಯ ವಿಚಾರ ಆಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮದುವೆ ಆಗುತ್ತಾರೆ. ಅಷ್ಟೇ ಅಲ್ಲ, ಭಾರತದ ಮೀಡಿಯಾದವರ ಕಣ್ಣಿಗೆ ಬೀಳಬಾರದು ಎನ್ನುವ ಕಾರಣಕ್ಕೆ ವಿದೇಶದಲ್ಲಿ ಹೋಗಿ ಮದುವೆ ಆದವರು ಸಾಕಷ್ಟಿದ್ದಾರೆ. ಹಲವು ಸೆಲೆಬ್ರಿಟಿಗಳು ಮದುವೆಗೆ ರಾಜಸ್ಥಾನವನ್ನು ಕೂಡ ಆಯ್ಕೆ ಮಾಡಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣವೀರ್ ಸಿಂಗ್ ಸೇರಿ ಅನೇಕ ಸೆಲೆಬ್ರಿಟಿಗಳು ತಮ್ಮ ಮದುವೆಗೆ ಖರ್ಚು ಮಾಡಿದ್ದೆಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಬಾಲಿವುಡ್ನ ಮೋಸ್ಟ್ ರೊಮ್ಯಾಂಟಿಕ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇಟಲಿಯಲ್ಲಿ ಮದುವೆ ಆದರು. ಇವರ ಮದುವೆ ನಡೆದಿದ್ದು 2018ರಲ್ಲಿ. ಇವರು ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೋದಲ್ಲಿ ಮದುವೆ ಆದರು. ಆ ಬಳಿಕ ಬೆಂಗಳೂರು ಹಾಗೂ ಮುಂಬೈನಲ್ಲಿ ಆರತಕ್ಷತೆ ನೆರವೇರಿತ್ತು. ಒಟ್ಟಾರೆ 75 ಕೋಟಿ ರೂಪಾಯಿ ಖರ್ಚು ಮಾಡಿದ್ದರು ಎನ್ನಲಾಗಿದೆ.
ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಮದುವೆ ನಡೆದಿದ್ದು ಇಟಲಿಯಲ್ಲಿ. ಇವರು ಮದುವೆಗೆ ನೂರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈ ದಂಪತಿಗೆ ವಮಿಕಾ ಹೆಸರಿನ ಮಗಳಿದ್ದಾಳೆ. ಈಗ ಅನುಷ್ಕಾ ಶರ್ಮಾ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಅವರು ರಾಜಸ್ಥಾನದ ಉಮೈದ್ ಭವನದಲ್ಲಿ ಮದುವೆ ಆಗಿದ್ದಾರೆ. ಕ್ರೈಸ್ತ ಹಾಗೂ ಹಿಂದೂ ಧರ್ಮದ ಪ್ರಕಾರ ಇವರ ಮದುವೆ ನಡೆದಿತ್ತು. ಇವರ ಮದುವೆಗೆ 3-5 ಕೋಟಿ ರೂಪಾಯಿ ಖರ್ಚಾಗಿತ್ತು ಎಂದು ವರದಿ ಆಗಿತ್ತು.
ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಇತ್ತೀಚೆಗೆ ರಾಜಸ್ಥಾನದಲ್ಲಿ ಮದುವೆ ಆಗಿದ್ದಾರೆ. ಇವರ ಮದುವೆ ನಡೆದಿದ್ದು ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ. ಇವರ ಮದುವೆಗೂ 3-5 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಇವರ ಮದುವೆಗೆ ಪ್ರಿಯಾಂಕಾ ಚೋಪ್ರಾ ಕೂಡ ಬರಬೇಕಿತ್ತು. ಆದರೆ, ಅವರು ಮದುವೆಗೆ ಹಾಜರಿ ಹಾಕಿರಲಿಲ್ಲ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಸಾಂಪ್ರದಾಯಿಕವಾಗಿ ಮದುವೆ ಆದರು. ಇವರು ಮದುವೆ ಆಗಿ ಹಲವು ವರ್ಷ ಕಳೆದಿವೆ. ಇವರ ಮದುವೆಗೆ ಆಗಿನ ಕಾಲದಲ್ಲೇ 6-9 ಕೋಟಿ ರೂಪಾಯಿ ಖರ್ಚಾಗಿದೆ. ಐಶ್ವರ್ಯಾ ರೈ ಬಚ್ಚನ್ಗೆ ಆರಾಧ್ಯಾ ಹೆಸರಿನ ಮಗಳಿದ್ದಾಳೆ.
ಬಾಲಿವುಡ್ನಲ್ಲಿ ನಡೆದ ಅದ್ದೂರಿ ಮದುವೆಗಳಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ವಿವಾಹ ಕೂಡ ಒಂದು. ಕತ್ರಿನಾಗಿಂತ ವಿಕ್ಕಿ ವಯಸ್ಸಿನಲ್ಲಿ ಕಿರಿಯರು. ಇವರ ಮದುವೆಗೆ 5-7 ಕೋಟಿ ರೂಪಾಯಿ ಖರ್ಚಾಗಿತ್ತು.
ರಾಜ್ ಕುಂದ್ರಾ ಅವರು ಉದ್ಯಮಿ. ಹಲವು ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. 2009ರಲ್ಲಿ ಇವರ ಮದುವೆ ನಡೆದಿತ್ತು. ಆಗ ಇವರು ವಿವಾಹಕ್ಕೆ ಖರ್ಚು ಮಾಡಿದ್ದು 7 ಕೋಟಿ ರೂಪಾಯಿ.
ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ರಾಜಸ್ಥಾನದ ಜೈಸಲ್ಮೇರ್ನ ಸೂರ್ಯಗಢ ಪ್ಯಾಲೆಸ್ನಲ್ಲಿ ಇವರ ಮದುವೆ ನಡೆದಿತ್ತು. ಇವರ ಕಲ್ಯಾಣ್ ಸಖಥ್ ಅದ್ದೂರಿಯಾಗಿತ್ತು. ಇವರ ಮದುವೆಗೆ ಖರ್ಚಾಗಿದ್ದು 8 ಕೋಟಿ ರೂಪಾಯಿ.
ಇದನ್ನೂ ಓದಿ: ‘ಬ್ರಹ್ಮಾಸ್ತ್ರ 2’ ಸೆಟ್ಟೇರಿತಾ? ವೈರಲ್ ಆಗುತ್ತಿದೆ ದೀಪಿಕಾ-ರಣಬೀರ್ ಕಪೂರ್ ಪೋಸ್ಟರ್
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರದ್ದು ಲವ್ ಮ್ಯಾರೆಜ್. ಸೈಫ್ಗೆ ಇದು ಎರಡನೇ ವಿವಾಹ. ಸೈಫ್ ಅವರು 12 ಕೋಟಿ ಖರ್ಚು ಮಾಡಿ ವಿವಾಹ ಆಗಿದ್ದರು. ಈ ದಂಪತಿಗೆ ಎರಡು ಮಕ್ಕಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ