ಇದೇ ಮೊದಲ ಬಾರಿ: ರಕ್ತ ಸಿಕ್ತ ಹಾರರ್ ಪ್ರೇಮಕತೆಯಲ್ಲಿ ರಶ್ಮಿಕಾ
Rashmika Mandanna: ನಟಿ ರಶ್ಮಿಕಾ ಮಂದಣ್ಣ ಯಶಸ್ಸಿನ ನಾಗಾಲೋಟ ಮುಂದುವರೆದಿದೆ. ಬಾಲಿವುಡ್ನ ಬಲು ಬೇಡಿಕೆಯ ನಟಿ ಅವರಾಗಿದ್ದಾರೆ. ಇಷ್ಟು ದಿನ ಬಬ್ಲಿ, ರೊಮ್ಯಾಂಟಿಕ್ ಪಾತ್ರಗಳಲ್ಲೇ ರಶ್ಮಿಕಾ ಹೆಚ್ಚಾಗಿ ನಟಿಸುತ್ತಿದ್ದರು. ಆದರೆ ಇದೀಗ ರಶ್ಮಿಕಾ ಮೊದಲ ಬಾರಿಗೆ ಹಾರರ್ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಗ್ಲಾಮರಸ್ ಆಗಿಯೂ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ(Rashmika Mandanna), ಬಾಲಿವುಡ್ನ ಸ್ಟಾರ್ ನಟಿ ಆಗುವತ್ತ ದಾಪುಗಾಲು ಹಾಕುತ್ತಿದ್ದಾರೆ. ರಶ್ಮಿಕಾ ನಟಿಸಿರುವ ಕಳೆದ ನಾಲ್ಕು ಸಿನಿಮಾಗಳಲ್ಲಿ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದು ಸಾವಿರ ಕೋಟಿ ಗಳಿಕೆ ಮಾಡಿವೆ. ರಶ್ಮಿಕಾ ಕೈಯಲ್ಲಿ ಈಹ ಹಲವು ಬಾಲಿವುಡ್ ಸಿನಿಮಾಗಳಿವೆ. ರಶ್ಮಿಕಾಗೆ ಒಂದಕ್ಕಿಂತಲೂ ಒಂದು ಅದ್ಭುತ ಪಾತ್ರಗಳು ಅರಸಿ ಬರುತ್ತಿವೆ. ಇದೀಗ ರಶ್ಮಿಕಾ ನಟನೆಯ ಹೊಸದೊಂದು ಹಿಂದಿ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಮೊದಲ ಬಾರಿಗೆ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ.
ರಶ್ಮಿಕಾ, ಸಿನಿಮಾ ರಂಗಕ್ಕೆ ಪ್ರವೇಶಿಸದಾಗಿನಿಂದಲೂ ಅವರು ಪಕ್ಕದ ಮನೆ ಹುಡುಗಿ ರೀತಿಯ ಬಬ್ಲಿ ಪಾತ್ರಗಳಲ್ಲೇ ನಟಿಸಿದ್ದಾರೆ. ಅವರ ಮಾತ್ರಗಳು ರೊಮ್ಯಾಂಟಿಕ್ ಮಾದರಿಯ ಪಾತ್ರಗಳಾಗಿವೆ. ಆದರೆ ಇದೀಗ ಮೊದಲ ಬಾರಿಗೆ ಹಾರರ್ ಸಿನಿಮಾನಲ್ಲಿ ರಶ್ಮಿಕಾ ನಟಿಸಿದ್ದು, ರಶ್ಮಿಕಾ ಸ್ವತಃ ಪ್ರೇತದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ರಶ್ಮಿಕಾ ಭಯ ಹುಟ್ಟಿಸುವ ಪ್ರೇತವಲ್ಲ ಬದಲಿಗೆ ಪ್ರೀತಿ ಹುಟ್ಟಿಸುವ ಅಂದದ ಪ್ರೇತ.
ರಶ್ಮಿಕಾ ‘ಥಮ’ ಹೆಸರಿನ ಹಾರರ್ ಹಿಂದಿ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕ. ಈ ಹಿಂದೆ ‘ಸ್ತ್ರೀ’ ಸೇರಿದಂತೆ ಇನ್ನೂ ಕೆಲವು ಹಾರರ್ ಸಿನಿಮಾಗಳನ್ನು ನಿರ್ಮಿಸಿದ್ದ ತಂಡವೇ ‘ಥಮ’ ಸಿನಿಮಾವನ್ನು ಸಹ ನಿರ್ಮಾಣ ಮಾಡಿದೆ. ಜನುಮ-ಜನುಮಾಂತರದ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿದೆ. ಪ್ರಿಯಕರನಿಗಾಗಿ ನೂರಾರು ವರ್ಷಗಳಿಂದ ಕಾಯುತ್ತಿರುವ ‘ಗ್ಲಾಮರಸ್’ ದೆವ್ವದ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.
ಇದನ್ನೂ ಓದಿ:ಅಮೆರಿಕದಲ್ಲಿ ರಶ್ಮಿಕಾ ಕೈ ಹಿಡಿದು ನಡೆಸಿದ ವಿಜಯ್ ದೇವರಕೊಂಡ
ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ರಶ್ಮಿಕಾ ತುಸು ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆಯುಷ್ಮಾನ್ ಜೊತೆಗಿನ ಲಿಪ್ ಲಾಕ್ ದೃಶ್ಯವೂ ಸಹ ಟೀಸರ್ನಲ್ಲಿದೆ. ಟೀಸರ್ ನೋಡಿದವರಿಗೆ ಇದೊಂದು ರಕ್ತ-ಸಿಕ್ತ ಮತ್ತು ಭಯ ಹುಟ್ಟಿಸುವ ಪ್ರೇಮಕತೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಸಿನಿಮಾದ ವಿಲನ್ ಪಾತ್ರದಲ್ಲಿ ನವಾಜುದ್ಧೀನ್ ಸಿದ್ಧಿಖಿ ನಟಿಸಿದ್ದಾರೆ.
‘ಥಮ’ ಸಿನಿಮಾವನ್ನು ಆದಿತ್ಯ ಸರ್ಪೋರ್ದಾರ್ ನಿರ್ದೇಶನ ಮಾಡಿದ್ದಾರೆ. ಹಾರರ್ ಸಿನಿಮಾಗಳಿಂದಲೇ ಹೆಸರು ಮಾಡಿರುವ ಮ್ಯಾಡ್ಡಾಕ್ ಫಿಲಮ್ಸ್ನವರು ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




