ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾ ‘ಥಮ’ ಬಿಡುಗಡೆ: ಸಿನಿಮಾ ಹೇಗಿದೆ?

Rashmika Mandanna: ನಟಿ ರಶ್ಮಿಕಾ ಮಂದಣ್ಣ ನಟನೆಯ ಮೊದಲ ಹಾರರ್ ಸಿನಿಮಾ ‘ಥಮ’ ಇಂದು ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕರಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ನವಾಜುದ್ಧೀನ್ ಸಿದ್ಧಿಖಿ ವಿಲನ್. ಮೊದಲ ದಿನ ಸಿನಿಮಾ ನೋಡಿದ ಮಂದಿ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಲ್ಲಿದೆ ನೋಡಿ ಸಿನಿಮಾ ವಿಮರ್ಶೆ.

ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾ ‘ಥಮ’ ಬಿಡುಗಡೆ: ಸಿನಿಮಾ ಹೇಗಿದೆ?
Rashmika Mandanna

Updated on: Oct 21, 2025 | 4:37 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಹೊಸ ಹಿಂದಿ ಸಿನಿಮಾ ಇಂದು (ಅಕ್ಟೋಬರ್ 21) ಬಿಡುಗಡೆ ಆಗಿದೆ. ರಶ್ಮಿಕಾ ಮಂದಣ್ಣ ನಟನೆಯ ‘ಥಮ’ ಸಿನಿಮಾ ಬಿಡುಗಡೆ ಆಗಿದ್ದು, ಇದು ಅವರ ನಟನೆಯ ಮೊದಲ ಹಾರರ್ ಸಿನಿಮಾ ಆಗಿದೆ. ಸಿನಿಮಾನಲ್ಲಿ ದೆವ್ವದ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕ. ಸಿನಿಮಾ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಹೇಗಿದೆ ಈ ಸಿನಿಮಾ, ಸಿನಿಮಾ ಹಿಟ್ ಆಗುತ್ತಾ ಇಲ್ಲವಾ? ಇಲ್ಲಿದೆ ಸಿನಿಮಾದ ಟ್ವಿಟ್ಟರ್ ವಿಮರ್ಶೆ…

ಹರ್ಷವರ್ಧನ್ ರಾಮ್ ಎಂಬುವರು ಟ್ವೀಟ್ ಮಾಡಿ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಥಮ’ ಸಿನಿಮಾ ಒಳ್ಳೆಯ ಕಾಮಿಡಿ-ಹಾರರ್ ಎಂಟರ್ಟೈನರ್ ಆಗಿದೆ. ಸಿನಿಮಾನಲ್ಲಿ ಒಳ್ಳೆಯ ಹಾಸ್ಯ, ಥ್ರಿಲ್ಲಿಂಗ್ ಅಂಶಗಳು ಮತ್ತು ಒಳ್ಳೆಯ ರೊಮ್ಯಾನ್ಸ್ ಸಹ ಇದೆ. ಇದು ನಿಜಕ್ಕೂ ಒಳ್ಳೆಯ ದೀಪಾವಳಿ ಸಿನಿಮಾ ಎಂದಿದ್ದಾರೆ.

ವಸೀಮ್ ರೆಜಾ ಎಂಬುವರು ಟ್ವೀಟ್ ಮಾಡಿ, ಸಿನಿಮಾಕ್ಕೆ ಐದರಲ್ಲಿ ನಾಲ್ಕು ಸ್ಟಾರ್​​ಗಳನ್ನು ನೀಡಿದ್ದಾರೆ. ‘ಥಮ’ ಖಂಡಿತ ನೋಡಲೇ ಬೇಕಾದ ಸಿನಿಮಾ. ಅದ್ಭುತವಾದ ಆಕ್ಷನ್ ಇರುವ ಆಳವಾದ ಭಾವನಾತ್ಮಕ ದೃಶ್ಯಗಳನ್ನು ಒಳಗೊಂಡಿರುವ. ಸಿನಿಮಾನಲ್ಲಿ ಬರುವ ಬೇತಾಳ ಮತ್ತು ತೋಳದ ನಡುವಿನ ಫೈಟ್ ಅದ್ಭುತವಾಗಿದೆ ಎಂದಿದ್ದಾರೆ. ಒಟ್ಟಾರೆಯಾಗಿ ಇದೊಂದು ಒಳ್ಳೆಯ ಸಿನಿಮಾ ಎಂದಿದ್ದಾರೆ.

ಇಟ್ಸ್ ಸಿನಿಮಾ ಹೆಸರಿನ ಟ್ವಿಟ್ಟರ್ ಖಾತೆಯಲ್ಲಂತೂ ಐದಕ್ಕೆ ನಾಲ್ಕೂವರೆ ಸ್ಟಾರ್​​ಗಳನ್ನು ನೀಡಲಾಗಿದೆ. ಮ್ಯಾಡ್​​ಲಾಕ್ ಸಂಸ್ಥೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಟ್ಟಿದೆ. ಹಾಸ್ಯ-ಹಾರರ್-ರೊಮ್ಯಾನ್ಸ್​​ನ ಒಂದು ಒಳ್ಳೆಯ ಮಿಶ್ರಣ ಈ ಸಿನಿಮಾ. ಒಳ್ಳೆಯ ಪಯಣಕ್ಕೆ ಈ ಸಿನಿಮಾ ಕರೆದುಕೊಂಡು ಹೋಗುತ್ತದೆ. ಸಿನಿಮಾ ನೋಡುವಾಗ ನಿರೀಕ್ಷೆ ಮಾಡದೇ ಇರುವ ತಿರುವುಗಳು ಬರುತ್ತವೆ’ ಎಂದಿದ್ದಾರೆ.

ಫಿಲ್ಮಿ ಗೌತಮ್ ಎಂಬುವರು ಟ್ವೀಟ್ ಮಾಡಿ, ಸಿನಿಮಾದ ಕೆಲವು ಭಾಗಗಳು ಬಹಳ ಚೆನ್ನಾಗಿದೆ. ಆದರೆ ಇಡೀ ಸಿನಿಮಾ ಆಗಿ ಪ್ರೇಕ್ಷಕನ ಮೇಲೆ ದೊಡ್ಡ ಪರಿಣಾಮವಾಗಲಿ, ಪ್ರಭಾವ ಆಗಲಿ ಬೀರುವುದಿಲ್ಲ. ಸಿನಿಮಾದ ಕೆಲವೆಡೆ ಒಳ್ಳೆಯ ನಗು ತರಿಸುವ ದೃಶ್ಯಗಳಿವೆ ಆದರೆ ಅವು ಕಡಿಮೆ ಇವೆ. ಈ ಸಿನಿಮಾ ‘ಬೇಡಿಯಾ 2’, ‘ಸ್ತ್ರೀ 3’ ಮತ್ತು ‘ಶಕ್ತಿ ಶಾಲಿನಿ’ ಸಿನಿಮಾಗಳಿಗೆ ವೇದಿಕೆ ನಿರ್ಮಿಸಿದೆ ಆದರೆ ನಾವು ಈಗ ನೋಡಲು ಬಂದಿರುವ ‘ಥಮ’ ಸಿನಿಮಾ ಅನ್ನು ಸಪ್ಪೆ ಮಾಡಲಾಗಿದೆ. ಮ್ಯಾಡ್​​ಲಾಕ್ ಹಾರರ್ ಸಿನಿಮಾ ಯೂನಿವರ್ಸ್​​ನ ಕಳಪೆ ಸಿನಿಮಾ ಇದು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Tue, 21 October 25