Asrani: ಬಾಲಿವುಡ್ನ ಖ್ಯಾತ ನಟ, ಶೋಲೆ ಖ್ಯಾತಿಯ ಗೋವರ್ಧನ್ ಅಸ್ರಾನಿ ನಿಧನ
ಇನ್‌ಸ್ಟಾಗ್ರಾಮ್‌ನಲ್ಲಿ ದೀಪಾವಳಿ ಶುಭಾಶಯಗಳನ್ನು ಹಂಚಿಕೊಂಡ ಕೆಲವೇ ಗಂಟೆಗಳ ನಂತರ ಬಾಲಿವುಡ್ನ ಹಿರಿಯ ನಟ ಅಸ್ರಾನಿ ಮುಂಬೈನಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗೋವರ್ಧನ್ ಅಸ್ರಾನಿ ಶೋಲೆ ಚಿತ್ರದಲ್ಲಿ ಜೈಲರ್ ಪಾತ್ರದಲ್ಲಿ ನಟಿಸಿ ಪ್ರಸಿದ್ಧರಾಗಿದ್ದರು. ಭೂಲ್ ಭುಲೈಯಾ, ಧಮಾಲ್, ಬಂಟಿ ಔರ್ ಬಬ್ಲಿ 2, ಆಲ್ ದಿ ಬೆಸ್ಟ್ ಮತ್ತು ವೆಲ್‌ಕಮ್ ಮುಂತಾದ ಹಲವಾರು ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಮುಂಬೈ, ಅಕ್ಟೋಬರ್ 20: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಮತ್ತು ನಿರ್ದೇಶಕ ಗೋವರ್ಧನ್ ಅಸ್ರಾನಿ (Govardhan Asrani) ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ನಟ ಅಸ್ರಾನಿ ಇಂದು ಸಂಜೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ತಮ್ಮ ಅಭಿಮಾನಿಗಳಿಗೆ ಇನ್ಸ್ಟಾಗ್ರಾಂನಲ್ಲಿ ದೀಪಾವಳಿಯ (Deepavali) ಶುಭಾಶಯಗಳನ್ನು ಕೋರಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ನಿಧನದ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
5 ದಶಕಗಳಿಗೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದ ಅಸ್ರಾನಿ 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹಾಸ್ಯ ಪಾತ್ರಗಳಿಂದಾಗಿ ಅವರು ಜನಪ್ರಿಯತೆ ಗಳಿಸಿದ್ದರು. 350ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಹಿರಿಯ ಬಾಲಿವುಡ್ ನಟ ಅಸ್ರಾನಿ ಅವರ ಸಾವಿಗೆ ನಿಖರವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ: ಶಾರುಖ್ ಖಾನ್ ಪಾರ್ಟಿಯಲ್ಲಿ ಆದ ‘ಕಹಿ’ ಅನುಭವದ ಬಗ್ಗೆ ಕಾಂತಾರ ನಟ ಗುಲ್ಷನ್ ದೇವಯ್ಯ ಮಾತು
ಶೋಲೆ ಸಿನಿಮಾದಿಂದ ಖ್ಯಾತಿ:
ಬಾಲಿವುಡ್ನ ಜನಪ್ರಿಯ ಸಿನಿಮಾವಾದ ಶೋಲೆಯಲ್ಲಿ ಜೈಲರ್ ಪಾತ್ರ ಮಾಡಿದ್ದ ಗೋವರ್ಧನ್ ಅಸ್ರಾನಿ ಆ ಸಿನಿಮಾದಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದರು. ಭೂಲ್ ಭುಲೈಯಾ, ಧಮಾಲ್, ಬಂಟಿ ಔರ್ ಬಬ್ಲಿ 2, ಆಲ್ ದಿ ಬೆಸ್ಟ್ ಮತ್ತು ವೆಲ್‌ಕಮ್ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ನಟಿ ಪರಿಣಿತಿ ಚೋಪ್ರಾ
ಅಸ್ರಾನಿ ಅವರ ಹಠಾತ್ ನಿಧನ ಬಾಲಿವುಡ್ ಉದ್ಯಮಕ್ಕೆ ಆಘಾತವನ್ನುಂಟು ಮಾಡಿದೆ. ಇಂದು ಸಂಜೆ ಸಾಂತಾಕ್ರೂಜ್‌ನ ಶಾಸ್ತ್ರಿ ನಗರದ ಸ್ಮಶಾನದಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅಸ್ರಾನಿ ಅವರ ಅಂತ್ಯಕ್ರಿಯೆ ನಡೆಯಿತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ನನ್ನ ಸಾವಿನ ಸುದ್ದಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಅವರು ಈಗಾಗಲೇ ತಮ್ಮ ಪತ್ನಿ ಮಂಜು ಅಸ್ರಾನಿ ಅವರಿಗೆ ಹೇಳಿದ್ದರು. ಆದ್ದರಿಂದ, ಅವರ ಕುಟುಂಬವು ಯಾವುದೇ ಔಪಚಾರಿಕ ಘೋಷಣೆಯಿಲ್ಲದೆ ಅವರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ನಡೆಸಿತು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 pm, Mon, 20 October 25




