AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ಪಾರ್ಟಿಯಲ್ಲಿ ಆದ ‘ಕಹಿ’ ಅನುಭವದ ಬಗ್ಗೆ ಕಾಂತಾರ ನಟ ಗುಲ್ಷನ್ ದೇವಯ್ಯ ಮಾತು

Shah Rukh Khan-Gulshan Devaiah: ಶಾರುಖ್ ಖಾನ್ ಅವರ ಮನೆಯಲ್ಲಿ ನಡೆಯುವ ಪಾರ್ಟಿ ಬಗ್ಗೆ ಬಾಲಿವುಡ್​​ನಲ್ಲಿ ಕತೆಗಳೇ ಇವೆ. ಶಾರುಖ್ ಖಾನ್ ಪಾರ್ಟಿಯನ್ನು ಅಟೆಂಡ್ ಮಾಡುವುದು ಬಾಲಿವುಡ್​​ನಲ್ಲಿ ಗೌರವದ ಸಂಕೇತ ಎನಿಸಿಕೊಂಡಿದೆ. ಅಂದಹಾಗೆ ಕನ್ನಡದ ನಟ ಗುಲ್ಷನ್ ದೇವಯ್ಯ ಅವರು ಒಮ್ಮೆ ಶಾರುಖ್ ಖಾನ್ ಪಾರ್ಟಿಯಲ್ಲಿ ಭಾಗಿ ಆಗಿದ್ದರಂತೆ. ಅಲ್ಲಿ ಅವರಿಗೆ ಆತ ವಿಚಿತ್ರ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

ಶಾರುಖ್ ಖಾನ್ ಪಾರ್ಟಿಯಲ್ಲಿ ಆದ ‘ಕಹಿ’ ಅನುಭವದ ಬಗ್ಗೆ ಕಾಂತಾರ ನಟ ಗುಲ್ಷನ್ ದೇವಯ್ಯ ಮಾತು
Gulshan Srk
ಮಂಜುನಾಥ ಸಿ.
|

Updated on:Oct 19, 2025 | 5:03 PM

Share

ಗುಲ್ಷನ್ ದೇವಯ್ಯ, ಬಾಲಿವುಡ್​​ನಲ್ಲಿ (Bollywood) ಹೆಸರು ಮಾಡಿರುವ ಕನ್ನಡದ ನಟ. ಇತ್ತೀಚೆಗೆ ಬಿಡುಗಡೆ ಆಗಿ ಭಾರಿ ಯಶಸ್ಸು ಕಾಣುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಕುಲಶೇಖರನ ಪಾತ್ರದಲ್ಲಿ ಸಖತ್ ಆಗಿ ನಟಿಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಬರುವ ಮುಂಚೆ ಎಷ್ಟೋ ಜನರಿಗೆ ಗುಲ್ಷನ್ ದೇವಯ್ಯ ಅಪ್ಪಟ ಕನ್ನಡದ ನಟ ಎಂಬುದು ಗೊತ್ತೆ ಇರಲಿಲ್ಲ. ಗುಲ್ಷನ್, ಹಿಂದಿಯಲ್ಲಿ ಹಲವು ಅದ್ಭುತ ನಿರ್ದೇಶಕರು, ನಟರುಗಳೊಟ್ಟಿಗೆ ಕೆಲಸ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಗುಲ್ಷನ್ ಅವರು ಶಾರುಖ್ ಖಾನ್ ಮನೆಗೆ ಪಾರ್ಟಿಗೆ ಹೋಗಿದ್ದಾಗ ತಮಗೆ ಆದ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಶಾರುಖ್ ಖಾನ್ ಆತಿಥ್ಯದ ಬಗ್ಗೆ ಬಾಲಿವುಡ್ ನಲ್ಲಿ ಬಹಳ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಾರೆ. ಶಾರುಖ್ ಖಾನ್ ಮನೆಗೆ ಹೋದರೆ ಅತಿಥಿಗಳನ್ನು ಬಲು ಗೌರವದಿಂದ ನೋಡಿಕೊಳ್ಳುತ್ತಾರೆ. ಶಾರುಖ್ ಖಾನ್​ ಪ್ರತಿಯೊಬ್ಬರನ್ನು ಬಲು ಆತ್ಮೀಯತೆಯಿಂದ ಮಾತನಾಡಿಸುತ್ತಾರೆ ಎನ್ನಲಾಗುತ್ತದೆ. ಶಾರುಖ್ ಖಾನ್ ಮನೆಯ ಪಾರ್ಟಿ ಅಟೆಂಡ್ ಮಾಡುವುದು ಬಾಲಿವುಡ್​ನ ಹಲವರ ಪಾಲಿಗೆ ಗೌರವದ ವಿಚಾರವೇ ಆಗಿದೆ. ಅಂಥಹಾ ಒಂದು ಪಾರ್ಟಿಯಲ್ಲಿ ಗುಲ್ಷನ್ ದೇವಯ್ಯ ಭಾಗಿ ಆಗಿದ್ದರಂತೆ.

ಗುಲ್ಷನ್ ದೇವಯ್ಯ ಅವರು ಒಮ್ಮೆ ಶಾರುಖ್ ಖಾನ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿ ಆಗಿದ್ದರಂತೆ. ಸುಮಾರು ಮೂರು ಗಂಟೆಗಳ ಕಾಲ ಅವರು ಅಲ್ಲಿದ್ದರಂತೆ. ಆದರೆ ಅಲ್ಲಿದ್ದ ಅಷ್ಟೂ ಹೊತ್ತು ನಾನು ಇಲ್ಲಿಗೇಕೆ ಬಂದೆ, ನಾನು ಇಲ್ಲಿ ಬರಬೇಕಾದ ವ್ಯಕ್ತಿ ಅಲ್ಲ. ನನ್ನ ಜಾಗ ಇದಲ್ಲ ಎಂದೇ ಅನಿಸುತ್ತಿತ್ತಂತೆ. ಗುಲ್ಷನ್ ಅವರೇ ಹೇಳಿಕೊಂಡಂತೆ. ಶಾರುಖ್ ಖಾನ್ ಅಂದು ಗುಲ್ಷನ್ ಅವರನ್ನು ಬಲು ಆತ್ಮೀಯವಾಗಿ ಮಾತನಾಡಿಸಿದರಂತೆ. ಗೌರಿ ಖಾನ್ ಸಹ ಬಲು ಆದರದಿಂದ ನೋಡಿಕೊಂಡರಂತೆ. ಆದರೂ ಸಹ ಗುಲ್ಷನ್​​ಗೆ ಬಹಳ ಹಿಂಜರಿಕೆ ಅಂದಿನ ಪಾರ್ಟಿಯಲ್ಲಿ ಕಾಡಿತಂತೆ.

ಇದನ್ನೂ ಓದಿ:ಶಾರುಖ್ ಖಾನ್ ಜೊತೆ ತಮ್ಮನ್ನು ಹೋಲಿಸಿಕೊಂಡ ಕಂಗನಾ ರನೌತ್

‘ಅಲ್ಲಿದ್ದವರೆಲ್ಲ ದೊಡ್ಡ ಹೆಸರು ಮಾಡಿದ ಸಾಧಕರು. ಅಲ್ಲಿ ಇರುವವರಲ್ಲಿ ಅತ್ಯಂತ ಕಡಿಮೆ ಸಾಧನೆ ಮಾಡಿದವ ಎಂದರೆ ನಾನೇ. ಹಾಗಾಗಿ ನನಗೆ ಒಂದು ರೀತಿಯ ‘ಔಟ್ ಆಫ್ ಪ್ಲೇಸ್’ ಎನಿಸತೊಡಗಿತು. ನನಗೆ ಆತ್ಮವಿಶ್ವಾಸವೇ ಹೋದಂತೆ ಆಗಿತ್ತು. ಅಂದು ನಾನು ಹಲವು ದೊಡ್ಡ ಕಲಾವಿದರನ್ನು ಭೇಟಿ ಮಾಡಿದೆ. ಆದರೆ ಎಲ್ಲರನ್ನೂ ಒಂದು ರೀತಿ ಅಳುಕಿನಿಂದಲೇ ಮಾತನಾಡಿಸಿದೆ. ಅದೇ ದಿನ ನನಗೆ ಅನಿಸಿತು, ನಾನು ಏನನ್ನಾದರೂ ದೊಡ್ಡದಾಗಿ ಮಾಡಬೇಕು ಎಂದು’ ಎಂದು ಗುಲ್ಷನ್ ಹೇಳಿದ್ದಾರೆ.

ಅದೇ ದಿನ ಪಾರ್ಟಿಯಲ್ಲಿ ಗುಲ್ಷನ್ ಅವರು ಆಸ್ಟ್ರೇಲಿಯಾದ ಖ್ಯಾತ ನಟ ಜೋಯಿಲ್ ಎಡ್ಗರ್ಟನ್ ಅವರನ್ನು ಭೇಟಿ ಆದೆ. ಅವರೊಟ್ಟಿಗೆ ಸಾಕಷ್ಟು ಸಮಯ ನಾನು ಮಾತನಾಡಿದೆ. ಅವರು ಮಾತ್ರವೇ ಅಲ್ಲದೆ ಹಿಂದಿ ಚಿತ್ರರಂಗದ ಹಲವು ದಿಗ್ಗಜರನ್ನು ನಾನು ಭೇಟಿ ಆದೆ ಆದರೆ ಬರೀ ಸಾಧಕರೆ ಇದ್ದ ಕೋಣೆಯಲ್ಲಿ ನಾನು ಹೊರಗಿನವನು ಅನ್ನಿಸಲು ಶುರುವಾಯ್ತು. ಆದರೆ ಈಗ ಹಾಗೆಲ್ಲ ಆಗುವುದಿಲ್ಲ. ಈಗ ನನಗೆ ಒಂದು ಐಡೆಂಟಿಟಿ ದೊರೆತಿದೆ. ಸಾಕಷ್ಟು ಆತ್ಮವಿಶ್ವಾಸ ಬಂದಿದೆ’ ಎಂದಿದ್ದಾರೆ ಗುಲ್ಷನ್ ದೇವಯ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Sun, 19 October 25

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!