ರವೀನಾಗೆ ಇನ್ನೂ ಮಾಸಿಲ್ಲ ಆಘಾತ; ಸೆಲ್ಫಿ ಕೇಳಿದಕ್ಕೆ ಭಯದಿಂದ ಓಡಿಹೋದ ನಟಿ
ಲಂಡನ್ ಬೀದಿಗಳಲ್ಲಿ ರವೀನಾ ಓಡಾಡುತ್ತಿದ್ದರು. ಆಗ ಬಂದ ಕೆಲವರು ಸೆಲ್ಫಿ ಕೇಳಿದ್ದಾರೆ. ಆದರೆ, ಇದನ್ನು ಅವರು ಮನ್ನಿಸಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಮುಂಬೈನ ಬಂದ್ರಾದ ಅಪಘಾತದಿಂದ ಆದ ಆಘಾತದಿಂದ ಇನ್ನೂ ಅವರು ಹೊರಬಂದಿಲ್ಲವಂತೆ.
ರವೀನಾ ಟಂಡನ್ ಅವರು ಇತ್ತೀಚೆಗೆ ಚರ್ಚೆ ಆಗಿದ್ದಾರೆ. ಅವರು ಲಂಡನ್ಗೆ ತೆರಳಿದ್ದಾಗ ಕೆಲ ಫ್ಯಾನ್ಸ್ ಫೋಟೋ ಕೇಳಿದ್ದರು. ಆದರೆ ಇದನ್ನು ಅವರು ನಿರಾಕರಿಸಿದ್ದರು. ‘ರವೀನಾಗೆ ಧಿಮಾಕು’ ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಈ ಬಗ್ಗೆ ರವೀನಾ ಟಂಡನ್ ಅವರು ಮಾತನಾಡಿದ್ದಾರೆ. ಮುಂಬೈನ ಬಂದ್ರಾದ ಅಪಘಾತದಿಂದ ಆದ ಆಘಾತದಿಂದ ಇನ್ನೂ ಅವರು ಹೊರಬಂದಿಲ್ಲ.
ಲಂಡನ್ ಬೀದಿಗಳಲ್ಲಿ ರವೀನಾ ಓಡಾಡುತ್ತಿದ್ದರು. ಆಗ ಬಂದ ಕೆಲವರು ಸೆಲ್ಫಿ ಕೇಳಿದ್ದಾರೆ. ಆದರೆ, ಇದನ್ನು ಅವರು ಮನ್ನಿಸಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ನಾನು ಲಂಡನ್ನಲ್ಲಿ ಓಡಾಡುತ್ತಿರುವಾಗ ಕೆಲವರು ಬಂದು ಸೆಲ್ಫಿ ಕೇಳಿದರು. ನಾನು ನೋ ಹೇಳಿ ವೇಗವಾಗಿ ನಡೆದು ಹೊರಟೆ. ಆಗ ನಾನು ಒಬ್ಬಂಟಿಯಾಗಿದ್ದೆ. ಬಾಂದ್ರಾದಲ್ಲಿ ಕೆಲ ತಿಂಗಳ ಹಿಂದೆ ನಡೆದ ಘಟನೆಯ ಆಘಾತ ಇನ್ನೂ ಹಾಗೆಯೇ ಇದೆ. ನನ್ನ ಜೊತೆ ಜನರು ಇರುವಾಗ ಏನೂ ತೊಂದರೆ ಇಲ್ಲ. ಆದರೆ, ಒಬ್ಬಂಟಿ ಆಗಿದ್ದಾಗ ನಾನು ನರ್ವಸ್ ಆಗುತ್ತೇನೆ’ ಎಂದಿದ್ದಾರೆ ಅವರು.
‘ಅವರು ಮುಗ್ಧ ಫ್ಯಾನ್ಸ್ ಆಗಿದ್ದರು. ಹೀಗಾಗಿ ನಾನು ಸೆಲ್ಫಿ ಕೊಡಬಹುದಿತ್ತು. ಆದರೆ, ಆ ಸಂದರ್ಭದಲ್ಲಿ ನಾನು ಭಯಗೊಂಡೆ. ಹೀಗಾಗಿ, ವೇಗವಾಗಿ ನಡೆದು ಸಾಗಿದೆ. ನಾನು ಸಹಾಯಕ್ಕೆ ಭದ್ರತಾ ಸಿಬ್ಬಂದಿಯನ್ನೂ ಕರೆದೆ. ಸೆಲ್ಫಿ ಕೇಳಿದವರು ಇದನ್ನು ಓದುತ್ತಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಅವರಿಗೆ ಬೇಸರ ಮಾಡುವುದು ನನ್ನ ಉದ್ದೇಶ ಅಲ್ಲ. ನಿಜಕ್ಕೂ ಕ್ಷಮೆ ಇರಲಿ. ಮುಂದೊಂದು ದಿನ ನಿಮ್ಮ ಭೇಟಿ ಮಾಡಿ ಸೆಲ್ಫಿ ತೆಗೆದುಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರವೀನಾ ಟಂಡನ್ ಹೆಸರು ಬಂದಿದ್ದು ಹೇಗೆ? ಇದರಿಂದ ಹಿಂದಿದೆ ವಿಚಿತ್ರ ಕಹಾನಿ
ಇತ್ತೀಚೆಗೆ ರವೀನಾ ಅವರು ಕಾರು ಅಪಘಾತಕ್ಕೆ ಒಳಗಾಗಿತ್ತು. ಈ ವೇಳೆ ರವೀನಾ ಕಾರು ಚಾಲಕ ನಮ್ಮ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದ ಎಂದು ದೂರುದಾರರು ಆರೋಪಿಸಿದ್ದರು. ಚಾಲಕನನ್ನು ರಕ್ಷಿಸುವುದಕ್ಕಾಗಿ ಹೊರಬಂದ ನಟಿ ರವೀನಾ ಅವರ ಮೇಲೂ ಹಲ್ಲೆ ನಡೆದಿತ್ತು. ಜೂನ್ ತಿಂಗಳಲ್ಲಿ ಈ ಘಟನೆ ನಡೆದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.