ರವೀನಾ ಟಂಡನ್ ಹೆಸರು ಬಂದಿದ್ದು ಹೇಗೆ? ಇದರಿಂದ ಹಿಂದಿದೆ ವಿಚಿತ್ರ ಕಹಾನಿ
Raveena Tandon: ರವೀನಾ ಟಂಡನ್ ಕನ್ನಡಕ್ಕೆ ಚಿರಪರಿಚಿತರು. ಈ ಹಿಂದೆ ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದ ರವೀನಾ, ‘ಕೆಜಿಎಫ್’ ಸಿನಿಮಾದ ರಮಿಕಾ ಪಾತ್ರದಲ್ಲಿ ನಟಿಸಿದ ಬಳಿಕವಂತೂ ಸಖತ್ ಜನಪ್ರಿಯರಾದರು. ಅಂದಹಾಗೆ ರವೀನಾ ಟಂಡನ್ಗೆ ಈ ಹೆಸರು ಬಂದಿದ್ದು ಹೇಗೆ? ವಿಶೇಷ ಕತೆ ಅದರ ಹಿಂದೆ.
ನಟಿ ರವೀನಾ ಟಂಡನ್ ಅವರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ‘ಕೆಜಿಎಫ್ 2’ ಚಿತ್ರದ ಮೂಲಕ ಅವರು ಮತ್ತೊಮ್ಮೆ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದರು. ಸಾಮಾನ್ಯವಾಗಿ ಅನೇಕರ ಹೆಸರನ್ನು ಸಮಯ ಮತ್ತಿತ್ಯಾದಿ ವಿಚಾರಗಳನ್ನು ಆಧರಿಸಿ ಇಡಲಾಗುತ್ತದೆ. ಇನ್ನೂ ಕೆಲವರು ಚಿತ್ರರಂಗಕ್ಕೆ ಬಂದ ಬಳಿಕ ಹೆಸರು ಬದಲಿಸಿಕೊಳ್ಳುತ್ತಾರೆ. ಆದರೆ, ರವೀನಾ ಹೆಸರನ್ನು ಇಟ್ಟಿದ್ದರ ಹಿಂದಿನ ಕಹಾನಿ ಮಾತ್ರ ವಿಚಿತ್ರವಾಗಿದೆ.
ರವೀನಾ ಟಂಡನ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಪತ್ತರ್ ಕೆ ಫೂಲ್’ ಚಿತ್ರದ ಮೂಲಕ. ಈ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಅಂದರೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 33 ವರ್ಷಗಳು ಕಳೆದಿವೆ ಎನ್ನಬಹುದು. 1992ರಲ್ಲಿ ‘ಜೀನಾ ಮರ್ನಾ ತೆರೆ ಸಂಗ್’ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ. 93ರ ಬಳಿಕ ಚಿತ್ರರಂಗದಲ್ಲಿ ಅವರು ಸಖತ್ ಬ್ಯುಸಿ ಆದರು.
ಇದನ್ನೂ ಓದಿ:ರವೀನಾ ಟಂಡನ್ ವಿಡಿಯೋ ವೈರಲ್ ಮಾಡಿದ ವ್ಯಕ್ತಿ ಮೇಲೆ ಮಾನನಷ್ಟ ಮೊಕದ್ದಮೆ
ರವೀನಾ ಹೆಸರು ಬಂದಿದ್ದು ಹೇಗೆ? ಆ ಪ್ರಶ್ನೆಗೂ ಉತ್ತರ ಇದೆ. ರವೀನಾ ಜನಿಸಿದ್ದು 1972ರಲ್ಲಿ. ಅವರ ತಂದೆಯ ಹೆಸರು ರವಿ ಟಂಡನ್. ತಾಯಿ ಹೆಸರು ವೀಣಾ. ಇಬ್ಬರ ಹೆಸರನ್ನು ಸೇರಿಸಿ ರವೀನಾ ಎಂದು ಇಡಲಾಯಿತು. ಈ ವಿಚಾರದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇನ್ನು, ರವೀನಾ ಅವರ ತಂದೆ ರವಿ ಅವರು ಖ್ಯಾತ ನಿರ್ದೇಶಕರು ಹಾಗೂ ನಿರ್ಮಾಪಕರು. ಅವರು ನಿರ್ದೇಶಕರಾಗಿ ‘ನಜ್ರಾನಾ’ ಹೆಸರಿನ ಸಿನಿಮಾನ ಅವರು ನಿರ್ದೇಶನ ಮಾಡಿದರು.
ರವೀನಾ ಅವರು ಈ ಮೊದಲು ‘ಉಪೇಂದ್ರ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 1999ರಲ್ಲಿ ರಿಲೀಸ್ ಆಯಿತು. ಆ ಬಳಿಕ ಅವರು ಕನ್ನಡಕ್ಕೆ ಮರಳಿರಲಿಲ್ಲ. ‘ಕೆಜಿಎಫ್ 2’ ಚಿತ್ರದಲ್ಲಿ ರವೀನಾ ಅವರಿಗೆ ಒಂದು ಪ್ರಮುಖ ಪಾತ್ರ ಸಿಕ್ಕಿತು. ಅದನ್ನು ಅವರು ಮಾಡಿದರು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಕಂಬ್ಯಾಕ್ ಮಾಡಿದ್ದಾರೆ. ‘ಕೆಜಿಎಫ್ 3’ ಚಿತ್ರದಲ್ಲಿ ಅವರ ಪಾತ್ರ ಇರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಸದ್ಯ ರವೀನಾ ಅವರು ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ಅವರು ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದಲ್ಲಿ ನಟಿಸುತ್ತಿದ್ದರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ