‘ಸಿಖಂದರ್’ ಸಿನಿಮಾದಲ್ಲಿ ಆ್ಯಂಗ್ರಿ ಯಂಗ್​ಮ್ಯಾನ್ ಲುಕ್​ನಲ್ಲಿ ಸಲ್ಲು

Salman Khan: ಸಲ್ಮಾನ್ ಖಾನ್, ‘ಸಿಖಂಧರ್’ ಹೆಸರಿನ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾದಲ್ಲಿ ‘ಆಂಗ್ರಿ ಯಂಗ್ ಮ್ಯಾನ್’ ಲುಕ್​ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.

‘ಸಿಖಂದರ್’ ಸಿನಿಮಾದಲ್ಲಿ ಆ್ಯಂಗ್ರಿ ಯಂಗ್​ಮ್ಯಾನ್ ಲುಕ್​ನಲ್ಲಿ ಸಲ್ಲು
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 07, 2024 | 7:28 PM

ಸಲ್ಮಾನ್ ಖಾನ್ ಹಾಗೂ ಸಾಜಿದ್ ನಾಡಿಯಾವಾಲಾ ಈ ಮೊದಲಿನಿಂದಲೂ ಒಟ್ಟಾಗಿ ಹಲವು ಸಿನಿಮಾ ಮಾಡಿದ್ದಾರೆ. ಇವರ ಗೆಳೆತನ ದಶಕದ ಹಳೆಯದು. ಇಬ್ಬರ ಮಧ್ಯೆ ಯಾವುದೇ ಕಿರಿಕ್ ಆಗಿಲ್ಲ. ಅವರ ಒಟ್ಟಾಗಿ ಕೆಲಸ ಮಾಡಿದ್ದು ‘ಕಿಕ್’ ಸಿನಿಮಾದಲ್ಲಿ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಈ ಚಿತ್ರಕ್ಕೆ ಫ್ಯಾನ್ಸ್ ಸೀಕ್ವೆಲ್ ಕೇಳುತ್ತಿದ್ದಾರೆ. ಇದಕ್ಕೂ ಮೊದಲು ಸಲ್ಲು ಹಾಗೂ ಸಾಜಿದ್ ‘ಸಿಖಂದರ್’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಎಆರ್ ಮುರುಗದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಸಲ್ಮಾನ್ ಖಾನ್.

ಸಲ್ಮಾನ್ ಖಾನ್ ‘ಸಿಖಂದರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ಸಿನಿಮಾದಲ್ಲಿ ಸಂಪೂರ್ಣ ಪವರ್ ತೋರಿಸಲಿದ್ದಾರೆ. ಈ ಮೊದಲಿನ ಸಿನಿಮಾಗಳಲ್ಲಿ ಸಲ್ಲು ಅವರು ಫನ್ ಆಗಿಯೂ ತೋರಿಸಲಾಗುತ್ತಿತ್ತು. ಆದರೆ, ಈ ಚಿತ್ರದಲ್ಲಿ ಆ ರೀತಿ ಇಲ್ಲ. ಸಖತ್ ಫೈಟ್ ದೃಶ್ಯಗಳು ಇರಲಿದ್ದು, ಇದರ ಜೊತೆಗೆ ಒಂದು ಸಂದೇಶ ಕೂಡ ಇರಲಿದೆ.

ಇದನ್ನೂ ಓದಿ:ಐಶ್ವರ್ಯಾ ಜೊತೆ ಡೇಟಿಂಗ್; ವಿವೇಕ್ ಒಬೆರಾಯ್ ಕರಿಯರ್ ಮುಗಿಸಿದ್ದ ಸಲ್ಮಾನ್ ಖಾನ್  

ಎಆರ್ ಮುರುದಾಸ್ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇರಲಿದೆ. ಜೊತೆಗೆ ಎಂಟರ್ಟೇನ್ಮೆಂಟ್ ಕೂಡ ಹೆಚ್ಚೇ ಇರಲಿದೆ. ಸಲ್ಮಾನ್ ಖಾನ್ ಅವರನ್ನು ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ನಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಸಿನಿಮಾದಲ್ಲಿ ಜನರಿಗಾಗಿ, ಅವರ ಹಕ್ಕಿಗಾಗಿ ಸಲ್ಲು ಹೋರಾಟ ಮಾಡಲಿದ್ದಾರಂತೆ.

2025ರ ಈದ್ಗೆ ‘ಸಿಖಂದರ್’ ಸಿನಿಮಾ ರಿಲೀಸ್ ಆಗಲಿದೆ. ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್ ಖಾನ್ಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಅವರ ಗೆಲುವ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರದ ಬಗ್ಗೆಯೂ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅವರ ಪಾತ್ರ ಹೇಗೆ ಇರಲಿದೆ ಎನ್ನುವ ಬಗ್ಗೆ ಇನ್ನೂ ರಿವೀಲ್ ಆಗಿಲ್ಲ.

ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಕುರ್ಚಿಯಿಂದ ಎದ್ದೇಳಲು ಕಷ್ಟಪಟ್ಟ ವಿಡಿಯೋ ವೈರಲ್ ಆಗಿತ್ತು. ಅವರು ಆ್ಯಕ್ಷನ್ ಸಿನಿಮಾ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿತ್ತು. ಇನ್ನು ಸಲ್ಲು ಅವರು ಹಿಂದಿ ಬಿಗ್ ಬಾಸ್ ಹೊಸ ಸೀಸನ್ ಕೂಡ ನಡೆಸಿಕೊಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ