ಐಶ್ವರ್ಯಾ ಜೊತೆ ಡೇಟಿಂಗ್; ವಿವೇಕ್ ಒಬೆರಾಯ್ ಕರಿಯರ್ ಮುಗಿಸಿದ್ದ ಸಲ್ಮಾನ್ ಖಾನ್  

ಐಶ್ವರ್ಯಾ ರೈ ಅವರ ಸುದ್ದಿಗೆ ಯಾರೇ ಹೋದರೂ ಸಲ್ಮಾನ್ ಖಾನ್ ಸುಮ್ಮನೆ ಇರುತ್ತಿರಲಿಲ್ಲ. ಅಷ್ಟೊಂದು ದ್ವೇಷವನ್ನು ಅವರು ಸಾಧಿಸುತ್ತಿದ್ದರು. ಐಶ್ವರ್ಯಾ ರೈ ಅವರ ಜೊತೆ ವಿವೆಕ್ ಒಬೆರಾಯ್ ಡೇಟಿಂಗ್ ಮಾಡುತ್ತಿದ್ದರು. ಇದರಿಂದ ಅವರ ವೃತ್ತಿ ಬದುಕು ಸಂಕಷ್ಟಕ್ಕೆ ಒಳಗಾಗಿತ್ತು.

ಐಶ್ವರ್ಯಾ ಜೊತೆ ಡೇಟಿಂಗ್; ವಿವೇಕ್ ಒಬೆರಾಯ್ ಕರಿಯರ್ ಮುಗಿಸಿದ್ದ ಸಲ್ಮಾನ್ ಖಾನ್  
ಐಶ್ವರ್ಯಾ ಜೊತೆ ಡೇಟಿಂಗ್; ವಿವೇಕ್ ಒಬೆರಾಯ್ ಕರಿಯರ್ ಮುಗಿಸಿದ್ದ ಸಲ್ಮಾನ್ ಖಾನ್  
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 03, 2024 | 7:45 AM

ವಿವೇಕ್ ಒಬೆರಾಯ್ ಅವರು ಬಾಲಿವುಡ್​ನ ಬೇಡಿಕೆಯ ಹೀರೋ ಎನಿಸಿಕೊಂಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಎಲ್ಲವೂ ಊಹಿಸಿದಂತೆ ನಡೆಯಬೇಕಲ್ಲ ಅಲ್ಲವೇ? ವಿವೇಕ್ ಒಬೆರಾಯ್ ಅವರು ಕೆಲವೇ ವರ್ಷಗಳಲ್ಲಿ ಮೂಲೆಗುಂಪಾದರು. ಇದಕ್ಕೆ ಕಾರಣ ಸಲ್ಮಾನ್ ಖಾನ್ ಎಂಬುದು ಅನೇಕರಿಗೆ ತಿಳಿದಿಲ್ಲ. ವಿವೇಕ್ ಜೀವನದಲ್ಲಿ ಮಾಡಿದ ಒಂದು ತಪ್ಪಿನಿಂದಾಗಿ ಸಾಕಷ್ಟು ತೊಂದರೆ ಅನುಭವಿಸಬೇಕಾಗಿ ಬಂದಿತ್ತಂತೆ. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದರು.

ವಿವೇಕ್ ಒಬೆರಾಯ್ ಅವರು ನಟಿಸಿದ ಮೊದಲ ಚಿತ್ರ ‘ಕಂಪನಿ’. ಈ ಸಿನಿಮಾನ ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದರು. ಈ ಚಿತ್ರ ರಿಲೀಸ್ ಆಗಿದ್ದು 2002ರಲ್ಲಿ. ಈ ಸಿನಿಮಾದಿಂದ ಅವರು ದೊಡ್ಡ ಮಟ್ಟದ ಯಶಸ್ಸು ಕಂಡರು. ಆ ಬಳಿಕ ‘ಸಾತಿಯಾ’ ಸಿನಿಮಾ ಮೂಲಕ ಎಲ್ಲರ ಮನ ಸೆಳೆದರು. ಅಂದುಕೊಂಡಂತೆ ನಡೆದಿದ್ದರೆ ಅವರು ಅಕ್ಷಯ್, ಅಜಯ್ ದೇವಗನ್ ರೀತಿ ಮಿಂಚುತ್ತಿದ್ದರೇನೋ. ಆದರೆ, ಅವರ ಕರಿಯರ್ ಉಲ್ಟಾ ಆಯಿತು.

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಪರಸ್ಪರ ಪ್ರಿತಿಸುತ್ತಿದ್ದರು. ಆದರೆ, ಅವರ ಬ್ರೇಕಪ್ ಆಯಿತು. ಕೊನೆಗೆ ಐಶ್ವರ್ಯಾ ಅವರು ಆಕರ್ಷಿತಗೊಂಡಿದ್ದು ವಿವೇಕ್ ಅವರಿಂದ. ಇಬ್ಬರೂ ಡೇಟಿಂಗ್ ಆರಂಭಿಸಿದರು. ಈ ಸುದ್ದಿ ಸಲ್ಮಾನ್ ಖಾನ್ ಕಿವಿಗೆ ಬಿತ್ತು. ಸಲ್ಮಾನ್ ಖಾನ್ ಅವರು ಆಗಲೇ ಬಾಲಿವುಡ್​ನ ಪ್ರಭಾವಿ ವ್ಯಕ್ತಿ ಎನಿಸಿಕೊಂಡಿದ್ದರು. ಹೀಗಾಗಿ, ತಮ್ಮ ಪ್ರಭಾವ ಬಳಸಿ ವಿವೇಕ್ ಅವರ ವೃತ್ತಿ ಬದುಕನ್ನೇ ಮುಳುಗಿಸಿದ್ದರು.

ವಿವೇಕ್ ಅವರಿಗೆ ಅಂದುಕೊಂಡ ರೀತಿಯ ಆಫರ್​ಗಳು ಬರಲಿಲ್ಲ. ಈ ಬಗ್ಗೆ ಅವರು ಕೂಡ ಮಾತನಾಡಿದ್ದರು. ‘ಸಿನಿಮಾ ಸೋಲುತ್ತದೆ ಅನ್ನೋದು ಒಂದು ವಿಚಾರ. ಆದರೆ, ಮತ್ತೆ ಮತ್ತೆ ಅದೇ ಆಗುತ್ತದೆ ಎಂದಾಗ ನೀವು ಅಸಹಾಯಕರಾಗುತ್ತೀರಿ. ನಿಮ್ಮನ್ನು ಸಿನಿಮಾಗಳಿಂದ ತೆಗೆದು ಹಾಕಲಾಗುತ್ತದೆ. ಅದು ತುಂಬಾನೇ ಫ್ರಸ್ಟ್ರೇಟಿಂಗ್. ಏನೋ ಆಗುತ್ತಿದೆ ಅನ್ನೋದು ಗೊತ್ತಿರುತ್ತದೆ. ಆದರೆ, ಏನೂ ಮಾಡಲು ಸಾಧ್ಯವಾಗುವುದಿಲ್ಲ’ ಎಂದಿದ್ದರು ಅವರು.

ಹಾಗಾದರೆ ಇದರ ಹಿಂದಿನ ಕಾರಣ ಏನು? ಇದಕ್ಕೆ ವಿವೇಕ್ ಅವರು ಓಪನ್ ಆಗಿ ಉತ್ತರ ನೀಡಿದ್ದರು. ‘ಇದು ಸಣ್ಣ ಇಂಡಸ್ಟ್ರಿ. ಇದು ಓಪನ್ ಸೀಕ್ರೆಟ್’ ಎಂದಿದ್ದಾರೆ. ಈ ಮೂಲಕ ತಾವು ಸಿನಿಮಾ ಕಳೆದುಕೊಳ್ಳಲು ಸಲ್ಮಾನ್ ಖಾನ್ ನೇರ ಕಾರಣ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಿಜಕ್ಕೂ ಐಶ್ವರ್ಯಾ ರೈ ವಿರುದ್ಧ ದ್ವೇಷ ಸಾಧಿಸಿದ್ದರಾ ಸಲ್ಲು? ತಮ್ಮ ಕೊಟ್ಟಿದ್ದ ಸ್ಪಷ್ಟನೆಯಲ್ಲಿ ಏನಿತ್ತು?

ಐಶ್ವರ್ಯಾ ರೈಗೆ ಮದುವೆ ಆಗಿ ಹಲವು ವರ್ಷಗಳು ಕಳೆದಿವೆ. ಸಲ್ಮಾನ್ ಕೂಡ ಬ್ಯಾಚುಲರ್ ಆಗಿಯೇ ಮುಂದುವರಿದಿದ್ದಾರೆ. ವಿವೇಕ್ ಒಬೆರಾಯ್ ಕೂಡ ಎಲ್ಲವನ್ನೂ ಮರೆತಿದ್ದಾರೆ. ಅವರಿಗೆ ವೆಬ್ ಸೀರಿಸ್​ಗಳಲ್ಲಿ ನಟಿಸೋ ಚಾನ್ಸ್ ಸಿಗುತ್ತಿದೆ. 2022ರ ಬಳಿಕ ಯಾವುದೇ ಸಿನಿಮಾಗಳಲ್ಲಿ ಅವರು ನಟಿಸಿಲ್ಲ. 2024ರಲ್ಲಿ ರಿಲೀಸ್ ಆದ ‘ಇಂಡಿಯನ್ ಪೋಲಿಸ್ ಫೋರ್ಸ್’ ಸರಣಿಯಲ್ಲಿ ಅವರು ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
7 ಸಿಕ್ಸ್​ಗಳೊಂದಿಗೆ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದ ಪೊಲಾರ್ಡ್
7 ಸಿಕ್ಸ್​ಗಳೊಂದಿಗೆ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದ ಪೊಲಾರ್ಡ್
ಸೆಮಿಕಂಡಕ್ಟರ್ ಕ್ಷೇತ್ರದ ಸಿಇಒಗಳಿಂದ ಮೋದಿಗೆ ಪ್ರಶಂಸೆ
ಸೆಮಿಕಂಡಕ್ಟರ್ ಕ್ಷೇತ್ರದ ಸಿಇಒಗಳಿಂದ ಮೋದಿಗೆ ಪ್ರಶಂಸೆ