‘ಚಾರ್ ಬೋಟಲ್ ವೋಡ್ಕಾ‘ ಹಾಡು ಬರೆದಾಗ ಹನಿ ಸಿಂಗ್‌ಗೆ ಎಚ್ಚರಿಕೆ ನೀಡಿದ್ದ ಶಾರುಖ್ ಖಾನ್

Shah Rukh Khan: ಶಾರುಖ್ ಖಾನ್, ಒಮ್ಮೆ ರ್ಯಾಪರ್ ಹನಿ ಸಿಂಗ್​ರ ಕಪಾಳಕ್ಕೆ ಹೊಡೆದಿದ್ದರು ಎಂಬ ಸುದ್ದಿ ಹರಿದಾಡುತ್ತಿರುತ್ತದೆ. ಆದರೆ ಈ ಬಗ್ಗೆ ಸ್ವತಃ ಹನಿ ಸಿಂಗ್ ಮಾತನಾಡಿದ್ದು, ನಿಜವಾಗಿಯೂ ನಡೆದಿದ್ದು ಏನು ಎಂಬುದನ್ನು ವಿವರಿಸಿದ್ದಾರೆ.

‘ಚಾರ್ ಬೋಟಲ್ ವೋಡ್ಕಾ‘ ಹಾಡು ಬರೆದಾಗ ಹನಿ ಸಿಂಗ್‌ಗೆ ಎಚ್ಚರಿಕೆ ನೀಡಿದ್ದ ಶಾರುಖ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 03, 2024 | 6:12 PM

ಹನಿ ಸಿಂಗ್ ಬರೆದು ಹಾಡಿದ್ದ ‘ಚಾರ್ ಬಾಟಲ್ ವೋಡ್ಕಾ’ ಸಾಂಗ್ ಸಖತ್ ಟ್ರೆಂಡ್ ಸೃಷ್ಟಿ ಮಾಡಿತ್ತು. ಈ ಹಾಡು ರಿಲೀಸ್ ಆಗಿ 10 ವರ್ಷಗಳ ಮೇಲಾಗಿದೆ. ಈ ವರೆಗೆ ಸಾಂಗ್ 25 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈ ಹಾಡನ್ನು ಅವರು ನಾಲ್ಕು ಬಾಟಲಿ ವೋಡ್ಕಾ ಕುಡಿದೇ ಬರೆದಿದ್ದರು. ಆ ಸಮಯದಲ್ಲಿ ಅವರು ಆಸ್ಟ್ರೇಲಿಯಾದಲ್ಲಿ ಇದ್ದರು. ಈ ಹಾಡನ್ನು ರಿಲೀಸ್ ಮಾಡಿದರೆ ಟೀಕೆ ಎದುರಿಸಬೇಕಾಗುತ್ತದೆ ಎಂದು ಶಾರುಖ್ ಖಾನ್ ಅವರು ಎಚ್ಚರಿಕೆ ನೀಡಿದ್ದರು ಎಂಬುದು ನಿಮಗೆ ಗೊತ್ತಿದೆಯೇ? ಆ ವಿಚಾರವನ್ನು ನಾವು ನಿಮಗೆ ಇಂದು ಹೇಳುತ್ತಿದ್ದೇವೆ.

ಶಾರುಖ್ ಖಾನ್ ಜೊತೆ ಹನಿ ಸಿಂಗ್ ವರ್ಲ್ಡ್ ಟೂರ್ ತೆರಳಿದ್ದರು. ಆ ವೇಳೆ ಹನಿ ಸಿಂಗ್ಗೆ ಶಾರುಖ್ ಖಾನ್ ಕೆನ್ನೆಗೆ ಬಾರಿಸಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ‘ನಾನು ಆ ಬಗ್ಗೆ ಈಗ ಮಾತನಾಡಲ್ಲ. ನನ್ನ ಡಾಕ್ಯುಮೆಂಟರಿ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಲಿದೆ. ಅಲ್ಲಿ ನಾನು ಮಾತನಾಡುತ್ತೇನೆ. ಆ ರೀತಿ ಏನೂ ಆಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿಯಲ್ಲಿ ಅವರು ಇನ್ನಷ್ಟು ವಿಚಾರ ರಿವೀಲ್ ಮಾಡಬಹುದು ಎಂದು ಭಾವಿಸೋಣ.

‘ನಾನು ಆಸ್ಟ್ರೇಲಿಯಾದಲ್ಲಿ ಇಬ್ಬರ ಜೊತೆ ಕುಳಿತು ಚಾರ್ ಬೋಟಲ್ ವೋಡ್ಕಾ ಹಾಡನ್ನು ಬರೆದೆ. ಆಗ ನಾನು ನಾಲ್ಕು ಬಾಟಲಿ ವೋಡ್ಕಾನೇ ಕುಡಿದಿದ್ದೆ. ಚೆನ್ನೈ ಎಕ್ಸ್ಪ್ರೆಸ್ (2013) ಸಿನಿಮಾ ಆಗತಾನೇ ರಿಲೀಸ್ ಆಗಿತ್ತು. ಸಿಖ್ ಸಮುದಾಯವದವರು ಪ್ರತಿಭಟನೆ ನಡೆಸುತ್ತಿದ್ದರು. ನಮಗೆ ಅವರು ಪರ್ಫಾರ್ಮೆನ್ಸ್ ಮಾಡಲು ಬಿಡಲೇ ಇಲ್ಲ. ನಾನು ಕೆಟ್ಟ ಹಾಡನ್ನು ಹಾಡುತ್ತೇನೆ ಎಂಬುದು ಅವರ ಆರೋಪ ಆಗಿತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಶಾರುಖ್ ಖಾನ್ ನಿಜವಾದ ಆಸ್ತಿ ಎಷ್ಟು ಸಾವಿರ ಕೋಟಿ? ಅಧಿಕೃತ ಮಾಹಿತಿಯೇ ಸಿಕ್ತು

ಶಾರುಖ್ ಅವರು ಹನಿ ಸಿಂಗ್ ಬೆಂಬಲಕ್ಕೆ ನಿಂತಿದ್ದರು. ‘ನಾನು ನಿಮ್ಮ ಜೊತೆಗಿದ್ದೇನೆ. ನಿಮಗೆ ಹಾಡಲು ಬಿಡಲಿಲ್ಲ ಎಂದರೆ ನಾನು ವರ್ಲ್ಡ್ ಟೂರ್ ಮಾಡಲ್ಲ. ಈ ರೀತಿ ಹೇಳೋದು ನಿಜಕ್ಕೂ ದೊಡ್ಡ ಕೆಲಸ ಎಂದಿದ್ದಾರೆ’ ಹನಿ ಸಿಂಗ್.

‘ನಾನು ಟೂರ್ಗೆ ಹೋದೆ. ನಾನು ಪರ್ಫಾರ್ಮ್ ಮಾಡಿದೆ. 30 ಸಾವಿರ ಜನರು ನನ್ನನ್ನು ಒಳಗೆ ಚಿಯರ್ ಮಾಡುತ್ತಿದ್ದರು. ಹೊರಗೆ 500 ಮಂದಿ ನನ್ನ ಪ್ರತಿಕೃತಿ ದಹಿಸುತ್ತಿದ್ದರು. ಇದು ನನಗೆ ಬೇಸರ ಮೂಡಿಸಿತು. ನಾನು ರೂಂಗೆ ಬಂದು ಕುಡಿಯೋಕೆ ಆರಂಭಿಸಿದೆ. ಆ ಬಳಿಕ ಈ ಹಾಡನ್ನು ಬರೆದೆ’ ಎಂದಿದ್ದಾರೆ ಅವರು.

‘ನಾನು ಶಾರುಖ್ ಅವರಿಗೆ ಹಾಡನ್ನು ಕೇಳಿಸಿದೆ. ನಿಮಗೇನು ಹುಚ್ಚಾ? ಇದು ಫ್ಲಾಪ್ ಆಗುತ್ತದೆ. ನೀವು ಟೀಕೆ ಎದುರಿಸಬೇಕು ಎಂದು ಎಚ್ಚರಿಸಿದ್ದರು. ಆದರೆ, ನಾನ ಹಾಡುತ್ತೇನೆ ಎಂದು ಹೇಳಿದ್ದೆ’ ಎಂಬುದಾಗಿ ಹನಿ ಸಿಂಗ್ ಸಿಂಗ್ ಹೇಳಿದ್ದಾರೆ. ಅಂದಿನ ಕಾಲಕ್ಕೆ ಹಾಡು ಸಾಕಷ್ಟು ಟ್ರೆಂಡ್ ಸೃಷ್ಟಿ ಮಾಡಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ