‘ಎಮರ್ಜೆನ್ಸಿ’ ಚಿತ್ರ ರಿಲೀಸ್ ಮಾಡುವ ಹಠಕ್ಕೆ ಬಿದ್ದ ಕಂಗನಾ; ಸೆನ್ಸಾರ್ ಮಂಡಳಿ ವಿರುದ್ಧ ಕಾನೂನು ಸಮರ

ಕಂಗನಾ ರಣಾವತ್​ ಅವರು ‘ಎಮರ್ಜೆನ್ಸಿ’ ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ವಿವಾದಕ್ಕೆ ಕಾರಣ ಆಗಿದೆ. ಸೆ.6ಕ್ಕೆ ಈ ಚಿತ್ರ ರಿಲೀಸ್​ ಆಗುವುದು ಅನುಮಾನ ಎನ್ನಲಾಗಿದೆ. ಸೆನ್ಸಾರ್​ ಪ್ರಮಾಣ ಪತ್ರ ಸಿಗುವುದು ತಡವಾಗಿದೆ. ಇದರ ವಿರುದ್ಧ ಕಂಗನಾ ತಂಡ ಕೋರ್ಟ್​ ಮೊರೆ ಹೋಗಿದೆ.

‘ಎಮರ್ಜೆನ್ಸಿ’ ಚಿತ್ರ ರಿಲೀಸ್ ಮಾಡುವ ಹಠಕ್ಕೆ ಬಿದ್ದ ಕಂಗನಾ; ಸೆನ್ಸಾರ್ ಮಂಡಳಿ ವಿರುದ್ಧ ಕಾನೂನು ಸಮರ
ಕಂಗನಾ
Follow us
ರಾಜೇಶ್ ದುಗ್ಗುಮನೆ
|

Updated on: Sep 04, 2024 | 6:58 AM

ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿರುವ ‘ಎಮರ್ಜೆನ್ಸಿ’ ಚಿತ್ರಕ್ಕೆ ಒಂದಾದಮೇಲೆ ಒಂದರಂತೆ ಅಡೆತಡೆಗಳು ಎದುರಾಗುತ್ತಲೇ ಇವೆ. ಇತ್ತೀಚೆಗೆ ಸಿನಿಮಾಗೆ ಸೆನ್ಸಾರ್ ಮಂಡಳಿ ಅವರು ಪ್ರಮಾಣಪತ್ರ ನೀಡಲು ನಿರಾಕರಿಸಿದ್ದರು. ಈ ಕಾರಣದಿಂದ ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈಗ ಈ ವಿಚಾರವಾಗಿ ಸಿನಿಮಾ ತಂಡ ಕೋರ್ಟ್ ಮೊರೆ ಹೋಗಿದೆ. ಇಂದು (ಸೆಪ್ಟೆಂಬರ್ 4) ಅರ್ಜಿ ವಿಚಾರಣೆ ನಡೆಯಲಿದೆ.

ರಾಜಕೀಯ ವಿಚಾರಗಳನ್ನು ಹೇಳುವಾಗ ಎಚ್ಚರಿಕೆ ಬೇಕು. ಇಲ್ಲವಾದಲ್ಲಿ ಜನರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಆದಾಗ್ಯೂ ಕಂಗನಾ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತುಪರಿಸ್ಥಿತಿ ಆಧರಿಸಿ ಸಿನಿಮಾ ಮಾಡಲು ಮುಂದಾದರು. ಈ ಸಿನಿಮಾ ವಿರುದ್ಧ ಈಗಾಗಲೇ ಬ್ಯಾನ್ ಕೂಗು ಎದ್ದಿದೆ. ಹೀಗಿರುವಾಗಲೇ ಕಂಗನಾ ಸಿನಿಮಾಗೆ ಸೆನ್ಸಾರ್ ಮಂಡಳಿಯವರು ಪ್ರಮಾಣಪತ್ರ ನೀಡಲು ನಿರಾಕರಿಸಿದ್ದರು. ಹೀಗಾಗಿ ಈ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಒಂದಾದ ಜೀ ಎಂಟರ್​ಟೇನ್​ಮೆಂಟ್ ಅವರು ಬಾಂಬೇ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಕಳೆದವಾರ ಕಂಗನಾ ಅವರು ಈ ಚಿತ್ರಕ್ಕೆ ಸೆನ್ಸಾರ್ ಆಗುತ್ತಿಲ್ಲ ಎಂಬ ಬಗ್ಗೆ ಮಾತನಾಡಿದ್ದರು. ‘ಸಿಬಿಎಫ್​ಸಿ ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿದೆ. ಸರಿಯಾದ ಸಮಯಕ್ಕೆ ಸಿನಿಮಾ ಬರುತ್ತದೆ ಎಂದು ಭಾವಿಸಿದ್ದೇನೆ. ಅದಕ್ಕಾಗಿ ನಾನು ಫೈಟ್ ಮಾಡುತ್ತೇನೆ. ನಾನು ಕೋರ್ಟ್​ಗೆ ಹೋಗಲೂ ಸಿದ್ಧ. ನೀವು ಇತಿಹಾಸ ಬದಲಿಸಲು ಸಾಧ್ಯವಿಲ್ಲ. ಬೆದರಿಕೆ ಹಾಕಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ‘ಎಮರ್ಜೆನ್ಸಿ’ ಬಿಡುಗಡೆ ಮತ್ತೆ ಮುಂದಕ್ಕೆ; ಕಂಗನಾ ಸಿನಿಮಾಗೆ ಹಲವು ಅಡೆತಡೆ

‘ನಾವು ಇತಿಹಾಸ ತೋರಿಸಬೇಕಿದೆ. 70 ವರ್ಷದ ಮಹಿಳೆಯನ್ನು 30-35 ಬಾರಿ ಗುಂಡು ಹಾರಿಸಿ ಕೊಲ್ಲಲಾಗಿದೆ. ಯಾರೋ ಒಬ್ಬರು ಕೊಂದಿರಬೇಕಲ್ಲ. ಇದರಿಂದ ಕೆಲವರಿಗೆ ಬೇಸರ ಆಗುತ್ತದೆ ಅನ್ನೋದು ನಿಮ್ಮ ವಾದ. ಆದರೆ ಇತಿಹಾಸ ತೋರಿಸಲೇಬೇಕಲ್ಲ’ ಎಂದಿದ್ದರು ಕಂಗನಾ. ಕಂಗನಾ ಅವರು ಏನೇ ಮಾಡಿದರೂ ವಿವಾದ ಆಗುತ್ತದೆ. ಈಗ ಅವರು ಕೇವಲ ನಟಿ ಮಾತ್ರ ಅಲ್ಲ, ಸಂಸದೆ ಕೂಡ ಹೌದು. ‘ಎಮರ್ಜೆನ್ಸಿ’ ಚಿತ್ರಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.