‘ಎಮರ್ಜೆನ್ಸಿ’ ಬಿಡುಗಡೆ ಮತ್ತೆ ಮುಂದಕ್ಕೆ; ಕಂಗನಾ ಸಿನಿಮಾಗೆ ಹಲವು ಅಡೆತಡೆ

ಕಂಗನಾ ರಣಾವತ್​ ಅವರು ‘ಎಮರ್ಜೆನ್ಸಿ’ ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ವಿವಾದಕ್ಕೆ ಕಾರಣ ಆಗಿದೆ. ಸೆ.6ಕ್ಕೆ ಈ ಚಿತ್ರ ರಿಲೀಸ್​ ಆಗುವುದು ಅನುಮಾನ ಎನ್ನಲಾಗಿದೆ. ಸೆನ್ಸಾರ್​ ಪ್ರಮಾಣ ಪತ್ರ ಸಿಗುವುದು ತಡವಾಗಿದೆ. ಅಲ್ಲದೇ ಸಿಖ್​ ಸಮುದಾಯದಿಂದಲೂ ‘ಎಮರ್ಜೆನ್ಸಿ’ ಸಿನಿಮಾದ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದೆ.

ಮದನ್​ ಕುಮಾರ್​
|

Updated on: Sep 01, 2024 | 9:34 PM

ರಣಾವತ್​ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಅಂತಿಮವಾಗಿ ಸೆಪ್ಟೆಂಬರ್​ 6ರಂದು ತೆರೆಕಾಣಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈಗ ಒಂದು ಬ್ಯಾಡ್​ ನ್ಯೂಸ್​ ಕೇಳಿಬಂದಿದೆ. ‘ಎಮರ್ಜೆನ್ಸಿ’ ಸಿನಿಮಾದ ರಿಲೀಸ್​ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಚಿತ್ರಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತಿವೆ.

1 / 5
ಈಗಾಗಲೇ ತಿಳಿದಿರುವಂತೆ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾ ಗಾಂಧಿ ಕುರಿತಾದ ಕಥೆ ಇದೆ. ತುರ್ತು ಪರಿಸ್ಥಿತಿಯ ದಿನಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಇದು ವಿವಾದಾತ್ಮಕ ವಿಷಯ ಆದ್ದರಿಂದ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡುವುದು ಕಷ್ಟ ಆಗುತ್ತಿದೆ. ಸಿನಿಮಾ ರಿಲೀಸ್​ ಬಳಿಕ ಎದುರಾಗಬಹುದಾದ ಸಮಸ್ಯೆಗಳನ್ನು ತಪ್ಪಿಸಲು ಸೆನ್ಸಾರ್​ ಮಂಡಳಿ ಈಗಲೇ ಎಚ್ಚರಿಕೆ ವಹಿಸುತ್ತಿದೆ.

2 / 5
ಸೆನ್ಸಾರ್​ ಮಂಡಳಿಯವರು ‘ಎಮರ್ಜೆನ್ಸಿ’ ಚಿತ್ರತಂಡಕ್ಕೆ ಒಂದಷ್ಟು ಸೂಚನೆಗಳನ್ನು ನೀಡಿದ್ದಾರೆ. ಕೆಲವು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಲಾಗಿದೆ. ಅಲ್ಲದೇ, ಸಿನಿಮಾಗೆ ಯಾವ ಪ್ರಮಾಣ ಪತ್ರ ನೀಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಕೆಲವು ಸ್ಪಷ್ಟನೆಗಳು ಬೇಕಿರುವುದರಿಂದ ಚಿತ್ರತಂಡಕ್ಕೆ ನೋಟಿಸ್​ ನೀಡುವುದು ಬಾಕಿ ಇದೆ.

3 / 5
ಆ ನೋಟಿಸ್​ಗೆ ಚಿತ್ರತಂಡದವರು ಉತ್ತರ ನೀಡಬೇಕಿದೆ. ಅಷ್ಟರ ನಂತರ ಸೆನ್ಸಾರ್​ ಮಂಡಳಿಯಿಂದ ಬದಲಾವಣೆ ಸೂಚಿಸಿದರೆ ಸೆಪ್ಟೆಂಬರ್​ 6ರೊಳಗೆ ಕೆಲಸ ಪೂರ್ಣಗೊಳ್ಳುವುದು ಕಷ್ಟ ಆಗಲಿದೆ. ಈ ಕಾರಣದಿಂದ ಸಿನಿಮಾದ ಬಿಡುಗಡೆಯನ್ನು ಮುಂದೂಡುವುದು ಅನಿವಾರ್ಯ ಎನ್ನಲಾಗಿದೆ. ‘ಎಮರ್ಜೆನ್ಸಿ’ ಸಿನಿಮಾಗೆ ಸಿಖ್​ ಸಮುದಾಯದವರಿಂದಲೂ ಆಕ್ಷೇಪ ವ್ಯಕ್ತವಾಗಿದೆ.

4 / 5
ಇಂದಿರಾ ಗಾಂಧಿ ಹತ್ಯೆ ಮತ್ತು ಪಂಜಾಬ್​ ಗಲಭೆ ಬಗ್ಗೆ ಸಿನಿಮಾದಲ್ಲಿ ತೋರಿಸಬಾರದು ಎಂಬ ಒತ್ತಾಯ ಕೇಳಿಬಂದಿದೆ ಎಂದು ಸ್ವತಃ ಕಂಗನಾ ಟ್ವೀಟ್​ ಮಾಡಿದ್ದಾರೆ. ಟ್ರೇಲರ್​ ಬಿಡುಗಡೆ ಆದ ಬಳಿಕ ಈ ಚಿತ್ರಕ್ಕೆ ಸಿಖ್​ ಸಮುದಾಯದವರ ವಿರೋಧ ಹೆಚ್ಚಾಯಿತು. ಈ ಬಗ್ಗೆ ಕೋರ್ಟ್​ನಲ್ಲೂ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ರಿಲೀಸ್​ ಇನ್ನಷ್ಟು ತಡವಾಗಲಿದೆ. ಸಿನಿಮಾದ ಹೊಸ ರಿಲೀಸ್​ ದಿನಾಂಕ ತಿಳಿಯಲು ಫ್ಯಾನ್ಸ್​ ಕಾಯುತ್ತಿದ್ದಾರೆ.

5 / 5
Follow us
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್

5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ