ರವೀನಾ ಟಂಡನ್ ವಿಡಿಯೋ ವೈರಲ್ ಮಾಡಿದ ವ್ಯಕ್ತಿ ಮೇಲೆ ಮಾನನಷ್ಟ ಮೊಕದ್ದಮೆ
ಹಲ್ಲೆ ಘಟನೆ ಕುರಿತಂತೆ ನಟಿ ರವೀನಾ ಟಂಡನ್ ಮೇಲೆ ಕೇಳಿಬಂದ ಆರೋಪಗಳು ಸುಳ್ಳು ಎಂದು ನಂತರದಲ್ಲಿ ಪೊಲೀಸರು ಹೇಳಿದರು. ಆ ನಂತರ ವೈರಲ್ ವಿಡಿಯೋವನ್ನು ಡಿಲೀಟ್ ಮಾಡುವಂತೆ ಆ ವ್ಯಕ್ತಿಗೆ ನಟಿ ಮನವಿ ಮಾಡಿದರು. ಆದರೆ ಡಿಲೀಟ್ ಮಾಡಲು ಆತ ಒಪ್ಪಲಿಲ್ಲ ಎನ್ನಲಾಗಿದೆ. ಹಾಗಾಗಿ ಕಾನೂನಿನ ಮೂಲಕ ಆತನಿಗೆ ಬುದ್ಧಿ ಕಲಿಸಲು ರವೀನಾ ಟಂಡನ್ ಈಗ ಮುಂದಾಗಿದ್ದಾರೆ.
ಕೆಲವೇ ದಿನಗಳ ಹಿಂದೆ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಅವರ ವಿಡಿಯೋ ವೈರಲ್ ಆಗಿತ್ತು. ಮುಂಬೈ ಬೀದಿಯಲ್ಲಿ ರವೀನಾ ಟಂಡನ್ ಮೇಲೆ ಕೆಲವರು ಹಲ್ಲೆ ಮಾಡಿದ್ದರು. ಆ ಸಂದರ್ಭದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ವಿಡಿಯೋ ಹಂಚಿಕೊಂಡ ವ್ಯಕ್ತಿಯ ವಿರುದ್ಧ ಮಾನನಷ್ಟ ಕೇಸ್ (Defamation Case) ಹಾಕಲಾಗಿದೆ. ಅಷ್ಟಕ್ಕೂ, ನೈಜ ಘಟನೆಯ ವಿಡಿಯೋವನ್ನು (Raveena Tandon Viral Video) ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಮಾನನಷ್ಟ ಮೊಕದ್ದಮೆ ಹಾಕಿದ್ದು ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ..
ಕೇವಲ ರವೀನಾ ಟಂಡನ್ ಅವರ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕೆ ಆ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ ಆ ವಿಡಿಯೋದ ಜೊತೆ ನೀಡಿದ ಕ್ಯಾಪ್ಷನ್ನಿಂದ ನಟಿಗೆ ಸಿಟ್ಟು ಬಂದಿದೆ. ರವೀನಾ ಟಂಡನ್ ಅವರು ಮದ್ಯಪಾನ ಮಾಡಿದ್ದಾರೆ, ರ‍್ಯಾಶ್ ಡ್ರೈವಿಂಗ್ ಮಾಡಿದ್ದಾರೆ ಹಾಗೂ ಜನರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕ್ಯಾಪ್ಷನ್ನಲ್ಲಿ ಆರೋಪಿಸಲಾಗಿತ್ತು.
Allegations of Assault by #RaveenaTandon & her driver on elderly Woman Incident near Rizvi law college, family Claims that @TandonRaveena was under influence of Alcohol, women have got head injuries, Family is at Khar Police station @MumbaiPolice @CPMumbaiPolice @mieknathshinde pic.twitter.com/eZ0YQxvW3g
— Mohsin shaikh 🇮🇳 (@mohsinofficail) June 1, 2024
ರವೀನಾ ಟಂಡನ್ ಮೇಲೆ ಕೇಳಿಬಂದ ಈ ಆರೋಪಗಳೆಲ್ಲ ಸುಳ್ಳು ಎಂದು ನಂತರದಲ್ಲಿ ಪೊಲೀಸರು ಹೇಳಿಕೆ ನೀಡಿದರು. ಆ ಬಳಿಕ ವೈರಲ್ ವಿಡಿಯೋವನ್ನು ಡಿಲೀಟ್ ಮಾಡುವಂತೆ ಆ ವ್ಯಕ್ತಿಗೆ ಮನವಿ ಮಾಡಿಕೊಳ್ಳಲಾಯಿತು. ಆದರೆ ವಿಡಿಯೋ ಡಿಲೀಟ್ ಮಾಡಲು ಆತ ಒಪ್ಪಿಲ್ಲ. ಆದ್ದರಿಂದ ಕಾನೂನಿನ ಮೂಲಕ ಬುದ್ಧಿ ಕಲಿಸಲು ರವೀನಾ ಟಂಡನ್ ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಇದನ್ನೂ ಓದಿ: ‘ಪ್ಲೀಸ್ ಹೊಡೆಯಬೇಡಿ’: ಕೈ ಮುಗಿದು ಬೇಡಿಕೊಂಡ ರವೀನಾ ಟಂಡನ್
ಮುಂಬೈನ ಬೀದಿಯಲ್ಲಿ ರವೀನಾ ಟಂಡನ್ ಮೇಲೆ ನಡೆದ ಹಲ್ಲೆ ಘಟನೆ ಕುರಿತು ಅವರು ಕೆಲವು ದಿನಗಳ ಬಳಿಕ ಇನ್ಸ್ಟಾಗ್ರಾಮ್ ಸೋರಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ‘ನಿಮ್ಮೆಲ್ಲರ ಅಪಾರವಾದ ಬೆಂಬಲ, ಪ್ರೀತಿ ಹಾಗೂ ನಂಬಿಕೆಗೆ ಧನ್ಯವಾದಗಳು. ಈ ಕಥೆಯ ನೀತಿ ಏನು? ಈಗಲೇ ಡ್ಯಾಶ್ಕ್ಯಾಮ್ ಹಾಗೂ ಸಿಸಿಟಿವಿ ಹಾಕಿಸಿಕೊಳ್ಳಿ’ ಎಂದು ರವೀನಾ ಟಂಡನ್ ಬರೆದುಕೊಂಡಿದ್ದರು. ಆ ಮೂಲಕ ತಮ್ಮ ಅಭಿಮಾನಿಗಳಿಗೆ, ಆಪ್ತರಿಗೆ ರವೀನಾ ಕಿವಿಮಾತು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.