ಸೋನಾಕ್ಷಿ ಹಾಗೂ ಝಹೀರ್ ಮದುವೆಗಿಲ್ಲ ಕುಟುಂಬದವರ ಒಪ್ಪಿಗೆ? ಮೂಡಿತು ಅನುಮಾನ
ಪಹ್ಲಾಜ್ ಹಾಗೂ ಶತ್ರುಘ್ನ ಸಿನ್ಹಾ 1977ರಿಂದ ಗೆಳೆಯರು. ಈ ಕುಟುಂಬಕ್ಕೆ ಅವರು ಸಂಬಂಧಿ ಕೂಡ ಹೌದು. ಪಹ್ಲಾಜ್ ಅವರು ಈ ಮದುವೆ ವಿಚಾರವನ್ನು ಖಚಿತಪಡಿಸಿದ್ದಾರೆ. ‘ನಾನು ಸೋನಾಕ್ಷಿ ಅವರ ಮಾವ. ಅವಳಿಗೆ ಹಾಗೂ ಝಹೀರ್ಗೆ ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ’ ಎಂದಿದ್ದಾರೆ ಅವರು.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮದುವೆ ಆಗೋಕೆ ರೆಡಿ ಆಗಿದ್ದಾರೆ. ಅವರ ಬಾಯ್ಫ್ರೆಂಡ್, ಸಲ್ಮಾನ್ ಖಾನ್ ಗೆಳೆಯ ಝಹೀರ್ ಇಖ್ಬಾಲ್ ಜೊತೆ ಮದುವೆ ನಡೆಯುತ್ತಿದೆ. ಇಬ್ಬರೂ ಸುಮಾರು ಏಳು ವರ್ಷಗಳಿಂದ ಡೇಟ್ ಮಾಡುತ್ತಿದ್ದರು. ಜೂನ್ 23ರಂದು ಇವರ ಮದುವೆ ನಡೆಯಲಿದ್ದು, ಮುಂಬೈನಲ್ಲಿ ರಿಸೆಪ್ಷನ್ ಆಯೋಜನೆ ಮಾಡಲಾಗಿದೆ. ಸೋನಾಕ್ಷಿ ಸಿನ್ಹಾ ಅವರ ಸಂಬಂಧಿ ಪಹ್ಲಾಜ್ ನಿಹಲಾನಿ ಅವರು ಈ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಸೋನಾಕ್ಷಿ ಮುದವೆ ಆಗುತ್ತಿರೋದು ನಿಜ ಎಂದಿದ್ದಾರೆ.
ಪಹ್ಲಾಜ್ ಹಾಗೂ ಶತ್ರುಘ್ನ ಸಿನ್ಹಾ 1977ರಿಂದ ಗೆಳೆಯರು. ಈ ಕುಟುಂಬಕ್ಕೆ ಅವರು ಸಂಬಂಧಿ ಕೂಡ ಹೌದು. ಪಹ್ಲಾಜ್ ಅವರು ಈ ಮದುವೆ ವಿಚಾರವನ್ನು ಖಚಿತಪಡಿಸಿದ್ದಾರೆ. ‘ನಾನು ಸೋನಾಕ್ಷಿ ಅವರ ಮಾವ. ಅವಳಿಗೆ ಹಾಗೂ ಝಹೀರ್ಗೆ ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ. ಅವರು ಕೊನೆಗೂ ಮದುವೆ ಆಗುತ್ತಿದ್ದಾರೆ. ಅವರಿಗೆ ನನ್ನ ಶುಭಾಶಯ’ ಎಂದಿದ್ದಾರೆ ಪಹ್ಲಾಜ್.
ಸೋನಾಕ್ಷಿ ಮದುವೆ ಬಗ್ಗೆ ತಿಳಿದಿದೆಯೇ ಎನ್ನುವ ಪ್ತಶ್ನೆಗೆ ಉತ್ತರಿಸಿರೋ ಅವರು, ‘ಈಗಿನ ಕಾಲದಲ್ಲಿ ಮಕ್ಕಳು ತಾವೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದಕ್ಕೆ ಪಾಲಕರು ಖುಷಿ ಆಗಲೇಬೇಕು. ಮದುವೆ ಆದ ಬಳಿಕ ಒಟ್ಟಿಗೆ ಸಂಸಾರ ಮಾಡೋದು ಅವರು. ಅವರಿಗೆ ಹೊಂದಾಣಿಕೆ ಆದರೆ ಆಯಿತು’ ಎಂದಿದ್ದಾರೆ ಅವರು.
ಸೋನಾಕ್ಷಿ ಹಾಗೂ ಝಹೀರ್ ಮದುವೆಗೆ ಶತ್ರುಘ್ನ ಸಿನ್ಹಾ ಅವರ ಒಪ್ಪಿಗೆ ಇಲ್ಲ ಎನ್ನಲಾಗಿದೆ. ಮಗಳು ತೆಗೆದುಕೊಂಡ ನಿರ್ಧಾರಕ್ಕೆ ಅವರು ಓಕೆ ಎಂದಿದ್ದಾರೆ ಅಷ್ಟೇ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಮಾತನಾಡಿದ್ದ ಅವರು, ‘ಮಕ್ಕಳು ಮದುವೆಗೆ ಒಪ್ಪಿಗೆ ಕೇಳುವುದಿಲ್ಲ. ಬದಲಿಗೆ ತಮ್ಮ ನಿರ್ಧಾರವನ್ನು ಹೇಳುತ್ತಾರೆ. ನನಗೆ ಮದುವೆಗೆ ಆಮಂತ್ರಣ ಬಂದಿಲ್ಲ. ಬಂದರೆ ಹೋಗಿ ಆಶೀರ್ವದಿಸುತ್ತೇನೆ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ‘ಆಮಂತ್ರಿಸಿದರೆ ಹೋಗಿ ಆಶೀರ್ವದಿಸುತ್ತೇವೆ’; ಝಹೀರ್-ಸೋನಾಕ್ಷಿ ಮದುವೆ ಬಗ್ಗೆ ಶತ್ರುಘ್ನ ಸಿನ್ಹಾ ಮಾತು
ಸೋಶಿಯಲ್ ಮೀಡಿಯಾದಲ್ಲಿ ಸೋನಾಕ್ಷಿ ವಿರುದ್ಧ ಅಪಸ್ವರ ಎದ್ದಿದೆ. ಅವರು ಬೇರೆ ಧರ್ಮದ ಹುಡುಗನ ಮದುವೆ ಆಗೋ ಅವಶ್ಯಕತೆ ಏನಿತ್ತು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಅವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.