ಬಾಲಿವುಡ್ನಲ್ಲಿ ಜನಪ್ರಿಯತೆ ಪಡೆದ ಇವರ್ಯಾರೂ ಹೊರಗಿನವರಲ್ಲ; ಇದೆ ದೊಡ್ಡ ಹಿನ್ನೆಲೆ
ವಿಕ್ಕಿ ಕೌಶಲ್ ಅವರು ಬಾಲಿವುಡ್ನಲ್ಲಿ ಸ್ಥಾನ ಪಡೆದಿದ್ದಾರೆ. ಅವರನ್ನು ಹುಡುಕಿ ದೊಡ್ಡ ದೊಡ್ಡ ಆಫರ್ಗಳು ಬರುತ್ತಿವೆ. ವಿಶೇಷ ಎಂದರೆ, ಅವರು ಕತ್ರಿನಾ ಕೈಫ್ನ ಮದುವೆ ಆಗಿದ್ದಾರೆ. ವಿಕ್ಕಿ ತಂದೆ ಶ್ಯಾಮ್ ಕೌಶಲ್ ಅವರು ಆ್ಯಕ್ಷನ್ ಡೈರೆಕ್ಟರ್. ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಬಾಲಿವುಡ್ (Bollywood) ಚಿತ್ರರಂಗದಲ್ಲಿ ಹೊರಗಿನವರಿಗೆ ಅಷ್ಟು ಸುಲಭದಲ್ಲಿ ಅವಕಾಶ ಸಿಗೋದಿಲ್ಲ ಎನ್ನುವ ಆರೋಪ ಇದೆ. ಇದು ಆಗಾಗ ನಿಜ ಎಂದು ಕೂಡ ಅನಿಸುತ್ತದೆ. ಆದಾಗ್ಯೂ ಕೆಲವರು ಹೊರಗಿನಿಂದ ಬಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನೂ ಕೆಲವರು ಹೊರಗಿನವರು ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಅಸಲಿಗೆ ಅವರು ಹೊರಗಿನವರಾಗಿರುವುದಿಲ್ಲ. ಈ ರೀತಿ ಅನೇಕ ಸ್ಟಾರ್ಗಳು ಇದ್ದಾರೆ ಆ ಬಗ್ಗೆ ಇಲ್ಲಿದೆ ವಿವರ.
ವಿಕ್ಕಿ ಕೌಶಲ್
ವಿಕ್ಕಿ ಕೌಶಲ್ ಅವರು ಬಾಲಿವುಡ್ನಲ್ಲಿ ಸ್ಥಾನ ಪಡೆದಿದ್ದಾರೆ. ಅವರನ್ನು ಹುಡುಕಿ ದೊಡ್ಡ ದೊಡ್ಡ ಆಫರ್ಗಳು ಬರುತ್ತಿವೆ. ವಿಶೇಷ ಎಂದರೆ, ಅವರು ಕತ್ರಿನಾ ಕೈಫ್ನ ಮದುವೆ ಆಗಿದ್ದಾರೆ. ವಿಕ್ಕಿ ತಂದೆ ಶ್ಯಾಮ್ ಕೌಶಲ್ ಅವರು ಆ್ಯಕ್ಷನ್ ಡೈರೆಕ್ಟರ್. ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಹಲವು ಅವಾರ್ಡ್ ಕೂಡ ಪಡೆದಿದ್ದಾರೆ.
ಅಜಯ್ ದೇವಗನ್
ಅಜಯ್ ದೇವಗನ್ ಅವರು ಬಾಲಿವುಡ್ನಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ತಂದೆ ವೀರು ದೇವಗನ್ ಅವರು ಆ್ಯಕ್ಷನ್ ಕೋರಿಯೋಗ್ರಫರ್. ವೀರು ದೇವಗನ್ ಹಲವು ಸಿನಿಮಾಗಳಿಗೆ ಸ್ಟಂಟ್ಸ್ ಕೊರಿಯೋಗ್ರಫಿ ಮಾಡುತ್ತಿದ್ದರು. ಅಜಯ್ ತಾಯಿ ವೀನಾ ದೇವಗನ್ ಅವರು ನಿರ್ಮಾಪಕಿ. ಹೀಗಾಗಿ ಅಜಯ್ಗೆ ಸುಲಭದಲ್ಲಿ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ.
ತಾರಾ ಸುತಾರಿಯಾ
ತಾರಾ ಅವರು ಬಾಲಿವುಡ್ಗೆ 2019ರಲ್ಲಿ ಕಾಲಿಟ್ಟರು. ‘ಸ್ಟುಡೆಂಟ್ ಆಪ್ ದಿ ಇಯರ್ 2’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಕರಣ್ ಜೋಹರ್. ಅವರು ಸೆಲೆಬ್ರಿಟಿ ಕಿಡ್ನ ಮಾತ್ರ ಪರಿಚಯಿಸುತ್ತಾರೆ. ಅಂದಹಾಗೆ ತಾರಾ ಅವರ ಕುಟುಂಬ ಕಪೂರ್ ಕುಟುಂಬ ಹಾಗೂ ಜಾನ್ ಅಬ್ರಹಾಂ ಜೊತೆ ಗೆಳೆತನ ಹೊಂದಿದೆ.
ಕಿಯಾರಾ ಅಡ್ವಾಣಿ
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರಿಗೆ ಸಖತ್ ಬೇಡಿಕೆ ಇದೆ. ಅವರು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದಾರೆ. ಅವರು ಚಾರ್ಮಿಂಗ್ ಪರ್ಸಾನಿಲಿಟಿ ಮೂಲಕ ಗಮನ ಸೆಳೆದರು. ಜೂಹಿ ಚಾವ್ಲಾ ಕುಟುಂಬದ ಜೊತೆ ಇವರ ಕುಟುಂಬ ಗೆಳೆತನ ಹೊಂದಿದೆ. ಪಾರ್ಟಿಗಳಲ್ಲಿ ನಿರ್ದೇಶಕರ ಪರಿಚಯವನ್ನು ಕಿಯಾರಾಗೆ ಜೂಹಿ ಮಾಡಿದ್ದರು.
ರಿಯಾ ಸೇನ್
ರಿಯಾ ಸೇನ್ ಹಾಗೂ ರೈಮಾ ಸೇನ್ ಮೂನ್ ಮೂನ್ ಸೇನ್ನ ಮಕ್ಕಳು. ಅವರ ಅಜ್ಜಿ ಸುಚಿತ್ರಾ ಸೇನ್ ಅವರು ಖ್ಯಾತ ಬೆಂಗಾಲಿ ನಟಿ.
ರಣವೀರ್ ಸಿಂಗ್
ಇತ್ತೀಚೆಗೆ ರಣವೀರ್ ಸಿಂಗ್ ಅವರ ಆಡಿಷನ್ ವಿಡಿಯೋ ವೈರಲ್ ಆಗಿತ್ತು. ಇವರ ಮೊದಲ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. ಅಂದರೆ ಇವರ ಹಿನ್ನೆಲೆ ಏನು ಎಂಬುದು ನಿಮಗೆ ಅರ್ಥವಾಗಿರಬೇಕು. ರಣವೀರ್ ಸಿಂಗ್ ತಾಯಿ ಅಂಜು ಭವಾನಿ ಹಾಗೂ ಅನಿಲ್ ಕಪೂರ್ ಪತ್ನಿ ಸುನಿತಾ ಸಂಬಂಧಿಗಳು. ಹೀಗಾಗಿ ರಣವೀರ್ಗೆ ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿದೆ.
ಯಾಮಿ ಗೌತಮ್
ಯಾಮಿ ಗೌತಮ್ ಅವರು ‘ವಿಕ್ಕಿ ಡೋನರ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಅವರು ಮುಕೇಶ್ ಗೌತಮ್ನ ಮಗಳು. ಮುಕೇಶ್ ಪಂಜಾಬ್ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ.
ಇದನ್ನೂ ಓದಿ: ರಣವೀರ್ ಸಿಂಗ್ ಮೊದಲ ಆಡಿಷನ್ ಹೇಗಿತ್ತು ನೋಡಿ; ನೀವು ನಗೋದು ಗ್ಯಾರಂಟಿ
ಅಮೀಶಾ ಪಟೇಲ್
ಅಮೀಶಾ ಪಟೇಲ್ ಅವರ ತಾತ ರಜ್ನಿ ಪಟೇಲ್ ಅವರು ವಕೀಲರು ಹಾಗೂ ರಾಜಕಾರಣಿ. ಅವರು ‘ಕಹೋ ನಾ ಪ್ಯಾರ್ ಹೇ’ ಸಿನಿಮಾದಲ್ಲಿ ನಟಿಸಿದ್ದರು. ರಾಕೇಶ್ ರೋಷನ್ ಹಾಗೂ ರಜ್ನಿ ಪಟೇಲ್ ಗೆಳೆಯರು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.