AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಂ ಕಪೂರ್​ಗೆ ಗಿಫ್ಟ್ ಆಗಿ ಸಿಗಲಿದೆ 231 ಕೋಟಿ ರೂ. ಬೆಲೆಯ ಅಪಾರ್ಟ್​ಮೆಂಟ್

2018ರಲ್ಲಿ ಸೋನಂ ಹಾಗೂ ಆನಂದ್ ಅಹೂಜಾ ವಿವಾಹ ಆದರು. 2022ರಲ್ಲಿ ಸೋನಂಗೆ ಗಂಡು ಮಗು ಜನಿಸಿತು. ಈತನಿಗೆ ವಾಯು ಎಂದು ಹೆಸರು ಇಡಲಾಗಿದೆ. ಈ ದಂಪತಿ ಸಮಯ ಸಿಕ್ಕಾಗ ಲಂಡನ್​ನಿಂದ ಮುಂಬೈಗೆ ಬರುತ್ತಾ ಇರುತ್ತಾರೆ.  ಈಗ ಅವರಿಗೆ ದೊಡ್ಡ ಗಿಫ್ಟ್ ಸಿಗುತ್ತಿದೆ.

ಸೋನಂ ಕಪೂರ್​ಗೆ ಗಿಫ್ಟ್ ಆಗಿ ಸಿಗಲಿದೆ 231 ಕೋಟಿ ರೂ. ಬೆಲೆಯ ಅಪಾರ್ಟ್​ಮೆಂಟ್
ಆನಂದ್-ಸೋನಂ
ರಾಜೇಶ್ ದುಗ್ಗುಮನೆ
|

Updated on: Sep 14, 2024 | 6:52 AM

Share

ಸೋನಂ ಕಪೂರ್ ಅವರು ಹಾಯಾಗಿ ಸಂಸಾರ ನಡೆಸಿಕೊಂಡಿದ್ದಾರೆ. ಅವರು ಉದ್ಯಮಿ ಆನಂದ್ ಅಹೂಜಾ ಅವರನ್ನು ವರಿಸಿದ್ದು, ಲಂಡನ್​ನಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್​ನಲ್ಲಿ ಅಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಅವರ ಮಾವ ಈಗ ಲಂಡನ್​ನ ನೋಟಿಂಗ್ ಹಿಲ್​ ಜಿಲ್ಲೆಯಲ್ಲಿ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಇದು ಎಂಟಸ್ತಿನ ಕಟ್ಟಡ ಆಗಿದ್ದು, ಇದರ ಬೆಲೆ ಬರೋಬ್ಬರಿ 231.47 ಕೋಟಿ ರೂಪಾಯಿ. ಇಂಗ್ಲೆಂಡ್​ನಲ್ಲಿ ನಡೆದ ದೊಡ್ಡ ಡೀಲ್​ಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಮಗ ಹಾಗೂ ಸೊಸೆಗೆ ಇದನ್ನು ಉಡುಗೊರೆಯಾಗಿ ನೀಡುವ ಆಲೋಚನೆಯಲ್ಲಿ ಅವರಿದ್ದಾರಂತೆ.

ಚಾರಿಟೆಬಲ್ ಆರ್ಗನೈಸೇಷನ್​ನವರು ಈ ಕಟ್ಟಡವನ್ನು ಹೊಂದಿದ್ದರು. ಇದು ಪ್ರಮುಖ ಜಾಗದಲ್ಲಿ ಇತ್ತು. ಇದನ್ನು ಖರೀದಿ ಮಾಡಿ ಮಗ ಆನಂದ್ ಹಾಗೂ ಸೊಸೆ ಸೋನಂ ಕಪೂರ್​ಗೆ ಬಿಟ್ಟುಕೊಡಬೇಕು ಎನ್ನುವ ಆಲೋಚನೆ ಅವರಿಗೆ ಬಂದಿದೆ. ಇದು ಲಕ್ಷುರಿ ಅಪಾರ್ಟ್​ಮೆಂಟ್ ಆಗಿ ಬದಲಾಗಲಿದೆ.

2018ರಲ್ಲಿ ಸೋನಂ ಹಾಗೂ ಆನಂದ್ ಅಹೂಜಾ ವಿವಾಹ ಆದರು. 2022ರಲ್ಲಿ ಸೋನಂಗೆ ಗಂಡು ಮಗು ಜನಿಸಿತು. ಈತನಿಗೆ ವಾಯು ಎಂದು ಹೆಸರು ಇಡಲಾಗಿದೆ. ಈ ದಂಪತಿ ಸಮಯ ಸಿಕ್ಕಾಗ ಲಂಡನ್​ನಿಂದ ಮುಂಬೈಗೆ ಬರುತ್ತಾ ಇರುತ್ತಾರೆ.

ಸೋನಂ ಕಪೂರ್ ಅವರು ಲಂಡನ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮೊದಲು ಅವರು ಈ ಮನೆಯ ಟೂರ್​ನ ಫ್ಯಾನ್ಸ್​ಗೆ ನೀಡಿದ್ದರು. ಈಗ ಅವರ ಮಾವ ಖರೀದಿಸಿರೋ ಹೊಸ ಮನೆ ಯಾವ ರೀತಿಯಲ್ಲಿ ಇದೆ ಎನ್ನುವ ಕುತೂಹಲ ಫ್ಯಾನ್ಸ್​ನ ಕಾಡಿದೆ. ಇದನ್ನು ಅವರು ಮುಂದಿನ ದಿನಗಳಲ್ಲಿ ತೋರಿಸಬಹುದು.

ಇದನ್ನೂ ಓದಿ: ಬಟ್ಟೆಗಳಿಗಾಗಿ ವರ್ಷಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತಾರೆ ನಟಿ ಸೋನಂ ಕಪೂರ್

ಸೋನಂ ಕಪೂರ್ ಹಾಗೂ ಆನಂದ್ ಅಹೂಜಾ ಅವರು ಮುಂಬೈನಲ್ಲಿ ದುಬಾರಿ ಮನೆ ಹೊಂದಿದ್ದಾರೆ. ಈ ಮನೆಯಲ್ಲಿ ಸಾಕಷ್ಟು ಆರ್ಟ್​ವರ್ಕ್​ಗಳನ್ನು ಸೋನಂ ಕಲೆಕ್ಟ್​ ಮಾಡಿದ್ದಾರೆ. ಅವರು ಬೇರೆ ಬೇರೆ ಕಡೆ ತೆರಳಿದಾಗ ಒಂದಷ್ಟು ವಿಚಾರಗಳನ್ನು ಕಲೆ ಹಾಕಿ ತಂದಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಮೈಸೂರಿನ ಪ್ರತಿಭೆ ರಿಷಿತಾ ಸಾಧನೆ
ಮೈಸೂರಿನ ಪ್ರತಿಭೆ ರಿಷಿತಾ ಸಾಧನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ