
ಹಿಂದಿ ಚಿತ್ರರಂಗದ (Bollywood) ನಟಿ ರೇಖಾ (Rekha) ಇಂದು ದೊಡ್ಡ ಪರದೆಯ ಮೇಲೆ ಸಕ್ರಿಯವಾಗಿಲ್ಲದಿದ್ದರೂ, ಅವರು ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮಾತ್ರವಲ್ಲದೆ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. 70ನೇ ವಯಸ್ಸಿನಲ್ಲಿಯೂ ಅಭಿಮಾನಿಗಳು ರೇಖಾ ಅವರ ಸೌಂದರ್ಯಕ್ಕೆ ಬೆರಗಾಗಿದ್ದಾರೆ. ರೇಖಾ ಅನೇಕ ಚಿತ್ರಗಳಲ್ಲಿ ಬಲವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಆದರೆ ಅವರ ಖಾಸಗಿ ಜೀವನದಲ್ಲಿ ಅವರು ಅನೇಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು.
ರೇಖಾ ತಮ್ಮ ಜೀವನದಲ್ಲಿ ಪ್ರೀತಿಸಿ ಮದುವೆಯಾದರು, ಆದರೆ ಎಂದಿಗೂ ತಾಯಿಯಾಗಲು ಸಾಧ್ಯವಾಗಲಿಲ್ಲ. ಅವರ ದಿವಂಗತ ಪತಿ ಮುಖೇಶ್ ಅಗರ್ವಾಲ್ ಅವರು ರೇಖಾ ಅವರನ್ನು ಬಾಲಿವುಡ್ ತೊರೆಯುವಂತೆ ಕೇಳಿಕೊಂಡಿದ್ದರು. ಆ ಸಮಯದಲ್ಲಿ, ರೇಖಾ, ‘ನಾನು ಗರ್ಭಿಣಿಯಾದ ನಂತರ ನಟನೆಯನ್ನು ಬಿಡುತ್ತೇನೆ…’ ಎಂದು ಹೇಳಿದ್ದರು ಆದರೆ ಅವರ ಜೀವನದಲ್ಲಿ ಅದು ಎಂದಿಗೂ ಸಂಭವಿಸಲಿಲ್ಲ.
ಸಿಮಿ ಗರೇವಾಲ್ ಅವರೊಂದಿಗಿನ ಸಂದರ್ಶನವೊಂದರಲ್ಲಿ, ರೇಖಾ ತಮ್ಮ ಜೀವನದ ಬಗ್ಗೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು. ಮುಖೇಶ್ ಮತ್ತು ರೇಖಾ 1980ರಲ್ಲಿ ತಮ್ಮ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾದರು. ಆದರೆ ಅವರ ಸಂಬಂಧದಲ್ಲಿ ಯಾವುದೇ ಪ್ರೀತಿ ಇರಲಿಲ್ಲ. ರೇಖಾ ಮತ್ತು ಮುಖೇಶ್ ಮದುವೆಗೆ ಮೊದಲು ಒಮ್ಮೆ ಮಾತ್ರ ಭೇಟಿಯಾಗಿದ್ದರು. ಮುಖೇಶ್ ಅವರನ್ನು ಮದುವೆಯಾಗುವುದು ದೊಡ್ಡ ಅಪಾಯವಾಗಿತ್ತು ರೇಖಾ ಕೂಡ ಸಂದರ್ಶನದಲ್ಲಿ ಹೇಳಿದ್ದರು.
ಇದನ್ನೂ ಓದಿ:ಈ ಬಾಲಿವುಡ್ ನಟನ ಫಿಟ್ನೆಸ್, ಡ್ಯಾನ್ಸ್ಗೆ ಮರುಳಾಗದವರ್ಯಾರು?
ಮುಖೇಶ್ ಅಗರ್ವಾಲ್ ಸಾವಿನ ನಂತರ ರೇಖಾ ಆಘಾತಕ್ಕೊಳಗಾದರು. ತನ್ನ ಪತಿಯ ಸಾವಿನ ಸತ್ಯವನ್ನು ಒಪ್ಪಿಕೊಳ್ಳಲು ರೇಖಾ ಸಿದ್ಧರಿರಲಿಲ್ಲ. ನನಗೆ ಇದು ಏಕೆ ಸಂಭವಿಸುತ್ತಿದೆ? ಅಂತಹ ಅನೇಕ ಆಲೋಚನೆಗಳು ರೇಖಾ ಅವರನ್ನು ಸುತ್ತುವರೆದವು. ಇದಷ್ಟೇ ಅಲ್ಲ, ರೇಖಾ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದರು.
ಹನಿಮೂನ್ ಸಮಯದಲ್ಲಿ, ತಮ್ಮ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ರೇಖಾಗೆ ತಿಳಿದಿತ್ತು. ಆದಾಗ್ಯೂ ರೇಖಾ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಮುಖೇಶ್ಗೆ ರೇಖಾ ಸಿನಿಮಾಗಳಲ್ಲಿ ಕೆಲಸ ಮಾಡುವುದು ಇಷ್ಟವಾಗಲಿಲ್ಲ. ಮುಖೇಶ್ ರೇಖಾ ನಟನೆ ಬಿಡಬೇಕೆಂದು ಬಯಸಿದ್ದರು. ಶಾಕಿಂಗ್ ಎಂಬಂತೆ ಮುಖೇಶ್ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ ರೇಖಾ ಮತ್ತೆ ಮದುವೆ ಆಗಲೇ ಇಲ್ಲ. ತಾಯಿ ಆಗಬೇಕ ಎಂಬ ಅವರ ಕನಸು ಕನಸಾಗಿಯೇ ಉಳಿಯಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ