ಗುರುತು ಸಿಗದಂತೆ ಬದಲಾದ ರೆಮೋ ಡಿಸೋಜಾ ಪತ್ನಿ; 40 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ? ಸೀಕ್ರೆಟ್ ಇಲ್ಲಿದೆ

| Updated By: ಮದನ್​ ಕುಮಾರ್​

Updated on: Sep 20, 2021 | 8:11 AM

ರೆಮೋ ಡಿಸೋಜಾ ಪತ್ನಿ ಲಿಸೆಲ್ ಡಿಸೋಜಾ ಈ ಮೊದಲು ಬರೋಬ್ಬರಿ 105 ಕೆಜಿ ಇದ್ದರು. ಈಗ ಅವರು 65 ಕೆಜಿ ಆಗಿದ್ದಾರೆ! ಹೀಗೆ 40 ಕೆಜಿ ತೂಕ ಕಡಿಮೆ ಮಾಡಿಕೊಂಡಿರುವುದು ಸಣ್ಣ ಮಾತಲ್ಲ.

ಗುರುತು ಸಿಗದಂತೆ ಬದಲಾದ ರೆಮೋ ಡಿಸೋಜಾ ಪತ್ನಿ; 40 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ? ಸೀಕ್ರೆಟ್ ಇಲ್ಲಿದೆ
ರೆಮೋ ಡಿಸೋಜಾ, ಲಿಸೆಲ್​ ಡಿಸೋಜಾ
Follow us on

ಬಾಲಿವುಡ್​ನಲ್ಲಿ ಫೇಮಸ್​ ಆಗಿರುವ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರು ತಮ್ಮ ಪತ್ನಿಯ ಫೋಟೋ ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರೆಮೋ ಹೆಂಡತಿ ಲಿಸೆಲ್ ಡಿಸೋಜಾ ಅವರು ಗುರುತು ಸಿಗದ ರೀತಿಯಲ್ಲಿ ಬದಲಾಗಿದ್ದಾರೆ. ಈಗ ಅವರು ಭಾರಿ ಪ್ರಮಾಣದಲ್ಲಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಈ ಬದಲಾವಣೆ ಕಂಡು ಸ್ವತಃ ರಿಮೋ ಡಿಸೋಜಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೆಂಡತಿಯ ಈ ಬದ್ಧತೆ ಮತ್ತು ಪರಿಶ್ರಮಕ್ಕೆ ಅವರು ಹ್ಯಾಟ್ಸ್​ಆಫ್​ ಹೇಳಿದ್ದಾರೆ. ಸದ್ಯ ರೆಮೋ ಪತ್ನಿಯ ಫೋಟೋಗಳು ಎಲ್ಲೆಲ್ಲೂ ವೈರಲ್​ ಆಗುತ್ತಿದೆ. ಈ ಟ್ರಾನ್ಸ್​ಫಾರ್ಮೇಷನ್​​ ಹಿಂದಿನ ಸೀಕ್ರೆಟ್​ ಏನು ಎಂದು ಎಲ್ಲರೂ ಕೇಳುತ್ತಿದ್ದಾರೆ.

ಈ ಮೊದಲು ಲಿಸೆಲ್ ಬರೋಬ್ಬರಿ 105 ಕೆಜಿ ಇದ್ದರು. ಈಗ ಅವರು 65 ಕೆಜಿ ಆಗಿದ್ದಾರೆ! ಹೀಗೆ 40 ಕೆಜಿ ತೂಕ ಕಡಿಮೆ ಮಾಡಿಕೊಂಡಿರುವುದು ಸಣ್ಣ ಮಾತಲ್ಲ. ಹಾಗಾಗಿಯೇ ಅವರಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಇದಕ್ಕೆ ತುಂಬ ಪರಿಶ್ರಮ ಬೇಕಾಗುತ್ತದೆ. ಆದರೆ ದೊಡ್ಡ ಹೋರಾಟ ನಡೆಯುವುದು ನಮ್ಮ ಮನಸ್ಸಿನ ಒಳಗೆ. ಆ ರೀತಿ ಲಿಸೆಲ್ ಹೋರಾಡಿದ್ದನ್ನು ನಾನು ಕಂಡಿದ್ದೇನೆ. ಅಸಾಧ್ಯವಾಗಿದ್ದನ್ನು ಆಕೆ ಸಾಧಿಸಿ ತೋರಿಸಿದ್ದಾಳೆ. ಇದೆಲ್ಲವೂ ಮನಸ್ಸಿಗೆ ಸಂಬಂಧ ಪಟ್ಟಿದ್ದು’ ಎಂದು ರೆಮೋ ಡಿಸೋಜಾ ಬರೆದುಕೊಂಡಿದ್ದಾರೆ.

‘ನೀನು ಸಾಧಿಸಿದ್ದೀಯ. ನಿನ್ನ ಬಗ್ಗೆ ಹೆಮ್ಮೆ ಆಗುತ್ತದೆ. ನೀನು ನನಗಿಂತಲೂ ಗಟ್ಟಿಯಾಗಿದ್ದೀಯ. ನನಗೆ ನೀನೇ ಸ್ಫೂರ್ತಿ’ ಎಂದು ಹೆಂಡತಿಗೆ ರೆಮೋ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಲಿಸೆಲ್ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಪತಿ ನೀಡಿದ ಬೆಂಬಲಕ್ಕೆ ಲಿಸೆಲ್ ಧನ್ಯವಾದ ಹೇಳಿದ್ದಾರೆ.

ಈ ಪರಿ ಸ್ಲಿಮ್​ ಆಗಲು ಲಿಸೆಲ್ ಅವರು ಇಂಟರ್​ಮಿಟೆಂಟ್​​ ಫಾಸ್ಟಿಂಗ್​ ಮಾಡಿದ್ದಾರೆ. 2018ರ ಡಿಸೆಂಬರ್​ನಿಂದ ಅವರು ಈ ಅಭ್ಯಾಸ ಬೆಳೆಸಿಕೊಂಡರು. ಒಂದು ವರ್ಷದೊಳಗೆ 15ರಿಂದ 20 ಕೆಜಿ ಇಳಿಸಿಕೊಂಡರು. ನಂತರ ಜಿಮ್​ನಲ್ಲಿ ಸಿಕ್ಕಾಪಟ್ಟೆ ಕಸರತ್ತು ಮಾಡಲು ಆರಂಭಿಸಿದರು. ಕಟ್ಟುನಿಟ್ಟಿನ ಡಯೆಟ್​ ಮಾಡಿದ ಪರಿಣಾಮ ಅವರು ತಮ್ಮ ಗುರಿ ಸಾಧಿಸಿದರು.

ಇದನ್ನೂ ಓದಿ:

ಬಾಲಿವುಡ್​ನ ಖ್ಯಾತ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ ಹೃದಯಾಘಾತ

Remdesivir: ರೆಮಿಡಿಸಿವರ್ ಇಂಜೆಕ್ಷನ್​ಗೆ ಬಾಲಿವುಡ್ ಕೊರಿಯೋಗ್ರಾಫರ್​ ಹೆಸರು; ಫನ್ನಿ ವಿಡಿಯೋ ವೈರಲ್​

Published On - 8:07 am, Mon, 20 September 21