Riteish Deshmukh: ಬೆಂಗಳೂರು ಲಿಫ್ಟ್​ನಲ್ಲಿ ಆದ ಆ ಘಟನೆಯನ್ನು ರಿತೇಶ್ ಎಂದಿಗೂ ಮರೆಯಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Jun 13, 2024 | 12:02 PM

ಮಹಾರಾಷ್ಟ್ರದಲ್ಲಿ ರಿತೇಶ್​ ದೇಶ್​ಮುಖ್ ಹೆಚ್ಚು ಪರಿಚಿತರು. ಅವರು ಬಾಲಿವುಡ್ ಸಿನಿಮಾಗಳನ್ನು ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಅವರಿಗಿಂತ ಹೆಚ್ಚಿನ ಖ್ಯಾತಿ ಜೆನಿಲಿಯಾಗೆ ಇದೆ. ಇದನ್ನು ರಿತೇಶ್ ಕೂಡ ಒಪ್ಪಿಕೊಳ್ಳುತ್ತಾರೆ. ಕಪಿಲ್ ಶರ್ಮಾ ಶೋನಲ್ಲಿ ರಿತೇಶ್ ಹಾಗೂ ಜೆನಿಲಿಯಾ ಒಟ್ಟಾಗಿ ಆಗಮಿಸಿದ್ದರು. ಈ ವೇಳೆ ಅವರು ಬೆಂಗಳೂರಲ್ಲಿ ನಡೆದ ಘಟನೆ ಒಂದನ್ನು ವಿವರಿಸಿದ್ದಾರೆ.

Riteish Deshmukh: ಬೆಂಗಳೂರು ಲಿಫ್ಟ್​ನಲ್ಲಿ ಆದ ಆ ಘಟನೆಯನ್ನು ರಿತೇಶ್ ಎಂದಿಗೂ ಮರೆಯಲ್ಲ
ರಿತೇಶ್-ಜೆನಿಲಿಯಾ
Follow us on

ಜೆನಿಲಿಯಾ ಹಾಗೂ ರಿತೇಶ್ ದೇಶ್​ಮುಖ್ (Riteish Deshmukh) ಬಾಲಿವುಡ್​ನ ಕ್ಯೂಟ್ ಕಪಲ್​ಗಳು. ಇವರು ಹಲವು ವರ್ಷಗಳ ಕಾಲ ಪ್ರೀತಿಸಿ ಆ ಬಳಿಕ ಮದುವೆ ಆದರು. ಈಗ ಇವರು ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಇವರು ಸಿನಿಮಾ ಕೆಲಸಗಳ ಜೊತೆಗೆ ಮಕ್ಕಳ ಆರೈಕೆಗೂ ಒತ್ತು ನೀಡುತ್ತಿದ್ದಾರೆ. ಜೆನಿಲಿಯಾ ಅವರನ್ನು ರಿತೇಶ್ ತುಂಬಾನೇ ಪ್ರೀತಿಸುತ್ತಾರೆ. ಅವರು ಕಪಿಲ್ ಶರ್ಮಾ ಶೋನಲ್ಲಿ ಒಮ್ಮೆ ಭಾಗಿ ಆಗಿದ್ದರು. ಈ ವೇಳೆ ಎಲ್ಲರೂ ತಮ್ಮನ್ನು ಜೆನಿಲಿಯಾ ಗಂಡ ಎಂದು ಕರೆಯುತ್ತಾರೆ ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ರಿತೇಶ್​ ದೇಶ್​ಮುಖ್ ಹೆಚ್ಚು ಪರಿಚಿತರು. ಅವರು ಬಾಲಿವುಡ್ ಸಿನಿಮಾಗಳನ್ನು ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಅವರಿಗಿಂತ ಹೆಚ್ಚಿನ ಖ್ಯಾತಿ ಜೆನಿಲಿಯಾಗೆ ಇದೆ. ಇದನ್ನು ರಿತೇಶ್ ಕೂಡ ಒಪ್ಪಿಕೊಳ್ಳುತ್ತಾರೆ. ಕಪಿಲ್ ಶರ್ಮಾ ಶೋನಲ್ಲಿ ರಿತೇಶ್ ಹಾಗೂ ಜೆನಿಲಿಯಾ ಒಟ್ಟಾಗಿ ಆಗಮಿಸಿದ್ದರು. ಈ ವೇಳೆ ಅವರು ಬೆಂಗಳೂರಲ್ಲಿ ನಡೆದ ಘಟನೆ ಒಂದನ್ನು ವಿವರಿಸಿದ್ದಾರೆ. ಈ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ.

‘ನಾನು ಸೆಲೆಬ್ರಿಟಿ ಕ್ರಿಕೇಟ್ ಲೀಗ್ ಆಡುತ್ತಿದ್ದೆ. ನಾನು ಇದನ್ನು ಆಡಲು ಬೆಂಗಳೂರಿಗೆ ತೆರಳಿದ್ದೆ. ಹೋಟೆಲ್ ಲಿಫ್ಟ್​ನಲ್ಲಿ ತೆರಳುತ್ತಿದ್ದೆ. ಎರಡು ಜನರು ಬ್ಯಾಗ್ ತೆಗೆದುಕೊಂಡು ಹೋಗುತ್ತಿದ್ದರು. ಜೆನಿಲಿಯಾ ಪತಿ ಅಲ್ಲವೇ ಎಂದು ಕೇಳಿದರು. ನನಗೆ ಈಗೋ ಹರ್ಟ್ ಆಯಿತು’ ಎಂದು ಮಾತು ಆರಂಭಿಸಿದರು ರಿತೇಶ್.

‘ನಾನು ಇಲ್ಲಿ ಜೆನಿಲಿಯಾ ಪತಿ. ಮಹಾರಾಷ್ಟ್ರದಲ್ಲಿ ಜೆನಿಲಿಯಾ ನನ್ನ ಪತ್ನಿ ಎಂದು ಗುರುತಿಸಿಕೊಳ್ಳುತ್ತಾರೆ ಎಂದು ನಾನು ಅವರಿಗೆ ವಿವರಿಸಿದೆ. ನಿಮ್ಮ ಖ್ಯಾತಿ ಇರೋದು ಒಂದು ರಾಜ್ಯದಲ್ಲಿ ಮಾತ್ರ. ಆದರೆ, ಜೆನಿಲಿಯಾ ಕೆರಳ, ತಮಿಳುನಾಡು, ಕರ್ನಾಟಕ ಮೊದಲಾದ ಕಡೆಗಳಲ್ಲಿ ಫೇಮಸ್ ಆಗಿದ್ದಾರೆ. ಈ ರಾಜ್ಯಗಳಲ್ಲಿ ನೀವು ಜೆನಿಲಿಯಾ ಪತಿಯೇ ಎಂದು ಅಲ್ಲಿದವರು ನನ್ನನ್ನು ಅಣುಕಿಸಿದ್ದರು’ ಎಂದಿದ್ದರು ರಿತೇಶ್. ‘ನನಗೆ ಈ ಬಗ್ಗೆ ಯಾವುದೇ ಬೇಸರ ಇಲ್ಲ. ಜೆನೀಲಿಯಾ ಪತಿ ಎಂದು ಕರೆಸಿಕೊಳ್ಳಲು ನನಗೆ ಹೆಮ್ಮೆ ಇದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಮತ ಚಲಾಯಿಸಿ ಪೋಸ್ ಕೊಟ್ಟ ರಿತೇಶ್​-ಜೆನಿಲಿಯಾ; ಇಲ್ಲಿದೆ ವಿವರ  

ರಿತೇಶ್ ಅವರು 2023ರಲ್ಲಿ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅವರು ಈಗ ‘ಹೌಸ್​ಫುಲ್ 5’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ‘ರೇಡ್ 2’ ಮೊದಲಾದ ಸಿನಿಮಾಗಳೂ ಅವರ ಕೈಯಲ್ಲಿ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.