ಖ್ಯಾತ ಮಾಡೆಲ್, ನಟಿಗೆ ಕ್ಯಾನ್ಸರ್​; ಇಂಡಸ್ಟ್ರಿಯವರ ಮುಂದೆ ಭಾವುಕಳಾದ ನಟಿ

ಕ್ಯಾನ್ಸರ್ ಕಾಣಿಸಿಕೊಂಡ ನಂತರದಲ್ಲಿ ಕಿಮೋಥೆರಪಿಗೆ ಒಳಗಾಗಬೇಕು. ಮುಂದಿನ ಏಳು ತಿಂಗಳ ಕಾಲ ರೋಜ್ಲಿನಾ ಖಾನ್ ಈ ಥೆರಪಿ ಮಾಡಿಸಿಕೊಳ್ಳಲಿದ್ದಾರೆ

ಖ್ಯಾತ ಮಾಡೆಲ್, ನಟಿಗೆ ಕ್ಯಾನ್ಸರ್​; ಇಂಡಸ್ಟ್ರಿಯವರ ಮುಂದೆ ಭಾವುಕಳಾದ ನಟಿ
ರೋಜ್ಲಿನಾ
Edited By:

Updated on: Nov 12, 2022 | 4:52 PM

ಮಾಡೆಲ್ ಹಾಗೂ ನಟಿ ರೋಜ್ಲಿನಾ ಖಾನ್​​ಗೆ (Rozlyn Khan) ಖ್ಯಾನ್ಸರ್​ಗೆ ಒಳಗಾಗಿದ್ದಾರೆ. ಇದರಿಂದ ನಟಿಗೆ ಚಿಂತೆ ಶುರುವಾಗಿದೆ. ಒಳ್ಳೆಯ ವಿಚಾರ ಎಂದರೆ ಆರಂಭದ ಹಂತದಲ್ಲೇ ಕ್ಯಾನ್ಸರ್ ಇರುವ ವಿಚಾರ ಪತ್ತೆ ಆಗಿದೆ. ಹೀಗಾಗಿ, ಚಿಕಿತ್ಸೆ ಪಡೆದು ಅದರಿಂದ ಹೊರ ಬರುವ ಭರವಸೆಯಲ್ಲಿ ರೋಜ್ಲಿನಾ ಇದ್ದಾರೆ. ಸದ್ಯ ಅವರು ಶೇರ್ ಮಾಡಿಕೊಂಡಿರುವ ಭಾವುಕ ಪೋಸ್ಟ್​ಗೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ನಟಿಗೆ ಧೈರ್ಯ ತುಂಬವ ಕೆಲಸ ಮಾಡುತ್ತಿದ್ದಾರೆ.

ಕ್ಯಾನ್ಸರ್ ಕಾಣಿಸಿಕೊಂಡ ನಂತರದಲ್ಲಿ ಕಿಮೋಥೆರಪಿಗೆ ಒಳಗಾಗಬೇಕು. ಮುಂದಿನ ಏಳು ತಿಂಗಳ ಕಾಲ ರೋಜ್ಲಿನಾ ಖಾನ್ ಈ ಥೆರಪಿ ಮಾಡಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ರಿವೀಲ್ ಮಾಡುವ ಸಂದರ್ಭದಲ್ಲಿ ಬ್ರ್ಯಾಂಡ್​ಗಳಿಗೆ ಸವಾಲೊಂದನ್ನು ಎಸೆದಿದ್ದಾರೆ ರೋಜ್ಲಿನಾ. ‘ಬೋಳು ತಲೆಯ ಮಾಡೆಲ್ ಜತೆ ನೀವು ಕೆಲಸ ಮಾಡುತ್ತೀರಾ?’ ಎಂದು ಪ್ರಶ್ನೆ ಮಾಡಿದ್ದಾರೆ ಅವರು.

‘ಕ್ಯಾನ್ಸರ್​.. ದೇವರು ನನ್ನಂತಹ ಗಟ್ಟಿ ಸೈನಿಕರಿಗೆ ಕಠಿಣ ಯುದ್ಧಗಳನ್ನು ನೀಡುತ್ತಾನೆ. ಇದು ನನ್ನ ಬದುಕಿನ ಒಂದು ಅಧ್ಯಾಯ ಆಗಿರಬಹುದು. ನಂಬಿಕೆ ಹಾಗೂ ಭರವಸೆ ಇಟ್ಟುಕೊಳ್ಳಬೇಕು. ಎಲ್ಲಾ ಹಿನ್ನಡೆಗಳು ನನ್ನನ್ನ ಮತ್ತಷ್ಟು ಬಲಗೊಳಿಸುತ್ತದೆ. ಇದು ಕೂಡ’ ಎಂದು ರೋಜ್ಲಿನಾ ಪತ್ರ ಆರಂಭಿಸಿದ್ದಾರೆ.

‘ನನ್ನ ಮೇಲೆ ಪ್ರೀತಿ ಇರುವ ವ್ಯಕ್ತಿಗಳು ನನಗೋಸ್ಕರ ಪ್ರಾರ್ಥನೆ ಮಾಡುತ್ತಿದ್ದಾರೆ. ಏನಾಗುತ್ತದೆಯೋ ಅದು ಒಳ್ಳೆಯದಕ್ಕಾಗಿಯೇ ಆಗುತ್ತದೆ. ಕತ್ತಿನಲ್ಲಿ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರ ನೋವಿದೆ. ಆರಂಭದ ಹಂತದಲ್ಲೇ ಕ್ಯಾನ್ಸರ್ ಪತ್ತೆ ಆಗಿದ್ದು ಒಳ್ಳೆಯದೇ ಆಯಿತು. ನಾನು ಪ್ರತಿ ತಿಂಗಳು ಎರಡನೇ ವಾರ ಶೂಟ್​ಗೆ ಲಭ್ಯವಿದ್ದೇನೆ. ಮುಂದಿನ 7 ತಿಂಗಳು ಕೊಮೋಥೆರಪಿಗೆ ಒಳಪಡಬೇಕಿದೆ. ಪ್ರತಿಬಾರಿ ಕಿಮೋಥೆರಪಿ ಆದಾಗ ಒಂದು ವಾರ ವಿಶ್ರಾಂತಿ ಪಡೆಯಬೇಕು. ಈ ರೀತಿ ಬೊಕ್ಕು ತಲೆಯವರ ಜತೆ ನಿಮಗೆ (ಬ್ರ್ಯಾಂಡ್​ಗಳಿಗೆ) ಕೆಲಸ ಮಾಡಲು ಧೈರ್ಯ ಬೇಕು’ ಎಂದಿದ್ದಾರೆ ಅವರು. ರೋಜ್ಲಿನಾ​ಗೆ ಎಲ್ಲರೂ ಧೈರ್ಯ ತುಂಬವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಬಿಪಾಶಾ ಬಸು

ಕೆಲವೇ ಕೆಲವು ಸಿನಿಮಾಗಳಲ್ಲಿ ರೋಜ್ಲಿನಾ ಖಾನ್ ನಟಿಸಿದ್ದಾರೆ. ಅವರು ಹೆಚ್ಚಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

Published On - 4:32 pm, Sat, 12 November 22