ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ಪೊಲೀಸರು

|

Updated on: Apr 18, 2023 | 1:08 PM

ಆರತಿ ಅವರು ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂತು. ಹೀಗಾಗಿ, ಪೊಲೀಸರು ಮಾರುವೇಶದಲ್ಲಿ ಅವರ ಬಳಿ ತೆರಳಿದ್ದರು.

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ಪೊಲೀಸರು
ಆರತಿ
Follow us on

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಕಿರುತೆರೆ ನಟಿ ಆರತಿ ಹರೀಶ್​ಚಂದ್ರ ಮಿತ್ತಲ್ (Aarti Mittal) ಅವರನ್ನು ಪೊಲೀಸರು ಬಂಧಿಸಿದ್ದಾರೆ. ರೆಡ್ ಹ್ಯಾಂಡ್​ ಆಗಿ ಅವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮಾಡೆಲ್​​ಗಳನ್ನು ಬಳಕೆ ಮಾಡಿಕೊಂಡು ಈ ದಂಧೆಯನ್ನು ನಡೆಸುತ್ತಿದ್ದರು ಎಂಬುದನ್ನು ಪೊಲೀಸರು ಹೇಳಿದ್ದಾರೆ. ಇತ್ತೀಚೆಗೆ ಅವರು ಕಾಸ್ಟಿಂಗ್ ಡೈರೆಕ್ಟರ್​ ಆಗಿಯೂ ಕೆಲಸ ಮಾಡುತ್ತಿದ್ದರು. ಸದ್ಯ ಅವರ ಬಂಧನ ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಸದ್ಯ ಪ್ರಕರಣ ತನಿಖೆಯಲ್ಲಿದೆ.

‘ಅಪ್ನಾಪನ್’ ಸೇರಿ ಕೆಲವು ಧಾರಾವಾಹಿಗಳಲ್ಲಿ ಆರತಿ ಕಾಣಿಸಿಕೊಂಡಿದ್ದರು. ಅವರು ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂತು. ಹೀಗಾಗಿ, ಪೊಲೀಸರು ಮಾರುವೇಶದಲ್ಲಿ ಅವರ ಬಳಿ ತೆರಳಿದ್ದರು. ತಾವು ಗ್ರಾಹಕರು ಎಂದು ಪೊಲೀಸರು ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದರು. ಇದನ್ನು ರೆಕಾರ್ಡ್ ಮಾಡಲಾಗಿತ್ತು. ಎರಡು ಮಾಡೆಲ್​ಗಳು ಈ ರಾಕೆಟ್​ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ಮಾಡೆಲ್​​ಗಳಿಗೆ ಆರತಿ ಅವರು ಭರ್ಜರಿಯಾಗಿ ಹಣ ನೀಡುತ್ತಿದ್ದರು. ಹಣದ ಆಸೆಗೆ ಅವರು ಗ್ರಾಹಕರ ಬಳಿ ತೆರಳುತ್ತಿದ್ದರು.

ಇನ್​ಸ್ಪೆಕ್ಟರ್ ಮನೋಜ್ ಸುತಾರ್ ಅವರಿಗೆ ಈ ವೇಶ್ಯಾವಾಟಿಕೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರು ಆರತಿ ಬಳಿ ತೆರಳಿ ತಾವು ಗ್ರಾಹಕರು ಎಂದು ಹೇಳಿಕೊಂಡರು. ಇಬ್ಬರು ಹುಡುಗಿಯರು ಬೇಕು ಮತ್ತು ಅವರನ್ನು ಹೋಟೆಲ್​ಗೆ ಕಳುಹಿಸುವಂತೆ ಮನೋಜ್ ಕೇಳಿದ್ದರು. ಇದಕ್ಕೆ ಪ್ರತಿಯಾಗಿ 60 ಸಾವಿರ ರೂಪಾಯಿ ನೀಡುವಂತೆ ಆರತಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಮನೋಜ್ ಒಪ್ಪಿದರು.

ಇದನ್ನೂ ಓದಿ: ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ನಟಿಯರು ಇವರೇ; ವೃತ್ತಿಜೀವನವೇ ಹಾಳಾಯ್ತು

ಹೋಟೆಲ್ ರೂಂ ಒಳಗೆ ತೆರಳುವುದಕ್ಕೂ ಮುನ್ನ ತನ್ನ ಗ್ರಾಹಕರಿಗೆ ಆರತಿ ಕಾಂಡೋಂಮ್ ನೀಡಿದ್ದರು. ಇದೆಲ್ಲವನ್ನೂ ಪೊಲೀಸರು ಶೂಟ್ ಮಾಡಿಕೊಂಡಿದ್ದಾರೆ. ಪ್ರತಿ ಮಾಡೆಲ್​ಗೆ 15 ಸಾವಿರ ರೂಪಾಯಿ ಹಣವನ್ನು ಆರತಿ ನೀಡುತ್ತಿದ್ದರು. ಉಳಿದ ಹಣವನ್ನು ತಾವೇ ಇಟ್ಟುಕೊಳ್ಳುತ್ತಿದ್ದರು. ಸದ್ಯ ಆರತಿ ವಿರುದ್ಧ ಕೇಸ್ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಆರತಿ ಅವರು ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕೆಲ ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಆರ್​ ಮಾಧವನ್ ಜೊತೆ ಬಣ್ಣ ಹಚ್ಚುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ಈಗ ಅವರು ಇಷ್ಟು ದೊಡ್ಡ ದಂಧೆ ನಡೆಸುತ್ತಿರುವ ವಿಚಾರ ಸಾಕಷ್ಟು ಸಂಚಲನ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:06 pm, Tue, 18 April 23