ಹನಿಟ್ರ್ಯಾಪ್ ಪ್ರಕರಣದಲ್ಲಿ ಶ್ರೀದೇವಿ ಮಗಳ ಪಾತ್ರ ಮಾಡಿದ್ದ ನಟಿಯ ಹೆಸರು; ಪಾಕ್ ಸೇನೆಗೆ ಹೀರೋಯಿನ್ ಸಹಾಯ

| Updated By: ರಾಜೇಶ್ ದುಗ್ಗುಮನೆ

Updated on: Jan 05, 2023 | 11:44 AM

ಪಾಕಿಸ್ತಾನ ಸೇನೆಯ ನಿವೃತ್ತ ಅಧಿಕಾರಿ ಮೇಜರ್ ಆದಿಲ್ ರಾಜಾ ಅವರು ಪಾಕಿಸ್ತಾನದ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ. ಸೋಲ್ಜರ್ ಸ್ಪೀಕ್ಸ್ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಆದಿಲ್ ನಡೆಸುತ್ತಿದ್ದಾರೆ. 3 ಲಕ್ಷಕ್ಕೂ ಹೆಚ್ಚಿನ ಚಂದಾದಾರರು ಈ ಚಾನೆಲ್​​ಗೆ ಇದ್ದಾರೆ.

ಹನಿಟ್ರ್ಯಾಪ್ ಪ್ರಕರಣದಲ್ಲಿ ಶ್ರೀದೇವಿ ಮಗಳ ಪಾತ್ರ ಮಾಡಿದ್ದ ನಟಿಯ ಹೆಸರು; ಪಾಕ್ ಸೇನೆಗೆ ಹೀರೋಯಿನ್ ಸಹಾಯ
ಶ್ರೀದೇವಿ-ಸಾಜಲ್
Follow us on

ಬಾಲಿವುಡ್​ (Bollywood) ಸಿನಿಮಾಗಳಲ್ಲಿ ನಟಿಸಿದ್ದ ಪಾಕಿಸ್ತಾನದ ಹೀರೋಯಿನ್ ಸಾಜಲ್ ಅಲಿ (Sajal Ali) ವಿರುದ್ಧ ಈಗ ಗಂಭೀರ ಆರೋಪ ಒಂದು ಕೇಳಿ ಬಂದಿದೆ. ಪಾಕಿಸ್ತಾನದ ಸೇನೆ ನಡೆಸುವ ಹನಿಟ್ರ್ಯಾಪ್​​ಗಳಿಗೆ ಸಾಜಲ್ ಬಳಕೆ ಆಗುತ್ತಿದ್ದರು ಎಂಬ ಆರೋಪ ಮಾಡಲಾಗಿದೆ. ಸಾಜಲ್ ಮಾತ್ರವಲ್ಲದೆ ಇನ್ನೂ ಅನೇಕ ಪಾಕಿಸ್ತಾನಿ ಹೀರೋಯಿನ್​ಗಳು ಇದಕ್ಕೆ ಬಳಕೆ ಆಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಈ ಹೇಳಿಕೆ ಸಾಕಷ್ಟು ಸೆನ್ಸೇಷನ್​ ಸೃಷ್ಟಿ ಮಾಡಿದೆ. ಈ ಆರೋಪದ ಬೆನ್ನಲ್ಲೇ ಸಾಜಲ್ ಉತ್ತರಿಸಿದ್ದು, ಇದನ್ನು ಅಲ್ಲಗಳೆದಿದ್ದಾರೆ.

ಪಾಕಿಸ್ತಾನ ಸೇನೆಯ ನಿವೃತ್ತ ಅಧಿಕಾರಿ ಮೇಜರ್ ಆದಿಲ್ ರಾಜಾ ಅವರು ಪಾಕಿಸ್ತಾನದ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ. ಸೋಲ್ಜರ್ ಸ್ಪೀಕ್ಸ್ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಆದಿಲ್ ನಡೆಸುತ್ತಿದ್ದಾರೆ. 3 ಲಕ್ಷಕ್ಕೂ ಹೆಚ್ಚಿನ ಚಂದಾದಾರರು ಈ ಚಾನೆಲ್​​ಗೆ ಇದ್ದಾರೆ. ಇತ್ತೀಚೆಗೆ ವಿಡಿಯೋ ಒಂದನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಾಜಲ್ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ ಆದಿಲ್. ‘ಸಾಜಲ್ ಸೇರಿ ಅನೇಕ ಹೀರೋಯಿನ್​​ಗಳು ಹನಿಟ್ರ್ಯಾಪ್​ಕೆ ಬಳಕೆ ಆಗುತ್ತಿದ್ದಾರೆ. ಪಾಕಿಸ್ತಾನ ಸೇನೆ ಇವರನ್ನು ಬಳಸಿಕೊಳ್ಳುತ್ತಿದೆ’ ಎಂದು ಆದಿಲ್ ಆರೋಪಿಸಿದ್ದಾರೆ.

ನಟಿಯ ಉತ್ತರ ಏನು?

ಸಾಜಲ್ ಅವರು ಆದಿಲ್ ಹೇಳಿಕೆಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ‘ನಮ್ಮ ದೇಶವು ನೈತಿಕವಾಗಿ ಕೊಳಕು ಸ್ಥಿತಿ ತಲುಪುತ್ತಿರುವುದು ತುಂಬಾ ದುಃಖಕರ ವಿಚಾರ. ಚಾರಿತ್ರ್ಯ ವಧೆ ಪಾಪದ ಕೆಟ್ಟ ರೂಪ’ ಎಂದು ಅವರು ಹೇಳಿದ್ದಾರೆ.

ಸಾಜಲ್ ಹಿನ್ನೆಲೆ

ಸಾಜಲ್ ಅವರು ಜನಿಸಿದ್ದು 1994ರಲ್ಲಿ. 2009ರಲ್ಲಿ ಜಿಯೋ ಟಿವಿಯಲ್ಲಿ ಪ್ರಸಾರ ಕಂಡ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. 2017ರಲ್ಲಿ ರಿಲೀಸ್ ಆದ ರವಿ ಉದ್ಯಾವರ್ ನಿರ್ದೇಶನದ ‘ಮಾಮ್​’ ಚಿತ್ರದಲ್ಲಿ ಶ್ರೀದೇವಿ ಮಗಳ ಪಾತ್ರದಲ್ಲಿ ಸಾಜಲ್ ನಟಿಸಿದ್ದರು. ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಅಕ್ಷಯ್ ಖನ್ನಾ ಕೂಡ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:43 am, Thu, 5 January 23