‘ಬಿಗ್ ಬಾಸ್ ಹಿಂದಿ ಸೀಸನ್ 18’ರ ಫಿನಾಲೆಗೆ ಅಕ್ಷಯ್ ಕುಮಾರ್ ಅವರು ಅತಿಥಿಯಾಗಿ ಬರಬೇಕಿತ್ತು. ಶೂಟ್ ವಿಳಂಬ ಆದ ಕಾರಣ ಅವರು ಬಿಗ್ ಬಾಸ್ ಸೆಟ್ ತೊರೆದು ನಡೆದರು. ಆದರೆ, ಸಲ್ಮಾನ್ ಖಾನ್ ಜೊತೆ ಆಮಿರ್ ಖಾನ್ ಅವರು ಫಿನಾಲೆಯಲ್ಲಿ ಕಾಣಿಸಿಕೊಂಡರು. ಜುನೈದ್ ಖಾನ್ ಹಾಗೂ ಖುಷಿ ಕಪೂರ್ ಕೂಡ ವೇದಿಕೆ ಮೇಲೆ ಇ್ದರು. ವೇದಿಕೆ ಮೇಲೆ ಸಲ್ಮಾನ್ ಖಾನ್ ಅವರು ಹಳೆಯ ಘಟನೆ ನೆನೆದರು. ಇಬ್ಬರೂ ಒಟ್ಟಾಗಿ ನಟಿಸಿದ ದಿನಗಳನ್ನು ನೆನಪಿಸಿಕೊಂಡರು.
1994ರಲ್ಲಿ ಬಂದ ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾದಲ್ಲಿ ಆಮಿರ್ ಹಾಗೂ ಸಲ್ಮಾನ್ ಒಟ್ಟಾಗಿ ನಟಿಸಿದ್ದರು. ರಾಜ್ಕುಮಾರ್ ಸಂತೋಷಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾದಲ್ಲಿನ ನಟನೆಗೆ ಆಮಿರ್ ಖಾನ್ ಅವರನ್ನು ಸಲ್ಮಾನ್ ಖಾನ್ ಹೊಗಳಿದ್ದರು. ಈ ವಿಡಿಯೋನ ಆಮಿರ್ ಈಗ ನೋಡಿದ್ದಾರೆ. ‘ಈ ವಿಡಿಯೋನ ನಾನು ನೋಡಿರಲಿಲ್ಲ. ಈಗ 30 ವರ್ಷಗಳ ಬಳಿಕ ಈ ವಿಡಿಯೋ ನೋಡುತ್ತಿದ್ದೇನೆ. ಆ ವಿಡಿಯೋದಲ್ಲಿ ಸಾಕಷ್ಟು ಪ್ರೀತಿಯೊಂದಿಗೆ ಅವರು ಮಾತನಾಡಿದ್ದಾರೆ’ ಎಂದಿದ್ದಾರೆ ಆಮಿರ್.
ಇದನ್ನೂ ಓದಿ:ಬಿಗ್ ಬಾಸ್ ನಡೆಸಿಕೊಡಲು ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು?
‘ನಾನು ಆಮಿರ್ ಖಾನ್ ಅವರ ಸಂದರ್ಶನಗಳನ್ನು ನೋಡಿದ್ದೇನೆ. ನಾನು ತಡವಾಗಿ ಸೆಟ್ಗೆ ಬರುತ್ತೇನೆ ಎಂದು ಅವರು ಆರೋಪಿಸಿದ್ದರು. ನನ್ನ ಜೊತೆ ಮತ್ತೆ ಕೆಲಸ ಮಾಡೋದಿಲ್ಲ ಎಂದು ಆಮಿರ್ ಕೊನೆಯ ದಿನ ಸೆಟ್ನಲ್ಲಿ ಹೇಳಿದ್ದರು’ ಎಂದರು ಸಲ್ಮಾನ್ ಖಾನ್. ಆದರೆ, ಈಗ ಆಮಿರ್ ಖಾನ್ ಬದಲಾಗಿದ್ದಾರೆ. ‘ಆ ಸಂದರ್ಭದಲ್ಲಿ ಇದ್ದ ಭಾವನೆ ಅದು. ಆದರೆ, ಈಗ ಭಾವನೆ ಬದಲಾಗಿದೆ. ಸಲ್ಮಾನ್ ಅವರನ್ನು ಹೊಗಳುವ ಹಂತಕ್ಕೆ ಬಂದಿದ್ದೇನೆ. ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು’ ಎಂದು ಆಮಿರ್ ಖಾನ್ ಅವರು ಪ್ರೀತಿಯಿಂದ ಹೇಳಿಕೊಂಡರು.
‘ಆಮಿರ್ ಖಾನ್ ಒಂದೇ ಸಿನಿಮಾ ಮಾಡುತ್ತಿದ್ದರು. ನಾನು 15 ಸಿನಿಮಾಗಳ ಮಧ್ಯೆ ಒದ್ದಾಡುತ್ತಿದ್ದೆ. ಆಮಿರ್ ಖಾನ್ ಮುಂಜಾನೆ 7 ಗಂಟೆಗೆ ಸೆಟ್ನಲ್ಲಿ ಇರುತ್ತಿದ್ದರು. ನಾನು ಮತ್ತೊಂದು ಸಿನಿಮಾ ಶೂಟ್ ಮುಗಿಸಿ ಅಲ್ಲಿಗೆ ಹೋಗುವಾಗ ವಿಳಂಬ ಆಗುತ್ತಿತ್ತು’ ಎಂದಿದ್ದಾರೆ ಸಲ್ಮಾನ್ ಖಾನ್. ಈ ಮೂಲಕ ಚಿತ್ರದ ಸೆಟ್ಗೆ ತಡವಾಗಿ ಬರುತ್ತಿದ್ದು ಏಕೆ ಎಂಬುದನ್ನು ವಿವರಿಸಿದರು. ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಒಟ್ಟಾಗಿ ಸಿನಿಮಾ ಮಾಡಬೇಕು ಎಂಬುದು ಅನೇಕರ ಕೋರಿಕೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ