AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ಕೃಷಿ ಮಾಡುವ ಕನಸು ಹೊಂದಿದ್ದರು ಸುಶಾಂತ್ ಸಿಂಗ್ ರಜಪೂತ್

ಐದು ವರ್ಷಗಳ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನವು ಭಾರತವನ್ನು ತಲ್ಲಣಗೊಳಿಸಿತ್ತು. ಅವರ ಸಾವಿನ ಸುತ್ತಲೂ ಅನೇಕ ಅನುಮಾನಗಳು ಉಳಿದಿವೆ. ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಇನ್ನೂ ಹಾಗೆಯೇ ಉಳಿದಿದೆ. ಈ ಲೇಖನದಲ್ಲಿ ಸುಶಾಂತ್ ಅವರ ಜೀವನ, ಕನಸುಗಳು ಮತ್ತು ಸಾವಿನ ಸುತ್ತಲಿನ ವಿವಾದಗಳನ್ನು ಚರ್ಚಿಸಲಾಗಿದೆ.

ಕೊಡಗಿನಲ್ಲಿ ಕೃಷಿ ಮಾಡುವ ಕನಸು ಹೊಂದಿದ್ದರು ಸುಶಾಂತ್ ಸಿಂಗ್ ರಜಪೂತ್
ಸುಶಾಂತ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jan 21, 2025 | 8:07 AM

Share

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ನಿಧನ ಹೊಂದಿ ಐದು ವರ್ಷಗಳೇ ಕಳೆದಿವೆ. ಆದರೆ, ಅವರಿಲ್ಲ ಎಂಬ ನೋವು ಮಾಸುವಂಥದ್ದಲ್ಲ. ಇಂದು (ಜನವರಿ 21) ಅವರ ಜನ್ಮದಿನ. ಆದರೆ, ಅವರಿಲ್ಲ ಎಂಬ ನೋವಿನಲ್ಲೇ ಫ್ಯಾನ್ಸ್ ಈ ದಿನವನ್ನು ಆಚರಿಸುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸುಶಾಂತ್ ಸಿಂಗ್ ಸದಾ ಆ್ಯಕ್ಟೀವ್ ಆಗಿರುತ್ತಿದ್ದರು. ಅವರು ಹಲವು ಕನಸು ಕಂಡಿದ್ದರು.

ಸುಶಾಂತ್ ಸಿಂಗ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ಆದರೆ, 2020ರ ಜೂನ್​ನಲ್ಲಿ ಅವರು ನಿಧನ ಹೊಂದಿದರು. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಇನ್ನೂ ಸಿಬಿಐ ವರದಿ ನೀಡಿಲ್ಲ. ಅವರ ಜನ್ಮದಿನದ ಪ್ರಯುಕ್ತ ಹಳೆಯ ಘಟನೆಯನ್ನು ನೆನಪಿಸಿಕೊಳ್ಳಲಾಗುತ್ತಿದೆ.

ಸುಶಾಂತ್ ಸಿಂಗ್ ಅವರಿಗೆ ನಟನೆಯನ್ನು ತೊರೆಯಬೇಕು ಎಂಬ ಆಸೆ ಇತ್ತು. ಆ ಬಳಿಕ ಅವರು ಕೊಡಗಿನಲ್ಲಿ ಸೆಟಲ್ ಆಗಬೇಕು ಎಂದುಕೊಂಡಿದ್ದರು. ಈ ಪ್ರಕ್ರಿಯೆಯಲ್ಲಿ ಅವರ ಆಪ್ತ ಎನಿಸಿಕೊಂಡಿದ್ದ ಮಹೇಶ್ ಶೆಟ್ಟಿ ಕೂಡ ಇದರಲ್ಲಿ ಭಾಗಿ ಆಗುವ ಆಸೆ ಇಟ್ಟುಕೊಂಡಿದ್ದರು.

ಹಾಗಾದರೆ ಸುಶಾಂತ್ ಸಿಂಗ್ ಅವರು ಈ ಯೋಜನೆಯನ್ನು ಕೈಬಿಟ್ಟಿದ್ದು ಏಕೆ? ಅದಕ್ಕೆ ಕಾರಣವೂ ಇದೆ. ಸುಶಾಂತ್ ಅವರ ಆಪ್ತೆ ಎನಿಸಿಕೊಂಡಿದ್ದ ರಿಯಾ ಚಕ್ರವರ್ತಿ ಅವರು ಈ ಯೋಜನೆಗೆ ವಿರೋಧ ಹೊರಹಾಕಿದ್ದರು. ಈ ಕಾರಣದಿಂದಲೇ ಅವರು ಈ ಪ್ಲ್ಯಾನ್ ಕೈಬಿಟ್ಟಿದ್ದರು ಎಂದು ಹೇಳಲಾಗಿದೆ. ಸುಶಾಂತ್ ಸಿಂಗ್ ಅವರ ಸಾವಿನ ಕೇಸ್​ನ ಆರಂಭದಲ್ಲಿ ಆತ್ಮಹತ್ಯೆ ಎಂದೇ ಪರಿಗಣಿಸಲಾಗಿತ್ತು. ಆದರೆ, ಇದರಲ್ಲಿ ಕೊಲೆಯ ಅನುಮಾನ ಮೂಡಿದ್ದರಿಂದ ಈ ಕೇಸ್​ನ ಸಿಬಿಐಗೆ ವಹಿಸಲಾಗಿದೆ.

ರಿಯಾ ಚಕ್ರವರ್ತಿ ಅವರು ಸುಶಾಂತ್​ನ ಪ್ರೀತಿಸುತ್ತಿದ್ದರು. ಅವರು ಸುಶಾಂತ್ ಅವರಿಂದ ಹಣವನ್ನು ವರ್ಗಾವಣೆ ಮಾಡಿಕೊಂಡ ಆರೋಪವನ್ನೂ ಎದುರಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸುಶಾಂತ್ ಅವರ ಸಾವಿಗೆ ಇವರೇ ಕಾರಣ ಎನ್ನುವ ಆರೋಪವೂ ಇದೆ. ಸುಶಾಂತ್ ಖಾತೆಯಿಂದ ಹಲವು ಬಾರಿ ರಿಯಾ ಖಾತೆಗೆ ಹಣ ವರ್ಗಾವಣೆ ಕೂಡ ಆಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ‘ಎರಡನೇ ಅಧ್ಯಾಯ’ ಆರಂಭಿಸಿದ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಗರ್ಲ್​ಫ್ರೆಂಡ್

ಸುಶಾಂತ್ ಸಿಂಗ್ ಅವರ ಸಾವಿನ ಬಗ್ಗೆ ಇರುವ ಎಲ್ಲಾ ಅನುಮಾನಗಳಿಗೆ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ, ತನಿಖೆ ಇನ್ನೂ ಪ್ರಗತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:00 am, Tue, 21 January 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ