Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎರಡನೇ ಅಧ್ಯಾಯ’ ಆರಂಭಿಸಿದ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಗರ್ಲ್​ಫ್ರೆಂಡ್

ಸುಶಾಂತ್ ಸಿಂಗ್ ಮರಣಾನಂತರ ತೀವ್ರ ನಿಂದನೆ, ಟೀಕಿ, ಮೂದಲಿಕೆಗಳಿಗೆ ಗುರಿಯಾಗಿದ್ದ ನಟಿ ರಿಯಾ ಚಕ್ರವರ್ತಿಗೆ ಸಿನಿಮಾ ಅವಕಾಶಗಳು ಸಹ ನಿಂತು ಹೋಗಿವೆ. ಆದರೆ ಎದೆಗುಂದದ ರಿಯಾ ‘ಎರಡನೇ ಅಧ್ಯಾಯ’ ಪ್ರಾರಂಭಿಸಿದ್ದಾರೆ.

‘ಎರಡನೇ ಅಧ್ಯಾಯ’ ಆರಂಭಿಸಿದ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಗರ್ಲ್​ಫ್ರೆಂಡ್
Follow us
ಮಂಜುನಾಥ ಸಿ.
|

Updated on:Jul 23, 2024 | 10:44 AM

ಸುಶಾಂತ್ ಸಿಂಗ್ ನಿಧನ ಇಡೀ ಬಾಲಿವುಡ್ ಅನ್ನೇ ಬುಡಮೇಲು ಮಾಡಿಬಿಟ್ಟಿತ್ತು. ಸುಶಾಂತ್ ಸಿಂಗ್ ನಿಧನದ ಬಳಿಕ ಹೊರಬಂದ ಡ್ರಗ್ಸ್ ಪ್ರಕರಣದಿಂದಾಗಿ ಬಾಲಿವುಡ್​ನ ಹಲವು ಪ್ರಮುಖ ನಟ, ನಟಿಯರು, ನಿರ್ಮಾಪಕರು ಹಲವು ಟೀಕೆಗಳನ್ನು, ಮೂದಲಿಕೆಗಳನ್ನು ಜೊತೆಗೆ ಎನ್​ಸಿಬಿಯ ವಿಚಾರಣೆಯನ್ನು ಎದುರಿಸಬೇಕಾಯ್ತು. ಕೆಲವರು ಜೈಲು ಸಹ ಸೇರಿದರು. ಆದರೆ ಸುಶಾಂತ್ ಸಿಂಗ್ ನಿಧನದಿಂದ ಅತಿ ಹೆಚ್ಚು ಸಂಕಷ್ಟ ಅನುಭವಿಸಿದ್ದ ಅವರ ಗರ್ಲ್​ಫ್ರೆಂಡ್ ರಿಯಾ ಚಕ್ರವರ್ತಿ. ಕೊಲೆ ಆರೋಪ ಹೊತ್ತರು, ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ತೀವ್ರ ನಿಂದನೆ ಅನುಭವಿಸಿದರು. ಜೈಲು ಸಹ ಸೇರಿದರು. ಸಾಕಷ್ಟು ನೋವು, ನಿಂದನೆ ಅನುಭವಿಸಿದ ಬಳಿಕ ರಿಯಾ ಚಕ್ರವರ್ತಿ ಮತ್ತೆ ಪುಟಿದೆದ್ದಿದ್ದಾರೆ. ಇದೀಗ ಎರಡನೇ ಅಧ್ಯಾಯ ಪ್ರಾರಂಭಿಸಿದ್ದಾರೆ.

ಸುಶಾಂತ್ ಸಿಂಗ್ ಪ್ರಕರಣದ ಬಳಿಕ ರಿಯಾ ಚಕ್ರವರ್ತಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುವುದು ಕಡಿಮೆ ಆಗಿದೆ. ಸುಶಾಂತ್ ನಿಧನಕ್ಕೂ ಮುನ್ನ ನಟಿಸಿದ್ದ ‘ಚೆಹರೆ’ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು. ಅದಾದ ಬಳಿಕ ಯಾವುದೇ ಸಿನಿಮಾದಲ್ಲಿ ರಿಯಾ ನಟಿಸಿಲ್ಲ, ಅವರಿಗೆ ಅವಕಾಶವೂ ಸಿಗಲಿಲ್ಲ ಎನ್ನಲಾಗುತ್ತಿದೆ. ಆದರೆ ಇದಕ್ಕೆಲ್ಲ ಕುಗ್ಗದ ರಿಯಾ, ಟಿವಿ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದರು. ಅಲ್ಲಿ ಜಡ್ಜ್ ಆದರು. ಇದೀಗ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿರುವ ರಿಯಾ, ಸೆಲೆಬ್ರಿಟಿ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಜೀವನದಲ್ಲಿ ಸೋತು, ಗೆದ್ದವರ ಕತೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ:ಸುಶಾಂತ್ ಸಾವಿನಿಂದ ಬದಲಾಯಿತು ರಿಯಾ ಚಕ್ರವರ್ತಿ ಜೀವನ; ಇರುವ ಆರೋಪ ಒಂದೆರಡಲ್ಲ

ರಿಯಾ ಚಕ್ರವರ್ತಿ, ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ತೆರೆದಿದ್ದು, ‘ಚಾಪ್ಟರ್ 2’ ಹೆಸರಿನಲ್ಲಿ ಪಾಡ್​ಕಾಸ್ಟ್ ಸರಣಿ ಆರಂಭಿಸಿದ್ದಾರೆ. ತಮ್ಮ ಪಾಡ್​ಕಾಸ್ಟ್​ಗೆ ಮೊದಲ ಅತಿಥಿಯಾಗಿ ಸುಷ್ಮಿತಾ ಸೇನ್ ಅವರನ್ನು ಆಹ್ವಾನಿಸಿದ್ದು, ಅವರೊಟ್ಟಿಗೆ ಹಲವು ವಿಷಯ ಚರ್ಚಿಸಿದ್ದಾರೆ. ಜೀವನದ ಸವಾಲುಗಳು, ಸಿಂಗಲ್ ಪೇರೆಂಟಿಗ್, ಮದುವೆ ಆಗದೇ ಇರುವ ಬಗ್ಗೆ, ಲೈಂಗಿಕತೆ, ಮಹಿಳಾ ಸ್ವಾತಂತ್ರ್ಯ ಹಲವು ವಿಷಯಗಳ ಬಗ್ಗೆ ರಿಯಾ ಹಾಗೂ ಸುಷ್ಮಿತಾ ಸೇನ್ ಮಾತನಾಡಿದ್ದಾರೆ.

ಸಾಕಷ್ಟು ನಿಂದನೆ, ಟೀಕೆಗಳಿಗೆ ಗುರಿಯಾದ ಬಳಿಕ ರಿಯಾ ಅದಕ್ಕೆಲ್ಲ ಕುಗ್ಗದೆ ಮತ್ತೆ ಪುಟಿದು ನಿಲ್ಲುತ್ತಿರುವ ರೀತಿಗೆ ಸಾಕಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ. ರಿಯಾ ಚಕ್ರವರ್ತಿ, ಎಂಟಿವಿ ರೊಡೀಸ್​ನ ಜಡ್ಜ್​ ಆಗಿದ್ದಾಗಲೂ ಸಹ ಹಲವರು ರಿಯಾಗೆ ಬೆಂಬಲ ಸೂಚಿಸಿದ್ದರು. ಸುಶಾಂತ್ ಸಿಂಗ್ 2020 ರಲ್ಲಿ ತಮ್ಮದೇ ನಿವಾಸದಲ್ಲಿ ನಿಧನ ಹೊಂದಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಸುಶಾಂತ್ ಸಿಂಗ್​ ನಿಧನಕ್ಕೆ ಕೆಲವು ದಿನಗಳ ಮುಂಚೆ ರಿಯಾ, ಸುಶಾಂತ್ ಜೊತೆ ಬ್ರೇಕ್ ಅಪ್ ಮಾಡಿಕೊಂಡು ತೆರಳಿದ್ದರು. ಇದೇ ಕಾರಣಕ್ಕೆ ರಿಯಾರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯ್ತು. ರಿಯಾ ವಿರುದ್ಧ ಸುಶಾಂತ್ ಕುಟುಂಬಸ್ಥರು ದೂರು ನೀಡಿದರು. ರಿಯಾ ಬಂಧನವೂ ಆಯ್ತು. ಬಳಿಕ ಜಾಮೀನಿನ ಮೇಲೆ ರಿಯಾ ಹೊರಬಂದರು. ರಿಯಾರ ಸಹೋದರನ ಬಂಧನವೂ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:43 am, Tue, 23 July 24

ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ