ಫ್ರೆಂಡ್ಸ್​ ಆಗಿರುವುದಾದರೆ ಡಿವೋರ್ಸ್​ ಯಾಕೆ ಬೇಕಿತ್ತು? ಕಿರಣ್​ ರಾವ್​ ಕುಟುಂಬದ್ದೂ ಇದೇ ಪ್ರಶ್ನೆ

ಆಮಿರ್​ ಖಾನ್​ ಹಾಗೂ ಕಿರಣ್​ ರಾವ್​ ಡಿವೋರ್ಸ್ ಪಡೆದಿದ್ದರೂ ತುಂಬ ಆಪ್ತವಾಗಿದ್ದಾರೆ. ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಸಮಾರಂಭಗಳಲ್ಲಿ ಒಟ್ಟಿಗೆ ಸೇರುತ್ತಿದ್ದಾರೆ. ಈ ಚಂದಕ್ಕೆ ಡಿವೋರ್ಸ್​ ಯಾಕೆ ತೆಗೆದುಕೊಳ್ಳಬೇಕಿತ್ತು ಅಂತ ಅನೇಕರು ಈಗಾಗಲೇ ಕೇಳಿದ್ದಾರೆ. ಈ ಪ್ರಶ್ನೆಯ ಬಗ್ಗೆ ಕಿರಣ್ ರಾವ್​ ಅವರು ವಿವರವಾಗಿ ಮಾತನಾಡಿದ್ದಾರೆ.

ಫ್ರೆಂಡ್ಸ್​ ಆಗಿರುವುದಾದರೆ ಡಿವೋರ್ಸ್​ ಯಾಕೆ ಬೇಕಿತ್ತು? ಕಿರಣ್​ ರಾವ್​ ಕುಟುಂಬದ್ದೂ ಇದೇ ಪ್ರಶ್ನೆ
ಆಮಿರ್​ ಖಾನ್​, ಕಿರಣ್​ ರಾವ್​
Follow us
|

Updated on: Jul 22, 2024 | 6:24 PM

ಸಾಮಾನ್ಯವಾಗಿ ಯಾವುದೇ ದಂಪತಿ ವಿಚ್ಛೇದನ ಪಡೆದುಕೊಂಡರೂ ಅವರ ನಡುವೆ ಮನಸ್ತಾಪ ಜೋರಾಗಿರುತ್ತದೆ. ಡಿವೋರ್ಸ್​ ಬಳಿಕ ಒಬ್ಬರ ಮುಖ ಇನ್ನೊಬ್ಬರು ನೋಡದಂತಹ ಪರಿಸ್ಥಿತಿ ನಿರ್ಮಾಣ ಆಗಿರುತ್ತದೆ. ಆದರೆ ಕಿರಣ್​ ರಾವ್​ ಮತ್ತು ಆಮಿರ್​ ಖಾನ್​ ಅವರು ವಿಚ್ಛೇದನ ಪಡೆದ ನಂತರವೂ ಸ್ನೇಹಿತರಾಗಿ ಮುಂದುವರಿದಿದ್ದಾರೆ. ಅವರಿಬ್ಬರ ನಡುವೆ ಈಗಲೂ ಆಪ್ತವಾದ ಸ್ನೇಹ ಇದೆ. ಈ ರೀತಿ ಫ್ರೆಂಡ್ಸ್​ ಆಗಿ ಇರುವುದಾದರೆ ವಿಚ್ಛೇದನ ಪಡೆಯುವ ಅಗತ್ಯ ಏನಿತ್ತು ಎಂಬುದು ಅನೇಕರ ಪ್ರಶ್ನೆ. ಕಿರಣ್​ ರಾವ್​ ಅವರ ತಂದೆ-ತಾಯಿ ಕೂಡ ಕಿರಣ್​ಗೆ ಇದೇ ಪ್ರಶ್ನೆ ಕೇಳಿದ್ದರಂತೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿರಣ್ ರಾವ್​ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಆಮಿರ್​ ಖಾನ್​ ಜೊತೆ ಕಿರಣ್​ ರಾವ್​ ಅವರು ಸ್ನೇಹ ಮುಂದುವರಿಸಿದ್ದಾರೆ. ಆಮಿರ್​ ಖಾನ್​ರ ಮೊದಲ ಪತ್ನಿಯ ಮಗಳಾದ ಇರಾ ಖಾನ್​ ಮದುವೆಯಲ್ಲಿ ಕಿರಣ್​ ರಾವ್​ ಭಾಗಿ ಆಗಿದ್ದರು. ಅಷ್ಟೇ ಅಲ್ಲದೇ, ಕಿರಣ್​ ರಾವ್​ ನಿರ್ದೇಶನದ ‘ಲಾಪತಾ ಲೇಡೀಸ್​’ ಸಿನಿಮಾಗೆ ಆಮಿರ್​ ಖಾನ್​ ಬಂಡವಾಳ ಹೂಡಿದರು. ಈ ಮಾಜಿ ದಂಪತಿಗೆ ಆಜಾದ್​ ಎಂಬ ಮಗನಿದ್ದು, ಆತನ ಪಾಲನೆಯ ಜವಾಬ್ದಾರಿಯನ್ನು ಇಬ್ಬರೂ ನಿಭಾಯಿಸುತ್ತಿದ್ದಾರೆ. ಈ ಆಪ್ತತೆ ಬಗ್ಗೆ ಕಿರಣ್ ರಾವ್​ ಮಾತನಾಡಿದ್ದಾರೆ.

‘ನನ್ನ ಪಾಲಕರು ಕೂಡ ಇದೇ ಪ್ರಶ್ನೆ ಕೇಳುತ್ತಾರೆ. ಆದರೆ ನಾನು ಸ್ವತಂತ್ರವಾಗಿ ಇರಬೇಕು. ಆಜಾದ್​ನ ಪಾಲಕರಾಗಿ, ಕುಟುಂಬದವರಾಗಿ ಆಮಿರ್​ ಜೊತೆ ನನಗೆ ಉತ್ತಮ ಬಾಂಧವ್ಯ ಇದೆ. ಇದರಿಂದ ವಿಚ್ಛೇದನವನ್ನು ಸಹಿಸಲು ಸಾಧ್ಯವಾಯ್ತು. ಆಜಾದ್​ನ ತಂದೆ ನನ್ನ ಆಪ್ತ ಸ್ನೇಹಿತ ಎಂಬ ಭರವಸೆಯಲ್ಲಿ ನಾನು ನನ್ನ ವೈಯಕ್ತಿಕ ಸಮಯವನ್ನು ಕಳೆಯಬಹುದು. ನನಗೆ ಮತ್ತು ಆಮಿರ್​ ಖಾನ್​ ಅವರಿಗೆ ಭಾವನಾತ್ಮಕವಾಗಿ, ಮಾನಸಿಕವಾಗಿ ಈ ಸ್ಥಿತಿಗೆ ಬರಲು ಸ್ವಲ್ಪ ಸಮಯ ಹಿಡಿಯಿತು. ನಾವು ಬೇರೆ ಎಲ್ಲಿಗೋ ಹೋಗುವುದಿಲ್ಲ. ಎಂದೆಂದಿಗೂ ನಾವು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತೇನೆ. ಅದಕ್ಕೆ ದಂಪತಿಯೇ ಆಗಿರಬೇಕಿಲ್ಲ’ ಎಂದು ಕಿರಣ್​ ರಾವ್​ ಹೇಳಿದ್ದಾರೆ.

ಇದನ್ನೂ ಓದಿ: ಆಮಿರ್​ ಖಾನ್​ ಮಗ ಜುನೈದ್​ ಖಾನ್​ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್​ ಜೋಡಿ

‘ಒಂಟಿಯಾಗಿ ಇರುವುದು ನನಗೆ ಖುಷಿ ನೀಡುತ್ತದೆ. ಆಮಿರ್​ ಜೊತೆ ಮದುವೆಗೂ ಮುನ್ನ ನಾನು ಒಂಟಿಯಾಗಿದ್ದೆ. ನನ್ನ ಸ್ವತಂತ್ರವನ್ನು ನಾನು ಎಂಜಾಯ್​ ಮಾಡಿದೆ. ಈಗ ನಾನು ಒಂಟಿಯಾದರೂ ಕೂಡ ಮಗ ಇದ್ದಾನೆ. ವಿಚ್ಛೇದನ ಬಯಸಿದ ಅನೇಕ ಮಹಿಳೆಯರು ಒಂಟಿಯಾಗಿರಲು ಹೆದರುತ್ತಾರೆ. ಅದೃಷ್ಟವಶಾತ್​ ನನಗೆ ಅದು ಎದುರಾಗಿಲ್ಲ. ಎರಡೂ ಕುಟುಂಬದವರಿಂದ ನನಗೆ ಬೆಂಬಲ ಸಿಕ್ಕಿತು. ನಮ್ಮದು ಖುಷಿ ಖುಷಿಯ ಡಿವೋರ್ಸ್​’ ಎಂದಿದ್ದಾರೆ ಕಿರಣ್​ ರಾವ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.