ವಯಸ್ಸಾದ ತಂದೆ-ತಾಯಿಯ ಕಾರಿಗೆ ಅಡ್ಡ ಬಂದವರಿಗೆ ಎಚ್ಚರಿಕೆ ನೀಡಿದ ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​ ಅವರಿಗೆ ಜೀವ ಬೆದರಿಕೆ ಇದೆ. ಅವರ ಆಪ್ತರು ಕೂಡ ಭಯದಲ್ಲೇ ಒಡಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಾಗಿ ಸಲ್ಮಾನ್​ ಖಾನ್​ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ. ಹೀಗಿರುವಾಗ ತಂದೆ-ತಾಯಿಯ ಕಾರಿಗೆ ಜನರು ಅಡ್ಡಬಂದಾಗ ಸಲ್ಲು ಸಹಜವಾಗಿಯೇ ಗರಂ ಆಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ವಯಸ್ಸಾದ ತಂದೆ-ತಾಯಿಯ ಕಾರಿಗೆ ಅಡ್ಡ ಬಂದವರಿಗೆ ಎಚ್ಚರಿಕೆ ನೀಡಿದ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​

Updated on: Dec 20, 2023 | 12:11 PM

ನಟ ಸಲ್ಮಾನ್​ ಖಾನ್​ (Salman Khan) ಅವರು ಎಲ್ಲಿಯೇ ಕಾಣಿಸಿದರೂ ಅವರ ಫೋಟೋ ಮತ್ತು ವಿಡಿಯೋ ಶೂಟ್​ ಮಾಡುವ ಸಲುವಾಗಿ ಪಾಪರಾಜಿಗಳು ಹಾಗೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇದರಿಂದ ಸಲ್ಮಾನ್ ಖಾನ್​ ಅವರಿಗೆ ಹಲವು ಬಾರಿ ಕಿರಿಕಿರಿ ಆಗಿದ್ದುಂಟು. ಅಂಥ ಸಂದರ್ಭದಲ್ಲಿ ಸಲ್ಲು ತಾಳ್ಮೆ ಕಳೆದುಕೊಳ್ಳುತ್ತಾರೆ. ಇತ್ತೀಚೆಗೆ ಅವರು ಸಹೋದರ ಸೊಹೈಲ್​ ಖಾನ್​ ಜನ್ಮದಿನದ ಸಲುವಾಗಿ ಕುಟುಂಬ (Salman Khan Family) ಸಮೇತರಾಗಿ ಮುಂಬೈನ ರೆಸ್ಟೋರೆಂಟ್​ವೊಂದಕ್ಕೆ ತೆರಳಿದ್ದರು. ಆಗ ತಂದೆ-ತಾಯಿಯ ಕಾರಿಗೆ ಅಡ್ಡ ಬಂದ ಪಾಪರಾಜಿಗಳಿಗೆ ಸಲ್ಮಾನ್​ ಖಾನ್​ ಆವಾಜ್​ ಹಾಕಿದ್ದಾರೆ.

ಸಲ್ಮಾನ್​ ಖಾನ್​ ಅವರ ಪೋಷಕರಾದ ಸಲೀಮ್​ ಖಾನ್​, ಸಲ್ಮಾ ಖಾನ್​, ಹೆಲೆನ್​ ಅವರು ರೆಸ್ಟೋರೆಂಟ್​​ನಿಂದ ವಾಪಸ್​ ತೆರಳುವಾಗ ಅವರನ್ನು ಪಾಪರಾಜಿಗಳು ಮುತ್ತಿಗೆ ಹಾಕಿದರು. ತಂದೆ-ತಾಯಿಯನ್ನು ಕಾರಿನಲ್ಲಿ ಕೂರಿಸಲು ಬಂದ ಸಲ್ಮಾನ್​ ಖಾನ್​ಗೆ ಪಾಪರಾಜಿಗಳನ್ನು ಕಂಡು ಕೋಪಬಂತು. ‘ಸ್ವಲ್ಪ ಹಿಂದಕ್ಕೆ ಸರಿಯಿರಿ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ಸಲ್ಮಾನ್​ ಖಾನ್​ ಅವರಿಗೆ ಜೀವ ಬೆದರಿಕೆ ಇದೆ. ಲಾರೆನ್ಸ್​ ಬಿಷ್ಣೋಯ್​, ಗೋಲ್ಡಿ ಬ್ರಾರ್​ ಮುಂತಾದ ಗ್ಯಾಂಗ್​ಸ್ಟರ್​ಗಳು ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಸಲ್ಮಾನ್​ ಖಾನ್​ ಅವರ ಆಪ್ತರು ಕೂಡ ಭಯದಲ್ಲೇ ಒಡಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಾಗಿ ಸಲ್ಮಾನ್​ ಖಾನ್​ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ. ಹೀಗಿರುವಾಗ ತಂದೆ-ತಾಯಿಯ ಕಾರಿಗೆ ಜನರು ಅಡ್ಡಬಂದಾಗ ಸಲ್ಲು ಸಹಜವಾಗಿಯೇ ಗರಂ ಆಗಿದ್ದಾರೆ.

ಇದನ್ನೂ ಓದಿ: ‘ಸಾವಿಗೆ ವೀಸಾ ಇಲ್ಲ, ವಿದೇಶಕ್ಕೆ ಹೋದ್ರೂ ಬಿಡಲ್ಲ’; ಸಲ್ಮಾನ್ ಖಾನ್​ಗೆ ಮತ್ತೆ ಬಂತು ಬೆದರಿಕೆ

ಈ ವರ್ಷ ಸಲ್ಮಾನ್​ ಖಾನ್​ ನಟನೆಯ ‘ಟೈಗರ್​ 3’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್​ ಆಗಲಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸಿನಿಮಾ ಮಾತ್ರವಲ್ಲದೇ ಹಿಂದಿಯ ಬಿಗ್​ ಬಾಸ್​ ರಿಯಾಲಿಟಿ ಶೋ ನಿರೂಪಣೆ ಮಾಡುವುದರಲ್ಲೂ ಸಲ್ಲು ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us