ಸಲ್ಮಾನ್ ಖಾನ್ ಅವರಿಗೆ ಹಿಂದಿ ಚಿತ್ರರಂಗದಲ್ಲಿ ಬೇಡಿಕೆ ಇದೆ. ಅವರು ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್. ಅವರು ವೃತ್ತಿಜೀವನದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಅವರ ವ್ಯಕ್ತಿತ್ವ, ಫಿಟ್ ನೆಸ್ ಸೇರಿದಂತೆ ಹಲವು ವಿಚಾರಗಳಿಂದ ಅಭಿಮಾನಿಗಳು ಪ್ರಭಾವಿತರಾಗಿದ್ದಾರೆ. ಸಲ್ಮಾನ್ ಖಾನ್ ತಮ್ಮ ಆಪ್ತ ಸ್ನೇಹಿತ ಬಾಬಾ ಸಿದ್ಧಿಕಿಯ ಹತ್ಯೆಯಿಂದ ವಿಚಲಿತರಾಗಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಬಾ ಅವರನ್ನು ಕೊಂದಿದೆ. ಸಲ್ಮಾನ್ ಖಾನ್ ಜೊತೆಗಿನ ಆಪ್ತತೆಯಿಂದಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಹೀಗಿರುವಾಗಲೇ ಸಲ್ಮಾನ್ ಖಾನ್ ಕೈಯಲ್ಲಿರುವ ಬ್ರೇಸ್ಲೆಟ್ ಒಂದು ವೈರಲ್ ಆಗಿದೆ. ಅವರು ಸೇಫ್ ಆಗಿರೋದಕ್ಕೆ ಇದು ಕೂಡ ಒಂದು ಕಾರಣ ಎಂದು ಅವರು ನಂಬುತ್ತಾರೆ.
ಸಲ್ಮಾನ್ ಖಾನ್ ಅವರ ಕೈಯಲ್ಲಿ ಸದಾ ಒಂದು ಬ್ರೇಸ್ಲೆಟ್ ಇರುತ್ತದೆ. ಅವರ ಜೀವನದಲ್ಲಿ ನಡೆದ ಘಟನೆಗಳಿಂದ ತತ್ತರಿಸಿ ಅವರು ಇದನ್ನು ಧರಿಸಿದ್ದರು ಎನ್ನಲಾಗಿದೆ. ಅಂದರೆ, ಈ ಬ್ರೇಸ್ಲೆಟ್ ಧರಿಸಿದರೆ ಋಣಾತ್ಮಕ ಅಂಶಗಳು ದೂರವಾಗುತ್ತವೆ ಎನ್ನುವ ನಂಬಿಕೆ ಅವರದ್ದು.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಖಾನ್ಗೆ ಹಲವಾರು ಬಾರಿ ಕೊಲೆ ಬೆದರಿಕೆಗಳು ಬಂದಿದ್ದವು. ಕೆಲವು ತಿಂಗಳ ಹಿಂದೆ, ಬಿಷ್ಣೋಯ್ ಗ್ಯಾಂಗ್ ನಟನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಗುಂಡಿನ ದಾಳಿ ನಡೆಸಿತು. ಇದೀಗ ಸಲ್ಮಾನ್ ಖಾನ್ ಅವರ ಆತ್ಮೀಯ ಗೆಳೆಯ ಬಾಬಾ ಸಿದ್ಧಿಕಿ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಈ ಎಲ್ಲಾ ಘಟನೆಗಳಿಂದ ಅಭಿಮಾನಿಗಳು ನಟನ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷ ವಜ್ರದ ಬ್ರೇಸ್ಲೆಟ್ ಬಗ್ಗೆ ಹೇಳಿದ್ದರು.
ಇದನ್ನೂ ಓದಿ:‘ಸಲ್ಮಾನ್ ಖಾನ್ ತಿರುಗೇಟು ನೀಡಬೇಕು’: ಲಾರೆನ್ಸ್ ಬಿಷ್ಣೋಯ್ ವಿಚಾರಕ್ಕೆ ತಲೆ ಹಾಕಿದ ಆರ್ಜಿವಿ
ಸಲ್ಮಾನ್ ಖಾನ್ ಹಲವು ವರ್ಷಗಳಿಂದ ಬಲಗೈಯಲ್ಲಿ ಬ್ರೇಸ್ಲೆಟ್ ಧರಿಸುತ್ತಿದ್ದಾರೆ. ಈ ರತ್ನವನ್ನು ಫಿರುಜಾ ಎಂದು ಕರೆಯಲಾಗುತ್ತದೆ. ಇದು ಅದೃಷ್ಟದಾಯಕವಾಗಿದೆ ಮತ್ತು ತೊಂದರೆಗಳಿಂದ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತದೆ.
ಸಲ್ಮಾನ್ ಖಾನ್ ನೀಲಿ ವೈಡೂರ್ಯದ ಕಲ್ಲು ಧರಿಸುವುದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ‘ನನ್ನ ತಂದೆ ಯಾವಾಗಲೂ ಈ ರೀತಿಯ ಬ್ರೇಸ್ಲೆಟ್ ಧರಿಸುತ್ತಿದ್ದರು ಮತ್ತು ನಾನು ದೊಡ್ಡವನಾದ ನಂತರ ಅದನ್ನು ನಾನು ಇಷ್ಟಪಟ್ಟೆ. ನಾನು ಕೆಲಸ ಮಾಡಲು ಪ್ರಾರಂಭಿಸಿದಾಗ ಅವರು ನನಗೆ ಇದನ್ನು ನೀಡಿದರು. ಯಾವುದೇ ನಕಾರಾತ್ಮಕತೆ ಇದ್ದರೆ ಅದರಿಂದ ಇದು ರಕ್ಷಣೆ ಮಾಡುತ್ತದೆ’ ಎಂದು ಅವರು ಹೇಳಿದ್ದರು.
ಸಲ್ಮಾನ್ ಖಾನ್ ಪ್ರಸ್ತುತ ಬಿಗ್ ಬಾಸ್ 18 ನೇ ಸೀಸನ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಇದು ಕಿರುತೆರೆಯ ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋ ಆಗಿದೆ. ಇದಲ್ಲದೆ, ಅವರು ಅನೇಕ ದೊಡ್ಡ ಸಿನಿಮಾಗಳನ್ನು ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ