ಬೆಂಗಳೂರಲ್ಲಿ ಮಾತ್ರವಲ್ಲ ಮುಂಬೈ ಜೈಲಿನ ಸ್ಥಿತಿಯೂ ಅದೇ; ಸಲ್ಲು ಕೇಸ್ ಆರೋಪಿಯ ಅಳಲು

|

Updated on: Sep 19, 2024 | 7:23 AM

ದರ್ಶನ್ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಹೋದಾಗ ಹಣ ನೀಡಿದರೆ ಮಾತ್ರ ವ್ಯವಸ್ಥೆಗಳು ಸಿಗುತ್ತವೆ ಎನ್ನುವ ವಿಚಾರ ಗೊತ್ತಾಗಿತ್ತು. ಜೈಲುಗಳನ್ನು ರೆಸಾರ್ಟ್ ಮಾದರಿಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಕೂಡ ಹೇಳಲಾಗಿತ್ತು. ಇದು ಕೇವಲ ಬೆಂಗಳೂರು ಜೈಲಿನ ಸ್ಥಿತಿ ಮಾತ್ರವಲ್ಲ ಅನ್ನೋದು ಗೊತ್ತಾಗಿದೆ.

ಬೆಂಗಳೂರಲ್ಲಿ ಮಾತ್ರವಲ್ಲ ಮುಂಬೈ ಜೈಲಿನ ಸ್ಥಿತಿಯೂ ಅದೇ; ಸಲ್ಲು ಕೇಸ್ ಆರೋಪಿಯ ಅಳಲು
ಬೆಂಗಳೂರಲ್ಲಿ ಮಾತ್ರವಲ್ಲ ಮುಂಬೈ ಜೈಲಿನ ಸ್ಥಿತಿಯೂ ಅದೇ; ಸಲ್ಲು ಕೇಸ್ ಆರೋಪಿಯ ಅಳಲು
Follow us on

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿ ಅನೇಕರನ್ನು ಬಂಧಿಸಲಾಗಿತ್ತು. ಅವರನ್ನು ಸದ್ಯ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದ್ದು, ಮುಂಬೈನ ತಾಲೋಜಾ ಜೈಲಿನಲ್ಲಿ ಇರಿಸಲಾಗಿದೆ. ಈಗ ಈ ಪ್ರಕರಣದಲ್ಲಿ ಆರೋಪಿಯಲ್ಲಿ ಒಬ್ಬನಾದ ಹರ್ಪಾಲ್ ಸಿಂಗ್​ ಕೈ ಬೆರಳಿಗೆ ಪೆಟ್ಟಾಗಿದೆ. ಇದಕ್ಕೆ ಟ್ರೀಟ್​ಮೆಂಟ್ ನೀಡಲು ವೈದ್ಯರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಹಣ ನೀಡಿದರೆ ಮಾತ್ರ ವ್ಯವಸ್ಥೆಗಳು ಸಿಗುತ್ತವೆ ಎನ್ನುವ ಆರೋಪ ಇತ್ತು. ಜೈಲುಗಳನ್ನು ರೆಸಾರ್ಟ್ ಮಾದರಿಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಹೇಳಲಾಗಿತ್ತು. ಇದು ಕೇವಲ ಬೆಂಗಳೂರು ಜೈಲಿನ ಸ್ಥಿತಿ ಮಾತ್ರವಲ್ಲ ಅನ್ನೋದು ಗೊತ್ತಾಗಿದೆ. ಹರ್ಪಾಲ್ ಸಿಂಗ್​ನ ಇತ್ತೀಚೆಗೆ ಜಡ್ಜ್​ ಎದುರು ಹಾಜರುಪಡಿಸಲಾಗಿತ್ತು. ಆಗ ಆತ ಈ ಆರೋಪ ಮಾಡಿದ್ದಾನೆ.

ಈ ಬೆನ್ನಲ್ಲೇ ಕೋರ್ಟ್​ ತಾಲೋಜಾ ಜೈಲಿನ ಮುಖ್ಯ ಆರೋಗ್ಯಾಧಿಕಾರಿಗಳಿಗೆ ವರದಿ ನೀಡುವಂತೆ ಕೇಳಿದೆ. ಜೊತೆಗೆ ಸೂಕ್ತ ಚಿಕಿತ್ಸೆ ನೀಡಲು ನಿರ್ದೇಶಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದಿವೆ. ‘ಇದು ಕೇವಲ ಬೆಂಗಳೂರು ಜೈಲಿನ ದುಸ್ಥಿತಿ ಅಲ್ಲ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತನಾದ ಮತ್ತೋರ್ವ ಆರೋಪಿ ಮೊಹಮದ್ ಚೌಧರಿ ಕೂಡ ಇದೇ ರೀತಿಯ ಆರೋಪ ಮಾಡಿದ್ದಾನೆ. ಆತನ ಬಲಗಾಲಿಗೆ ಇನ್​ಫೆಕ್ಷನ್ ಆಗಿದೆ ಎಂದು ಕೋರ್ಟ್ ಮುಂದೆ ಅಲವತ್ತುಕೊಂಡಿದ್ದಾನೆ. ಆತನಿಗೂ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ಕೊಡಲಾಗಿದೆ.

ಇದನ್ನೂ ಓದಿ: ವಿದೇಶದಲ್ಲೂ ಸಲ್ಮಾನ್ ಖಾನ್ ಹೆಸರಲ್ಲಿ ಮೋಸ; ಖಡಕ್ ಎಚ್ಚರಿಕೆ ನೀಡಿದ ನಟ

ಸಲ್ಮಾನ್ ಖಾನ್ ಇದ್ದ ಬಾಂದ್ರಾದ ಗ್ಯಾಲಾಕ್ಸಿ ಅಪಾರ್ಟ್​ಮೆಂಟ್ ಮೇಲೆ ಏಪ್ರಿಲ್ 14ರಂದು ದಾಳಿ ನಡೆದಿತ್ತು. ಬೈಕ್​ನಲ್ಲಿ ಬಂದ ಕೆಲವರು ಗುಂಡಿನ ದಾಳಿ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರು ಜನರನ್ನು ಬಂಧಿಸಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಪ್ರಕರಣದ ಹಿಂದೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.