ಸಲ್ಲು ಮನೆ ಮೇಲೆ ಗುಂಡು ಹಾರಿಸಿದವರು ಗುಜರಾತ್ನಲ್ಲಿ ಅರೆಸ್ಟ್; ಎರಡು ತಿಂಗಳ ಹಿಂದೆ ನಡೆದಿತ್ತು ಪ್ಲ್ಯಾನ್
ಏಪ್ರಿಲ್ 14ರಂದು ಮುಂಜಾನೆ 5 ಗಂಟೆ ಸುಮಾರಿಗೆ ಬೈಕ್ನಲ್ಲಿ ಬಂದ ಇಬ್ಬರು ಆಘಂತುಕರು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಅಪಾರ್ಟ್ಮೇಲೆ ಗುಂಡು ಹಾರಿಸಿದ್ದರು. ಗುಂಡಿನ ದಾಳಿ ಬಳಿಕ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಈಗ ಆಘಂತುಕರ ಬಂಧನ ಆಗಿದೆ.
ಸಲ್ಮಾನ್ ಖಾನ್ (Salman Khan) ಮನೆಯ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗುಜರಾತ್ನ ಭುಜ್ನಲ್ಲಿ ಸೋಮವಾರ ರಾತ್ರಿ (ಏಪ್ರಿಲ್ 15) ಈ ಬಂಧನ ನಡೆದಿದೆ. ಅವರ ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ರಿವೀಲ್ ಆಗಬೇಕಿದೆ. ಲಾರೆನ್ಸ್ ಗ್ಯಾಂಗ್ ಈ ಪ್ರಕರಣದ ಹೊಣೆ ಹೊತ್ತಿತ್ತು.
ಏಪ್ರಿಲ್ 14ರಂದು ಮುಂಜಾನೆ 5 ಗಂಟೆ ಸುಮಾರಿಗೆ ಬೈಕ್ನಲ್ಲಿ ಬಂದ ಇಬ್ಬರು ಆಘಂತುಕರು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಅಪಾರ್ಟ್ಮೇಲೆ ಗುಂಡು ಹಾರಿಸಿದ್ದರು. ಗುಂಡಿನ ದಾಳಿ ಬಳಿಕ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಸಲ್ಮಾನ್ಗೆ ಈಗಾಗಲೇ ಪ್ರಾಣ ಭಯ ಇದೆ. ಹೀಗಿರುವಾಗ ಈ ಗುಂಡಿನ ದಾಳಿ ನಡೆದಿದ್ದು ಆತಂಕ ಹೆಚ್ಚಿಸಿತ್ತು. ಈಗ ಇಬ್ಬರ ಬಂಧ ಆಗಿರುವುದು ಅಭಿಮಾನಿಗಳು ಕೊಂಚ ನಿರಾಳ ಆಗಿದ್ದಾರೆ.
ಸಲ್ಮಾನ್ ಖಾನ್ ಮನೆಯ ಮೇಲೆ ದಾಳಿ ಮಾಡುವಾಗ ಇಬ್ಬರೂ ಬೈಕ್ನಲ್ಲಿ ಬಂದಿದ್ದರು. ಆ ಬಳಿಕ ಅವರು ಹೈವೇ ಸೇರಿದ್ದರು. ನೇರವಾಗಿ ಅವರು ಮುಂಬೈ ಬಿಟ್ಟು ಹೊರ ಹೋಗಿದ್ದರು. ಈಗ ಗುಜರಾತ್ನಲ್ಲಿ ಬಂಧನ ಆಗಿದೆ. ಇವರ ಹಿಂದೆ ಯಾರಿದ್ದಾರೆ ಎನ್ನುವ ವಿಚಾರ ವಿಚಾರಣೆ ಬಳಿಕ ಸ್ಪಷ್ಟವಾಗಬೇಕಿದೆ.
ಇಬ್ಬರೂ ಆರೋಪಿಗಳು ನವಿ ಮುಂಬೈನ ಪನ್ವೇಲ್ ಭಾಗದಲ್ಲಿ ಎರಡು ತಿಂಗಳ ಹಿಂದೆ ಮನೆ ಬಾಡಿಗೆ ಪಡೆದಿದ್ದರು ಎನ್ನಲಾಗಿದೆ. ಇದೇ ಭಾಗದಲ್ಲಿ ಸಲ್ಮಾನ್ ಖಾನ್ ಅವರ ಮನೆ ಇದೆ. ಸಲ್ಲು ಅವರ ಚಲನವಲನ ಗಮನಿಸಲು ಅವರು ಮುಂಬೈಗೆ ಆಗಮಿಸಿದ್ದರು. ಎರಡು ತಿಂಗಳಿಂದ ಪ್ಲ್ಯಾನ್ ಮಾಡುತ್ತಿದ್ದರು ಎಂದು ವರದಿ ಆಗಿದೆ. ಏಪ್ರಿಲ್ 14ರಂದು ಇವರು ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಬೆಳಗಿನ ಜಾವ ಆಗಿದ್ದರಿಂದ ಯಾರಿಗೂ ಏನೂ ತೊಂದರೆ ಆಗಿಲ್ಲ.
ಇದನ್ನೂ ಓದಿ: ಗುಂಡಿನ ದಾಳಿ ಬಳಿಕ ಮೊದಲ ಬಾರಿ ಮನೆಯಿಂದ ಹೊರಬಂದ ಸಲ್ಮಾನ್ ಖಾನ್; ಹೇಳಿಕೆ ಬಿಡುಗಡೆ
ಗುಂಡಿನ ದಾಳಿ ಬಳಿಕ ಸಲ್ಲು ಮನೆಯಲ್ಲೇ ಇದ್ದರು. ಸೋಮವಾರ (ಏಪ್ರಿಲ್ 15) ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರಿಗೆ ನೀಡಲಾದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಸದ್ಯ ಅವರು ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. 2025ರ ಈದ್ಗೆ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ