
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಜೊತೆಗಿನ ಕಹಿ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ಮೂಲಕ ಪಾಕಿಸ್ತಾನಿ ನಟಿ ಸೋಮಿ ಅಲಿ (Somy Ali) ಅವರು ಸಲ್ಲು ಅವರ ಮತ್ತೊಂದು ಮುಖವಾಡವನ್ನು ಕಳಚಿಹಾಕಿದ್ದಾರೆ. ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್ ವ್ಯಕ್ತಿಯಾಗಿದ್ದಾರೆ ಎಂದು ಆರೋಪಿಸಿದ ನಟಿ ಸೋಮಿ ಅಲಿ, ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ ಬ್ಯಾಡ್ ಬಾಯ್ ಎಂದಿದ್ದಾರೆ. ದೈಹಿಕ, ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದ ಬಾಲಿವುಡ್ ಮಾಜಿ ನಟಿ, 2018ರಲ್ಲಿ ಸೋಮಿ ಬೆನ್ನಿನ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂತು. ಇದಕ್ಕೆ ಸಲ್ಲು ಕಾರಣ ಎಂದು ನಟಿ ಹೇಳಿದ್ದರು.
ಸೋಮಿ ಅಲಿ ಮತ್ತು ಸಲ್ಮಾನ್ ಖಾನ್ ನಡುವೆ ಏನಾಯಿತು ಎಂದು ಎಲ್ಲರೂ ಕೇಳುತ್ತಾರೆ. ಈ ಇದಕ್ಕೆ ಉತ್ತರಿಸಿದ ನಟಿ ಸೋಮಿ, ಅವರೊಂದಿಗೆ ಕಳೆದ ಎಂಟು ವರ್ಷಗಳು ನನ್ನ ಇಡೀ ಜೀವನದ ಅತ್ಯಂತ ಕೆಟ್ಟ ವರ್ಷಗಳು ಎಂದು ಹೇಳಿಕೊಂಡಿದ್ದಾರೆ. ಅವರು ನನ್ನನ್ನು ಕುರೂಪಿ, ಮೂರ್ಖ ಮತ್ತು ಮೂಕ ಎಂದು ಕರೆಯುವ ಮೂಲಕ ನಿರಂತರವಾಗಿ ನನ್ನನ್ನು ಕೀಳಾಗಿ ಕಾಣುತ್ತಿದ್ದರು ಎಂದಿದ್ದಾರೆ.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಮೊಮ್ಮೊಗನ ಜತೆ ಸುಹಾನಾ ಖಾನ್ ಡೇಟಿಂಗ್ ವಿಚಾರಕ್ಕೆ ಸಿಕ್ತು ಹೊಸ ಟ್ವಿಸ್ಟ್
ಸಲ್ಮಾನ್ ಜೊತೆಗಿದ್ದ ಕಹಿ ನೆನಪುಗಳು ಇನ್ನು ಕಾಡುತ್ತಿದೆ ಎಂದು ಹೇಳಿರುವ ಸೋಮಿ, ಆತ ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ ಬ್ಯಾಡ್ ಬಾಯ್. ಸಲ್ಮಾನ್ ಖಾನ್ ನನ್ನ ಮೇಲೆ ಮದ್ಯವನ್ನು ಸುರಿದಿದ್ದ. ಮುಂಬೈನಲ್ಲಿದ್ದಾಗ ನನ್ನ ಮೇಲೆ ಸಲ್ಲು ಹಲ್ಲೆ ನಡೆಸಿದ್ದ. ಆತನ ಹೊಡೆತದಿಂದ ಗಾಯಗಳಾಗಿದ್ದವು. ಆದ ಗಾಯಗಳನ್ನು ಮೇಕಪ್‌ನಿಂದ ಮುಚ್ಚಿಕೊಳ್ಳುತಿದ್ದೆ. ನಾನು ಸ್ಟುಡಿಯೋಗೆ ಹೋದಾಗ ನಿರ್ಮಾಪಕರು ಗಮನಿಸಿ ಅದನ್ನು ಸರಿಪಡಿಸಲು ಮೇಕಲ್ ಕಲಾವಿದ ಅಜಯ್ ಶೆಲಾರ್ಗೆ ಸೂಚಿಸುತ್ತಿದ್ದರು ಎಂದಿದ್ದಾರೆ.
ಸುಲ್ತಾನ್ ನಟ ಸಲ್ಮಾನ್ ಪುರುಷ ಕೋಮುವಾದಿ ಹಂದಿ, ಲೈಂಗಿಕ ಪರಭಕ್ಷಕ ಎಂದು ಆರೋಪಿಸಿರುವ ಸೋಮಿ, ಅವರನ್ನು ಬಾಲಿವುಡ್‌ನ ಹಾರ್ವೆ ವೈನ್‌ಸ್ಟೈನ್ ಎಂದು ಕರೆದಿದ್ದರು. ಇತ್ತೀಚಿಗೆ ತಮ್ಮ ‘ಫೈಟ್ ಅಂಡ್ ಫ್ಲೈಟ್’ ವೆಬ್ ಸೀರಿಸ್‌ನ ಬ್ಯಾನ್ ಮಾಡಲು ಸಲ್ಲಾನ್ ಖಾನ್ ಪ್ರಯತ್ನಿಸಿದ್ದಾರೆ. ನಾನು ಪಬ್ಲಿಸಿಟಿ ಗಿಮಿಕ್ ಮಾಡುತ್ತಿಲ್ಲ, ಸತ್ಯ ಜನರಿಗೆ ಗೊತ್ತಾಗಬೇಕು. ಸಲ್ಮಾನ್ ಬಹಿರಂಗವಾಗಿ ಕ್ಷಮೆ ಕೇಳಬೇಕು. ಆತ ಅಂಹಕಾರಿ, ಸಲ್ಮಾನ್ ಖಾನ್ ಇನ್ನು ಮುಂದೆ ನನ್ನನ್ನು ಭಯಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದು ಬ್ರೇಕಿಂಗ್ ನ್ಯೂಸ್ ಅಲ್ಲ, ಸಲ್ಮಾನ್ ಇಷ್ಟೆಲ್ಲಾ ಮಾಡಿದ್ದು ನನಗೊಬ್ಬಳಿಗೆ ಅಲ್ಲ, ಇಲ್ಲಿ ಹೇಳುತ್ತಿಲ್ಲ, ಆದರೆ ಹಲವರು ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿದ್ದಾರೆ ಎಂದಿದ್ದಾರೆ.
ಸಿನಿಮಾದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 am, Sat, 7 January 23