ಜಾಕ್ವೆಲಿನ್​ಗೆ ಕಿಸ್ ಮಾಡಿ ಟಿ-ಶರ್ಟ್​ನಲ್ಲಿ ಬಾಯಿ ಒರೆಸಿಕೊಂಡ ಸಲ್ಮಾನ್ ಖಾನ್; ಇಲ್ಲಿದೆ ವಿಡಿಯೋ

2014ರಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ ‘ಕಿಕ್’ ಚಿತ್ರದಲ್ಲಿ ಜಾಕ್ವೆಲಿನ್ ನಟಿಸಿದರು. ಈ ಚಿತ್ರದಿಂದ ಅವರ ಬೇಡಿಕೆ ಹೆಚ್ಚಿತು. ಅಲ್ಲಿಂದ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು.

ಜಾಕ್ವೆಲಿನ್​ಗೆ ಕಿಸ್ ಮಾಡಿ ಟಿ-ಶರ್ಟ್​ನಲ್ಲಿ ಬಾಯಿ ಒರೆಸಿಕೊಂಡ ಸಲ್ಮಾನ್ ಖಾನ್; ಇಲ್ಲಿದೆ ವಿಡಿಯೋ
ಜಾಕ್ವೆಲಿನ್-ಸಲ್ಮಾನ್
Follow us
ರಾಜೇಶ್ ದುಗ್ಗುಮನೆ
|

Updated on:Jun 03, 2023 | 8:22 AM

ಸಲ್ಮಾನ್ ಖಾನ್ ಅವರು ಬಾಲಿವುಡ್​ನಲ್ಲಿ ಬೇಡಿಕೆಯ ಹೀರೋ. ಅವರು ಹಲವು ಸೂಪರ್​ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಅನೇಕ ಹೀರೋಯಿನ್​ಗಳ ಜೊತೆ ಒಳ್ಳೆಯ ಒಡನಾಟ ಇದೆ. ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರಿಗೆ ಇದೆ. ಸಲ್ಮಾನ್ ಖಾನ್ (Salman Khan) ಅನೇಕರ ಜೊತೆ ರಿಲೇಶನ್​ಶಿಪ್​ನಲ್ಲಿದ್ದರು. ಆದರೆ, ಯಾರನ್ನೂ ಮದುವೆ ಆಗಿಲ್ಲ. ಹೀಗೇಕೆ ಎನ್ನುವ ಪ್ರಶ್ನೆಗೆ ಅವರ ಬಳಿಯೂ ಉತ್ತರ ಇಲ್ಲ. ಈಗ ಸಲ್ಮಾನ್ ಖಾನ್ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.

2014ರಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ ‘ಕಿಕ್’ ಚಿತ್ರದಲ್ಲಿ ಜಾಕ್ವೆಲಿನ್ ನಟಿಸಿದರು. ಈ ಚಿತ್ರದಿಂದ ಅವರ ಬೇಡಿಕೆ ಹೆಚ್ಚಿತು. ಅಲ್ಲಿಂದ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಸಲ್ಲು ನಟನೆಯ ‘ರೇಸ್ 3’ ಚಿತ್ರದಲ್ಲಿ ಅವರು ನಟಿಸಿದರೆ, ‘ರಾಧೆ’ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರು. ಕೊವಿಡ್ ಸಂದರ್ಭದಲ್ಲಿ ಉಂಟಾದ ಲಾಕ್​​ಡೌನ್ ವೇಳೆ ಸಲ್ಲು ಫಾರ್ಮ್​ಹೌಸ್​ನಲ್ಲಿ ಜಾಕ್ವೆಲಿನ್ ಉಳಿದುಕೊಂಡಿದ್ದರು.

ಈಗ ಸಲ್ಲು ಅವರ ಹೊಸ ವಿಡಿಯೋ ವೈರಲ್ ಆಗಿದೆ. ಜಾಕ್ವೆಲಿನ್ ಅವರು ನಿಂತುಕೊಂಡಿದ್ದರು. ಅಲ್ಲಿಗೆ ಬಂದು ಸಲ್ಲು ಅವರು ಜಾಕ್ವೆಲಿನ್ ಕೆನ್ನೆಗೆ ಕಿಸ್ ಮಾಡಿದ್ದಾರೆ. ಮೂಲೆಗೆ ಹೋಗಿ ಟಿ-ಶರ್ಟ್​ನಲ್ಲಿ ಬಾಯಿ ಒರೆಸಿಕೊಂಡಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಸದ್ಯ ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಜಾಕ್ವೆಲಿನ್ ಮೇಕಪ್ ಸಲ್ಲು ಬಾಯಿಗೆ ಅಂಟಿದೆ’ ಎಂದಿದ್ದಾರೆ ಅನೇಕರು.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಬೆದರಿಕೆ ಪ್ರಕರಣ, ರಾಜಸ್ಥಾನದಲ್ಲಿ ವ್ಯಕ್ತಿ ಬಂಧನ

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸದ್ಯ ವಿವಾದದ ಮೂಲಕ ಸುದ್ದಿ ಆಗುತ್ತಿದ್ದಾರೆ. ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರೂ ಇದೆ. ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ರಿಲೇಶನ್​ಶಿಪ್ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಸುಕೇಶ್​ನಿಂದ ಹಲವು ಐಷಾರಾಮಿ ಗಿಫ್ಟ್​ಗಳನ್ನು ಪಡೆದಿದ್ದರು.

ಇದನ್ನೂ ಓದಿ: ಶ್ರೀಮಂತರ ಮದುವೆಯಲ್ಲಿ ಡ್ಯಾನ್ಸ್​ ಮಾಡಿದ ಅಕ್ಷಯ್​, ಸಲ್ಲು: ಇದಕ್ಕಾಗಿ ಪಡೆದ ಹಣ ಎಷ್ಟು?

ಸಲ್ಮಾನ್ ಖಾನ್ ಸದ್ಯ ‘ಕಿಸಿ ಕಿ ಭಾಯ್ ಕಿಸಿ ಕಿ ಜಾನ್​’ ಸಿನಿಮಾ ರಿಲೀಸ್​ನ ಎದುರು ನೋಡುತ್ತಿದ್ದಾರೆ. ಇದಲ್ಲದೆ ‘ಟೈಗರ್ 3’ ಸಿನಿಮಾ ಶೂಟಿಂಗ್​ನಲ್ಲೂ ಅವರು ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:39 am, Sat, 1 April 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ