Salman Khan: ಸೂಪರ್ ಸ್ಟಾರ್ ಆದರೂ ಅಮ್ಮನ ಮಡಿಲಲ್ಲಿ ಇನ್ನೂ ಪುಟ್ಟ ಮಗು; ಸಲ್ಮಾನ್ ಖಾನ್ ಫೋಟೋ ವೈರಲ್

ಸಲ್ಮಾನ್ ಖಾನ್ ಪಕ್ಕಾ ಫ್ಯಾಮಿಲಿ ಮ್ಯಾನ್. ಕುಟುಂಬದೊಂದಿಗೆ ಅವರು ಸಾಕಷ್ಟು ಸಮಯ ಕಳೆಯುತ್ತಾರೆ. ಇತ್ತೀಚೆಗೆ ಅವರು ತಾಯಿಯ ಮಡಿಲಿನಲ್ಲಿ ತಲೆಯೂರಿರುವ ಚಿತ್ರ ವೈರಲ್ ಆಗಿದೆ.

Salman Khan: ಸೂಪರ್ ಸ್ಟಾರ್ ಆದರೂ ಅಮ್ಮನ ಮಡಿಲಲ್ಲಿ ಇನ್ನೂ ಪುಟ್ಟ ಮಗು; ಸಲ್ಮಾನ್ ಖಾನ್ ಫೋಟೋ ವೈರಲ್
ತಮ್ಮ ತಾಯಿ ಸಲ್ಮಾ ಹಾಗೂ ಕುಟುಂಬದೊಂದಿಗೆ ಸಲ್ಮಾನ್ ಖಾನ್
Edited By:

Updated on: Feb 09, 2022 | 1:59 PM

ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan) ಚಿತ್ರರಂಗದಲ್ಲಿ ದೊಡ್ಡ ಹೆಸರು. ಕಿರುತೆರೆಯ ಮೂಲಕವೂ ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇಷ್ಟೆಲ್ಲಾ ಇದ್ದರೂ ಸಲ್ಮಾನ್ ಮಾತ್ರ ಪಕ್ಕಾ ಫ್ಯಾಮಿಲಿ ಮ್ಯಾನ್. ಅಭಿಮಾನಿಗಳಿಗೆ ಇದು ಹಲವಾರು ಸಂದರ್ಭಗಳಲ್ಲಿ ಮತ್ತೆ ಮತ್ತೆ ವೇದ್ಯವಾಗುತ್ತಲೇ ಇದೆ. ಸಹೋದರಿ ಅರ್ಪಿತಾ ಖಾನ್ ಮದುವೆಯನ್ನಂತೂ ಸಲ್ಮಾನ್ ಸ್ವತಃ ಮುಂದೆ ನಿಂತು ನಡೆಸಿಕೊಟ್ಟಿದ್ದನ್ನು ಅಭಿಮಾನಿಗಳು ಇನ್ನೂ ನೆನಪಿಸಿಕೊಳ್ಳುತ್ತಿರುತ್ತಾರೆ. ಇದೀಗ ಬಾಲಿವುಡ್ ಭಾಯಿ ಹಂಚಿಕೊಂಡ ಹೊಸ ಫೋಟೋ ಇಂಟರ್ನೆಟ್​ನಲ್ಲಿ ಸೆನ್ಸೇಶನ್ ಸೃಷ್ಟಿಸುತ್ತಿದೆ. ಕುಟುಂಬದೊಂದಿಗೆ ದಿನಗಳನ್ನು ಕಳೆಯುತ್ತಿರುವ ಚಿತ್ರಗಳನ್ನು ಸಲ್ಮಾನ್ ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ತಾಯಿಯ ಮಡಿಲಲ್ಲಿ ಮಗುವಿನಂತೆ ಮಲಗಿರುವ ಚಿತ್ರವೊಂದನ್ನು ಸಲ್ಮಾನ್ ಹಂಚಿಕೊಂಡಿದ್ದಾರೆ. ಇದು ಸದ್ಯ ಸಖತ್ ವೈರಲ್ ಆಗಿದ್ದು, ಸಲ್ಮಾನ್ ತಾಯಿ ಪ್ರೀತಿ ಕಂಡು ಅಭಿಮಾನಿಗಳು ಮನಸೋತಿದ್ದಾರೆ.

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಲ್ಮಾನ್ ಖಾನ್ ಹಿಂದೆ ಬಿದ್ದಿಲ್ಲ. ಇನ್​ಸ್ಟಾಗ್ರಾಂನಲ್ಲಿ ಅವರಿಗೆ ಸುಮಾರು 5 ಕೋಟಿಯಷ್ಟು ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಸಲ್ಲು ತಮ್ಮ ತಾಯಿ ಸಲ್ಮಾ ಮಡಿಲಿನಲ್ಲಿ ತಲೆಯೂರಿರುವ ಸೆಲ್ಫಿಯನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ತಾಯಿಯ ಮಡಿಲು, ಸ್ವರ್ಗ’ ಎಂದು ಸಲ್ಮಾನ್ ಇದಕ್ಕೆ ಕ್ಯಾಪ್ಶನ್ ಕೂಡ ನೀಡಿದ್ದಾರೆ. ಸದ್ಯ ಇದು ವೈರಲ್ ಆಗಿದೆ.

ಸಲ್ಮಾನ್ ತಾಯಿಯೊಂದಿಗೆ ಇರುವ ಪೋಸ್ಟ್ ಇಲ್ಲಿದೆ:

ಸಲ್ಮಾನ್ ಖಾನ್ ಖ್ಯಾತ ನಟ ಹಾಗೂ ಬರಹಗಾರ ಸಲೀಮ್ ಖಾನ್ ಹಾಗೂ ಸಲ್ಮಾ ಖಾನ್ ಅವರ ಪುತ್ರ. ಆಗಾಗ ಕುಟುಂಬದೊಂದಿಗಿನ ಚಿತ್ರವನ್ನು ಸಲ್ಮಾನ್ ಶೇರ್ ಮಾಡುತ್ತಾರೆ. ಕಳೆದ ನವೆಂಬರ್​ನಲ್ಲಿ ಸಲ್ಮಾನ್ ತಂದೆಯ ಜನ್ಮದಿನದ ಸಂದರ್ಭದಲ್ಲಿ ಕುಟುಂಬದೊಂದಿಗೆ ದಿನವನ್ನು ಕಳೆದಿದ್ದರು. ಈ ಸಂದರ್ಭದ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಅದರಲ್ಲಿ ಸಲೀಮ್, ಸಲ್ಮಾ, ಅರ್ಪಿತಾ ಖಾನ್ ಶರ್ಮಾ, ಅತುಲ್ ಅಗ್ನಿಹೋತ್ರಿ, ಅಲ್ವಿರಾ ಖಾನ್ ಅಗ್ನಿಹೋತ್ರಿ ಮತ್ತು ಅರ್ಬಾಜ್ ಖಾನ್ ಕಾಣಿಸಿಕೊಂಡಿದ್ದರು.

ಕುಟುಂಬದೊಂದಿಗೆ ಸಲ್ಮಾನ್; ಪೋಸ್ಟ್ ಇಲ್ಲಿದೆ:

ಚಿತ್ರಗಳ ವಿಷಯಕ್ಕೆ ಬಂದರೆ ಸಲ್ಮಾನ್ ಖಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಅಂತಿಮ್: ದಿ ಫೈನಲ್ ಟ್ರುಥ್’ನಲ್ಲಿ. ಅದರಲ್ಲಿ ಸಲ್ಮಾನ್ ಸೋದರಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾ ಖಳನಾಯಕನಾಗಿ ಬಣ್ಣಹಚ್ಚಿದ್ದರು. ಮಹೇಶ್ ಮಾಂಜ್ರೇಕರ್ ನಿರ್ದೇಶನದ ಈ ಚಿತ್ರ ನವೆಂಬರ್ 26ರಂದು ತೆರೆಕಂಡಿತ್ತು. ಕನ್ನಡಿಗ ರವಿ ಬಸ್ರೂರು ಸಂಗೀತ ನೀಡಿದ್ದರು. ಆದರೆ ಚಿತ್ರ ಬಾಕ್ಸಾಫೀಸ್​ನಲ್ಲಿ ಕಮಾಯಿ ಮಾಡುವಲ್ಲಿ ಹಿಂದೆಬಿದ್ದಿತ್ತು.

ಇದೀಗ ಸಲ್ಮಾನ್ ‘ಟೈಗರ್ 3’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕತ್ರಿನಾ ಕೈಫ್ ನಾಯಕಿಯಾಗಿ ನಟಿಸುತ್ತಿರುವ ಆ ಚಿತ್ರದಲ್ಲಿ ಸಲ್ಮಾನ್ ರಾ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಆಕ್ಷನ್ ಚಿತ್ರ ಸರಣಿಯ ಹಿಂದಿನ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಆದ್ದರಿಂದ ಈ ಚಿತ್ರದ ಕುರಿತು ನಿರೀಕ್ಷೆ ಬಹಳಷ್ಟಿದೆ.

ಇದನ್ನೂ ಓದಿ:

Keerthy Suresh: ಉಡುಗೆ ಸಿಂಪಲ್​ ಆದ್ರೂ ಕೀರ್ತಿ ಸುರೇಶ್​ ಸೌಂದರ್ಯ ಸೂಪರ್​; ಗಮನ ಸೆಳೆದ ಹೊಸ ಫೋಟೋ

ಅಣ್ಣಾವ್ರು ಡಾಕ್ಟರೇಟ್​ ಪಡೆದ ಸಮಾರಂಭಕ್ಕೆ ಇಂದಿನ ಮೈಸೂರು ವಿವಿ ಕುಲಪತಿಗೂ ಸಿಕ್ಕಿರಲಿಲ್ಲ ಎಂಟ್ರಿ; ಇಲ್ಲಿದೆ ವಿವರ..