ಸೆಲೆಬ್ರಿಟಿಗಳ ಹೆಸರಲ್ಲಿ ಸಾಕಷ್ಟು ಜನರು ದುಡ್ಡು ಮಾಡಿಕೊಳ್ಳುತ್ತಾರೆ. ಚಾನ್ಸ್ ಕೊಡಿಸೋದಾಗಿ ಹೇಳಿ ಮೋಸ ಮಾಡುತ್ತಾರೆ. ಅಚ್ಚರಿ ಎಂದರೆ ಬಾಲಿವುಡ್ನ ಖ್ಯಾತ ನಟ ಚಂಕಿ ಪಾಂಡೆ ಅವರು ಸಲ್ಮಾನ್ ಖಾನ್ ಅವರನ್ನು ಮುಂದಿಟ್ಟುಕೊಂಡು ದುಡ್ಡು ಮಾಡಿದ್ದರು. ಈ ಘಟನೆಯನ್ನು ಅಕ್ಷಯ್ ಕುಮಾರ್ (Akshay Kumar) ಅವರು ಕಪಿಲ್ ಶರ್ಮಾ ಅವರ ಶೋನಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಚಂಕಿ ಪಾಂಡೆ ಮಾಡಿದ್ದೇನು ಎಂಬ ಬಗ್ಗೆ ಇಲ್ಲಿದೆ ವಿವರ.
ಚಂಕಿ ಪಾಂಡೆ ಅವರು ದಕ್ಷಿಣ ಆಫ್ರಿಕಾದಲ್ಲಿ ಕಾರ್ಯಕ್ರಮ ಒಂದನ್ನು ಮಾಡಿದ್ದರು. ಸಲ್ಮಾನ್ ಖಾನ್ ಕೂಡ ಈ ಶೋಗೆ ಆಗಮಿಸಿದ್ದರು. ಇದಕ್ಕಾಗಿ ಸಲ್ಲು ಕೋಟ್ಯಂತರ ರೂಪಾಯಿ ಪಡೆದಿದ್ದರು. ಈ ಶೋ ಯಶಸ್ವಿ ಆಯಿತು. ಇದರಿಂದ ಸಲ್ಮಾನ್ ಖಾನ್ ಸಖತ್ ಖುಷಿಯಾದರು. ಚಂಕಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಚಂಕಿ ಕೂಡ ಖುಷಿಯಾದಂತೆ ನಟಿಸಿ ಸಲ್ಮಾನ್ ಖಾನ್ ಅವರಿಗೆ ಡ್ರೆಸ್ ಕೊಡಿಸೋದಾಗಿ ಹೇಳಿದರು.
ಇದನ್ನೂ ಓದಿ: ‘ಆ ಜಾಗ ಇನ್ನೂ ಕಾಡುತ್ತದೆ’; ಹಿಟ್ ಆ್ಯಂಡ್ ರನ್ ಕೇಸ್ ಬಗ್ಗೆ ಮಾತನಾಡಿದ್ದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಅವರನ್ನು ಬಟ್ಟೆ ಶಾಪ್ ಒಂದಕ್ಕೆ ಕರೆದುಕೊಂಡು ಹೋದರು. ಅಲ್ಲಿ ತಮ್ಮಿಷ್ಟದ ಬಟ್ಟೆಗಳನ್ನು ಖರೀದಿ ಮಾಡುವಂತೆ ಚಂಕಿ ಹೇಳಿದರು. ಅಂತೆಯೇ ಸಲ್ಲು ಬಟ್ಟೆ ಖರೀದಿ ಮಾಡಿದರು. ಆ ಶಾಪ್ನ ಮಾಲೀಕ ಸಖತ್ ಖುಷಿಪಟ್ಟರು. ಶಾಪ್ನ ಮಾಲೀಕನ ಕುಟುಂಬದವರೆಲ್ಲ ಬಂದು ಸಲ್ಲು ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಆ ಬಳಿಕ ಸಲ್ಲು ಹಾಗೂ ಚಂಕಿ ಪಾಂಡೆ ಅಲ್ಲಿಂದ ಹೊರಟರು. ಮೂರ್ನಾಲ್ಕು ದಿನಗಳ ಬಳಿಕ ಅಸಲಿ ವಿಚಾರ ಸಲ್ಲುಗೆ ಗೊತ್ತಾಗಿತ್ತು.
‘ನಿಮ್ಮ ಶಾಪ್ಗೆ ಸಲ್ಮಾನ್ ಖಾನ್ನ ಕರೆದುಕೊಂಡು ಬರುತ್ತೇನೆ. ಇದಕ್ಕಾಗಿ ನೀವು 20 ಸಾವಿರ ಡಾಲರ್ ನೀಡಬೇಕು’ ಎಂದು ಚಂಕಿ ಪಾಂಡೆ ಶಾಪ್ನವರ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಸಲ್ಲುನ ಭೇಟಿ ಮಾಡಿಸಿದ್ದಕ್ಕೆ ಚಂಕಿಗೆ ಶಾಪ್ನವರಿಂದ 20 ಸಾವಿರ ಡಾಲರ್ ಸಿಕ್ಕಿತ್ತು. ಇದನ್ನು ಅಕ್ಷಯ್ ಕುಮಾರ್ ಅವರು ಕಾರ್ಯಕ್ರಮ ನೆನಪಿಸಿಕೊಂಡಿದ್ದರು.
ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ. ‘ಟೈಗರ್ 3’ ಸಿನಿಮಾ ಕೂಡ ಅಂದುಕೊಂಡ ರೀತಿಯಲ್ಲಿ ಬಿಸ್ನೆಸ್ ಮಾಡಲು ಸಾಧ್ಯವಾಗಿಲ್ಲ. ಅವರು ಸದ್ಯ ‘ಸಿಕಂದರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡಲಿದೆಯೇ ಎನ್ನುವ ಕುತೂಹಲ ಮೂಡಿದೆ. ‘ಘಜಿನಿ’ ರೀತಿಯ ಸಿನಿಮಾಗಳನ್ನು ನೀಡಿದ ಎಆರ್ ಮರುಗದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.