Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್ ಕುಮಾರ್ ನಟನೆಯ ‘ಹೇ ಬೇಬಿ’ ಸಿನಿಮಾದಲ್ಲಿ ನಟಿಸಿದ್ದ ಈಕೆ ಈಗ ಹೇಗಾಗಿದ್ದಾರೆ ನೋಡಿ..

‘ಹೇ ಬೇಬಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿತ್ತು. ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಫರ್ದೀನ್ ಖಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಈ ಮೂವರು ನಟರ ಜೊತೆಗೆ, ಒಬ್ಬಳು ಮುದ್ದಾದ ಹುಡುಗಿ ಕೂಡ ಇದ್ದಳು. ಅವಳ ಈಗಿನ ಫೋಟೋ ವೈರಲ್ ಆಗಿದೆ.

ಅಕ್ಷಯ್ ಕುಮಾರ್ ನಟನೆಯ ‘ಹೇ ಬೇಬಿ’ ಸಿನಿಮಾದಲ್ಲಿ ನಟಿಸಿದ್ದ ಈಕೆ ಈಗ ಹೇಗಾಗಿದ್ದಾರೆ ನೋಡಿ..
ಜುವಾನಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: May 03, 2024 | 7:50 AM

ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಹೇ ಬೇಬಿ’ ಸಿನಿಮಾ 2007ರಲ್ಲಿ ರಿಲೀಸ್ ಆಯಿತು. ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಫರ್ದೀನ್ ಖಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಕೆಲವೊಮ್ಮೆ ಈ ಚಿತ್ರ ಪ್ರೇಕ್ಷಕರನ್ನು ನಗಿಸಿದರೆ ಕೆಲವೊಮ್ಮೆ ಭಾವುಕರಾಗುವಂತೆ ಮಾಡಿತ್ತು. ಸಾಜಿದ್ ಖಾನ್ ನಿರ್ದೇಶನದ ಈ ಚಿತ್ರವು ಇಂಗ್ಲಿಷ್ ಸಿನಿಮಾ ‘ತ್ರೀ ಮೆನ್ ಅಂಡ್ ಎ ಬೇಬಿ’ ಚಿತ್ರದ ರಿಮೇಕ್ ಆಗಿದೆ. ‘ಹೇ ಬೇಬಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿತ್ತು. ಈ ಮೂವರು ನಟರ ಜೊತೆಗೆ, ಒಬ್ಬಳು ಮುದ್ದಾದ ಹುಡುಗಿ ಕೂಡ ಇದ್ದಳು. ಮುದ್ದಾದ ಏಂಜೆಲ್ ಪ್ರೇಕ್ಷಕರ ಮನ ಗೆದ್ದಳು. ಚಿತ್ರದಲ್ಲಿ ಏಂಜಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಪುಟ್ಟ ಹುಡುಗಿಯ ನಿಜವಾದ ಹೆಸರು ಜುವಾನಾ ಸಾಂಘ್ವಿ. ಇದೀಗ ಅದೇ ಪುಟ್ಟ ಬಾಲಕಿ ದೊಡ್ಡವಳಾಗಿದ್ದು, 17 ವರ್ಷಗಳ ನಂತರ ಆಕೆಯ ಫೋಟೋಗಳು ವೈರಲ್ ಆಗುತ್ತಿವೆ. ಜುವಾನಾ ಅವರ ಪ್ರಸ್ತುತ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಜುವಾನಾ ‘ಹೇ ಬೇಬಿ’ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಲ್ಲದೆ ಅದರಲ್ಲಿನ ನಟರನ್ನೂ ಮೆಚ್ಚಿಸಿದ್ದರು. ಜನವರಿ 2022 ರಲ್ಲಿ ಫರ್ದೀನ್ ಖಾನ್ ‘ಹೇ ಬೇಬಿ’ ಚಿತ್ರದ ಶೂಟಿಂಗ್ ಫೋಟೋ ಹಂಚಿಕೊಂಡರು. ‘ಪುಟ್ಟ ಜುವಾನಾ ಜೊತೆಗಿನ ದೃಶ್ಯವನ್ನು ಚಿತ್ರೀಕರಿಸಲು ನಾನು ಧೂಮಪಾನವನ್ನು ತ್ಯಜಿಸಿದೆ’ ಎಂದು ಅವರು ಹೇಳಿದ್ದರು. ಚಿತ್ರದಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಫರ್ದೀನ್ ಖಾನ್ ಅವರಂತಹ ಖ್ಯಾತ ನಟರು ಕಾಣಿಸಿಕೊಂಡಿದ್ದರೆ, ಪುಟ್ಟ ಹುಡುಗಿ ಎಲ್ಲರ ಗಮನ ಸೆಳೆದಳು. ಇದೇ ಜುವಾನಾಗೆ ಈಗ 20 ವರ್ಷ. ಆಕೆಯ ಈಗಿನ ಫೋಟೋಗಳನ್ನು ನೋಡಿದರೆ ನೀವೂ ಬೆರಗಾಗುತ್ತೀರಿ. ಇದನ್ನೂ ಓದಿ: ಕೊನೆಗೂ ಮುಗಿಯಿತು ಪಾನ್ ಮಸಲಾ ಕಂಪನಿ ಜೊತೆಗಿನ ಅಕ್ಷಯ್ ಒಪ್ಪಂದ; ಸ್ಟಾರ್ ಹೀರೋ ಎಂಟ್ರಿ

ಜುವಾನಾ ಅವರ ಈ ಫೋಟೋಗಳಿಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಅನೇಕರು ಅವರನ್ನು ಪ್ರೀತಿ ಜಿಂಟಾ ಜೊತೆ ಹೋಲಿಸುತ್ತಿದ್ದಾರೆ. ಬಾಲಿವುಡ್​ಗೆ ಕಾಲಿಡುವಂತೆ ಹಲವರು ಸಲಹೆ ನೀಡಿದ್ದಾರೆ. ‘ಹೇ ಬೇಬಿ’ ನಂತರ ಜುವಾನಾ ಯಾವುದೇ ಚಿತ್ರಗಳಲ್ಲಿ ಅಥವಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಜನರಿಂದ ದೂರವಿದ್ದು ವಿದ್ಯಾಭ್ಯಾಸದತ್ತ ಗಮನ ಹರಿಸುತ್ತಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಖಾತೆಯೂ ಖಾಸಗಿಯಾಗಿದೆ.

ಈ ರೀತಿ ಬಾಲ್ಯದಲ್ಲೇ ಖ್ಯಾತಿ ಸಿಕ್ಕರೆ ಕೆಲವರು ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ. ಹೆಚ್ಚೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ಬಳಿಕ ಅವರಿಗೆ ಸಿನಿಮಾ ಆಫರ್ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ಜುವಾನಾ ಆ ರೀತಿ ಇಲ್ಲ. ಅವರು ತಮ್ಮ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರಿಗೆ ಮುಂದೆ ಯಾರಾದರೂ ಸಿನಿಮಾ ಆಫರ್ ನೀಡುತ್ತಾರಾ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.