ಕೊನೆಗೂ ಮುಗಿಯಿತು ಪಾನ್ ಮಸಲಾ ಕಂಪನಿ ಜೊತೆಗಿನ ಅಕ್ಷಯ್ ಒಪ್ಪಂದ; ಸ್ಟಾರ್ ಹೀರೋ ಎಂಟ್ರಿ

ಅಕ್ಷಯ್ ಕುಮಾರ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಹಜವಾಗಿಯೇ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಅವರು ಇದರ ಜಾಹೀರಾತು ಮಾಡುವುದಿಲ್ಲ ಎಂದರು. ಈಗಾಗಲೇ ಮಾಡಿದ ಒಪ್ಪಂದಂತೆ ಕೆಲವು ವರ್ಷ ಇದರ ಜಾಹೀರಾತು ಪ್ರಸಾರ ಆಯಿತು. ಈಗ ಆ ಒಪ್ಪಂದ ಪೂರ್ಣಗೊಂಡಿದೆ.

ಕೊನೆಗೂ ಮುಗಿಯಿತು ಪಾನ್ ಮಸಲಾ ಕಂಪನಿ ಜೊತೆಗಿನ ಅಕ್ಷಯ್ ಒಪ್ಪಂದ; ಸ್ಟಾರ್ ಹೀರೋ ಎಂಟ್ರಿ
ಟೈಗರ್-ಅಕ್ಷಯ್
Follow us
ರಾಜೇಶ್ ದುಗ್ಗುಮನೆ
|

Updated on: Apr 27, 2024 | 10:01 AM

ಪಾನ್ ಮಸಾಲ ಕಂಪನಿ ವಿಮಲ್ ಜೊತೆಗೆ ಅಕ್ಷಯ್ ಕುಮಾರ್ (Akshay Kumar) ಒಪ್ಪಂದ ಮಾಡಿಕೊಂಡಿದ್ದರು. ಅದರ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದರು. ಇದರಿಂದ ಅವರು ಸಾಕಷ್ಟು ವಿರೋಧಕ್ಕೆ ಒಳಗಾಗಬೇಕಾಯಿತು. ಒಪ್ಪಂದ ಪೂರ್ಣಗೊಳ್ಳುವವರಿಗೆ ನನ್ನ ಜಾಹೀರಾತುಗಳು ಪ್ರದರ್ಶನ ಆಗುತ್ತವೆ ಎಂದು ಅಕ್ಷಯ್ ಕುಮಾರ್ ಅವರು ಹೇಳಿದ್ದರು. ಈಗ ಅಕ್ಷಯ್ ಕುಮಾರ್ ಜೊತೆಗೆ ಇದ್ದ ವಿಮಲ್ ಕಂಪನಿಯ ಒಪ್ಪಂದ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಈ ಜಾಗಕ್ಕೆ ಈಗ ಟೈಗರ್ ಶ್ರಾಫ್ ಅವರ ಆಗಮನ ಆಗಿದೆ. ಅವರಿಗೂ ವಿರೋಧ ವ್ಯಕ್ತವಾಗಿದೆ.

ಅಕ್ಷಯ್ ಕುಮಾರ್ ಅವರು ಸದಾ ಫಿಟ್ನೆಸ್​ ಬಗ್ಗೆ ಮಾತನಾಡುತ್ತಾರೆ. ಅವರು ನಿತ್ಯವೂ ಬೇಗ ಮಲಗಿ ಬೇಗ ಏಳುತ್ತಾರೆ. ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಹಜವಾಗಿಯೇ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಅವರು ಇದರ ಜಾಹೀರಾತು ಮಾಡುವುದಿಲ್ಲ ಎಂದರು. ಈಗಾಗಲೇ ಮಾಡಿದ ಒಪ್ಪಂದಂತೆ ಕೆಲವು ವರ್ಷ ಇದರ ಜಾಹೀರಾತು ಪ್ರಸಾರ ಆಯಿತು. ಈಗ ಆ ಒಪ್ಪಂದ ಪೂರ್ಣಗೊಂಡಿದೆ.

ಶಾರುಖ್ ಖಾನ್, ಅಜಯ್ ದೇವಗನ್ ಅವರು ಈ ಮೊದಲಿನಿಂದಲೂ ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಬಗ್ಗೆಯೂ ಜನರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಆದರೆ, ಈ ಬಗ್ಗೆ ಅವರು ಅಷ್ಟಾಗಿ ಚಿಂತಿಸಿಲ್ಲ. ಆದರೆ, ಅಕ್ಷಯ್ ಅವರು ಇದನ್ನು ಗಂಭೀರವಾಗಿ ಸ್ವೀಕರಿಸಿದ್ದಲ್ಲದೆ, ಅದರಿಂದ ಹೊರ ನಡೆದಿದ್ದಾರೆ. ಈಗ ಟೈಗರ್ ಶ್ರಾಫ್ ಅವರ ಆಗಮನವೂ ಆಗಿದೆ. ಈ ಮೊದಲು ಅಮಿತಾಭ್ ಬಚ್ಚನ್ ಕೂಡ ಪಾನ್ ಮಸಾಲ ಜಾಹೀರಾತಲ್ಲಿ ಕಾಣಿಸಿಕೊಂಡು ವಿರೋಧಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಆ ಬ್ರ್ಯಾಂಡ್​ನಿಂದ ಹಿಂದೆ ಸರಿದರು. ಟೈಗರ್ ಶ್ರಾಫ್ ಅವರು ಇದರಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ.

ಇದನ್ನೂ ಓದಿ: ಐದನೇ ದಿನಕ್ಕೆ ನೆಲಕಚ್ಚಿದ ಅಕ್ಷಯ್ ಕುಮಾರ್ ಸಿನಿಮಾ; ಮುಗಿಯಿತು ಆಟ

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್​ಗೆ ಅಂದುಕೊಂಡ ರೀತಿಯಲ್ಲಿ ಗೆಲುವು ಸಿಗುತ್ತಿಲ್ಲ. ಇಬ್ಬರೂ ಒಟ್ಟಾಗಿ ನಟಿಸಿದ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಹೀನಾಯ ಸೋಲು ಕಂಡಿತು. ಇದರಿಂದ ಅಕ್ಷಯ್ ಕುಮಾರ್ ಅವರು ಸಾಕಷ್ಟು ಬೇಸರಕ್ಕೆ ಒಳಗಾಗಿದ್ದಾರೆ. ಅವರಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.