ಸಲ್ಮಾನ್​ ಖಾನ್ ಕ್ಷಮೆ ಕೇಳಿದ್ರೆ ಬಿಟ್ಟು ಬಿಡ್ತೀವಿ ಎಂದಿದ್ದ ಬಿಷ್ಣೋಯ್ ಸಮುದಾಯ

ಬಿಷ್ಣೋಯ್ ಸಮುದಾಯಕ್ಕೆ ಕೃಷ್ಣಮೃಗ ದೇವರ ಸಮಾನ. ಅವರು ಅದನ್ನು ಪೂಜಿಸುತ್ತಾ ಬಂದಿದ್ದಾರೆ. ದೇವರನ್ನೇ ಸಲ್ಮಾನ್ ಹತ್ಯೆ ಮಾಡಿದ್ದಾರೆ ಎನ್ನುವ ದ್ವೇಷವು ಸಲ್ಲು ಮೇಲೆ ಮೂಡಿದೆ. ಇದನ್ನು ಅವರು ಸಹಿಸಿಕೊಳ್ಳುತ್ತಿಲ್ಲ.

ಸಲ್ಮಾನ್​ ಖಾನ್ ಕ್ಷಮೆ ಕೇಳಿದ್ರೆ ಬಿಟ್ಟು ಬಿಡ್ತೀವಿ ಎಂದಿದ್ದ ಬಿಷ್ಣೋಯ್ ಸಮುದಾಯ
ಸಲ್ಲು
Edited By:

Updated on: Oct 14, 2024 | 11:47 AM

ಎನ್​ಸಿಪಿ ಮುಖಂಡ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಅವರನ್ನು ಇತ್ತೀಚೆಗೆ ಹತ್ಯೆ ಮಾಡಲಾಗಿದೆ. ಸಲ್ಮಾನ್ ಖಾನ್ ಜೊತೆಯಲ್ಲಿ ಆಪ್ತತೆ ಹೊಂದಿರುವ ಕಾರಣದಿಂದ ಈ ಹತ್ಯೆ ನಡೆದಿರೋದಾಗಿ ಇತ್ತೀಚೆಗೆ ವರದಿ ಆಗಿದೆ. ಈ ಕೊಲೆಗೆ ಲಾರೆನ್ಸ್ ಬಿಷ್ಣೋಯ್ ಕೈವಾಡ ಇರೋದಾಗಿ ಹೇಳಲಾಗುತ್ತಿದೆ. ಇದು ಸಾಕಷ್ಟು ಶಾಕಿಂಗ್ ಎನಿಸಿದೆ. ಇದರಿಂದ ಸಲ್ಲು ಆಪ್ತ ಬಳಗದವರಲ್ಲಿ ಆತಂಕ ಹುಟ್ಟಿಕೊಂಡಿದ್ದಂತೂ ನಿಜ. ಸಲ್ಲು ಇದರಿಂದ ತಪ್ಪಿಸಿಕೊಳ್ಳಲು ಈಗ ಉಳಿದಿರೋದು ಒಂದೇ ಮಾರ್ಗ ಎನ್ನಲಾಗಿದೆ.

ಘಟನೆಯ ಬಗ್ಗೆ

1999ರಲ್ಲಿ ರಿಲೀಸ್ ಆದ ‘ಹಮ್ ಸಾತ್ ಸಾತ್ ಹೇ’ ಚಿತ್ರದ ಶೂಟ್​ಗಾಗಿ ಸಲ್ಮಾನ್ ಖಾನ್ ಅವರು 1998ರಲ್ಲಿ ರಾಜಸ್ಥಾನಕ್ಕೆ ಸಲ್ಮಾನ್ ತೆರಳಿದ್ದರು. ಈ ಸಿನಿಮಾ ಶೂಟ್ ವೇಳೆ ಅವರು ಕೃಷ್ಣಮೃಗವನ್ನು ಬೇಟೆ ಮಾಡಿದ್ದರು. ಈ ಪ್ರಕರಣದಲ್ಲಿ ಅವರು ಅಪರಾಧಿ ಎಂದು ಕೆಳ ಹಂತದ ಕೋರ್ಟ್ ಘೋಷಣೆಯನ್ನೂ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ಸಿಕ್ಕಿದೆ.

ಲಾರೆನ್ಸ್​ ಗ್ಯಾಂಗ್​ಗೆ

ಬಿಷ್ಣೋಯ್ ಸಮುದಾಯಕ್ಕೆ ಕೃಷ್ಣಮೃಗ ದೇವರ ಸಮಾನ. ಅವರು ಅದನ್ನು ಪೂಜಿಸುತ್ತಾ ಬಂದಿದ್ದಾರೆ. ದೇವರನ್ನೇ ಸಲ್ಮಾನ್ ಹತ್ಯೆ ಮಾಡಿದ್ದಾರೆ ಎನ್ನುವ ದ್ವೇಷವು ಸಲ್ಲು ಮೇಲೆ ಮೂಡಿದೆ. ಇದನ್ನು ಅವರು ಸಹಿಸಿಕೊಳ್ಳುತ್ತಿಲ್ಲ.

ಕ್ಷಮೆ ಕೇಳಬೇಕು..

ಬಿಷ್ಣೋಯ್ ಸಮುದಾಯದ ಅಖಿಲ ಭಾರತದ ಅಧ್ಯಕ್ಷ ದೇವೇಂದ್ರ ಬುದಿಯಾ ಅವರು ಈ ಬಗ್ಗೆ ಹೇಳಿಕೆ ನೀಡಿದ್ದರು. ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ ಅವರು ಸಲ್ಮಾನ್ ಖಾನ್ ಪರವಾಗಿ ಕ್ಷಮೆ ಕೇಳಿದ ಬಳಿಕ ಈ ಬಗ್ಗೆ ಅವರು ಮಾತನಾಡಿದ್ದರು. ‘ಸಲ್ಮಾನ್ ಖಾನ್ ಅವರು ಕ್ಷಮೆ ಕೇಳಿದರೆ ಬಿಷ್ಣೋಯ್ ಸಮುದಾಯ ಅದನ್ನು ಪರಿಗಣಿಸುತ್ತದೆ. ಸೋಮಿ ಅಲಿ ತಪ್ಪು ಮಾಡಿಲ್ಲ. ಹೀಗಾಗಿ, ಅವರ ಕ್ಷಮೆಗೆ ಒಪ್ಪಿಗೆ ಇಲ್ಲ. ದೇವಸ್ಥಾನಕ್ಕೆ ಬರಬೇಕು, ಆ ಬಳಿಕ ಸ್ವತಃ ಸಲ್ಮಾನ್ ಕ್ಷಮೆ ಕೇಳಬೇಕು. ಆ ಬಳಿಕ ಈ ಬಗ್ಗೆ ಯೋಚಿಸಬಹುದು’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ ಬಾಬಾ ಸಿದ್ಧಿಕಿ ಹಂತಕರು

ಸಲ್ಮಾನ್ ಖಾನ್ ಕ್ಷಮೆ ಕೇಳಲು ಸಿದ್ಧರಿಲ್ಲ. ಅವರಿಗೆ ಕೊಲೆ ಬಗ್ಗೆ ನಿರಂತರವಾಗಿ ಬೆದರಿಕೆಗಳು ಬರುತ್ತಲೇ ಇವೆ. ಹೀಗಾಗಿ, ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಆಪ್ತರ ಹತ್ಯೆ ಆಗಿರುವುದರಿಂದ ಸಲ್ಲು ತಾವು ಯಾರನ್ನೂ ಭೇಟಿ ಮಾಡಲ್ಲ ಎಂದು ಹೇಳಿದ್ದಾರೆ. ಒಂದೊಮ್ಮೆ ಕ್ಷಮೆ ಕೇಳಿದರೆ ಈ ಕಿತ್ತಾಟ ಕೊನೆ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.