ಮನಮೋಹನ್ ಸಿಂಗ್ ನಿಧನದ ಬಳಿಕ ಪ್ರಮುಖ ನಿರ್ಧಾರ ತೆಗೆದುಕೊಂಡ ಸಲ್ಮಾನ್ ಖಾನ್

ಡಿಸೆಂಬರ್​ 26ರಂದು ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಕೋರಿ ಅನೇಕರು ಪೋಸ್ಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ‘ಸಿಕಂದರ್​’ ಸಿನಿಮಾ ತಂಡ ಕೂಡ ಮಾಜಿ ಪ್ರಧಾನಿಯ ಅಗಲಿಕೆಗೆ ಸಂತಾಪ ಸೂಚಿಸಿದೆ. ಡಿಸೆಂಬರ್​ 27ರಂದು ರಿಲೀಸ್​ ಆಗಿಬೇಕಿದ್ದ ‘ಸಿಕಂದರ್​’ ಟೀಸರ್​ ವಿಚಾರದಲ್ಲಿ ಬದಲಾವಣೆ ಆಗಿದೆ.

ಮನಮೋಹನ್ ಸಿಂಗ್ ನಿಧನದ ಬಳಿಕ ಪ್ರಮುಖ ನಿರ್ಧಾರ ತೆಗೆದುಕೊಂಡ ಸಲ್ಮಾನ್ ಖಾನ್
Salman Khan, Manmohan Singh

Updated on: Dec 27, 2024 | 8:32 PM

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ರಾಜಕೀಯ ಕ್ಷೇತ್ರದ ಮಂದಿ ಮಾತ್ರವಲ್ಲದೇ ಸಿನಿಮಾ ಸೆಲೆಬ್ರಿಟಿಗಳು ಕೂಡ ಕಂಬನಿ ಮಿಡಿದಿದ್ದಾರೆ. ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಎಲ್ಲ ಬಗೆಯ ಸಂಭ್ರಮಾಚರಣೆಗಳಿಗೆ ಬ್ರೇಕ್​ ಹಾಕಲಾಗಿದೆ. ಈ ಮೊದಲೇ ನಿಗದಿ ಆಗಿದ್ದ ಕಾರ್ಯಕ್ರಮಗಳು ಕೂಡ ರದ್ದಾಗಿವೆ. ನಟ ಸಲ್ಮಾನ್ ಖಾನ್ ಸಹ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಅವರ ‘ಸಿಕಂದರ್​’ ಸಿನಿಮಾಗೆ ಸಂಬಂಧಿಸಿದ ವಿಷಯ.

‘ಸಿಕಂದರ್​’ ಸಿನಿಮಾದಲ್ಲಿ ಸಲ್ಮಾನ್​ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಮುರುಗದಾಸ್ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಚಿತ್ರದ ಟೀಸರ್​ ನೋಡಲು ಎಲ್ಲರೂ ಕಾದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್​ 27ರಂದು ‘ಸಿಕಂದರ್​’ ಟೀಸರ್​ ರಿಲೀಸ್ ಆಗಬೇಕಿತ್ತು. ಆದರೆ ಚಿತ್ರತಂಡ ಪ್ಲ್ಯಾನ್ ಬದಲಾಯಿಸಿದೆ.

ಹೌದು, ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ‘ಸಿಕಂದರ್’ ಸಿನಿಮಾದ ಟೀಸರ್​ ಬಿಡುಗಡೆಯನ್ನು ರದ್ದು ಮಾಡಲಾಗಿದೆ. ಹಾಗಂತ ಅಭಿಮಾನಿಗಳಿಗೆ ನಿರಾಸೆ ಮಾಡಲು ಕೂಡ ಸಾಧ್ಯವಿಲ್ಲ. ಹಾಗಾಗಿ, ಹೆಚ್ಚು ಕಾಯಿಸದೇ ಕೇವಲ ಒಂದು ದಿನಕ್ಕೆ ಟೀಸರ್​ ಬಿಡುಗಡೆ ದಿನಾಂಕವನ್ನು ಮುಂದೂಡಲು ಸಲ್ಮಾನ್​ ಖಾನ್​ ಮತ್ತು ಚಿತ್ರತಂಡದವರು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿದ್ದಾರೆ ಡಾ. ಮನಮೋಹನ್ ಸಿಂಗ್ ಹತ್ತಿರದ ಸಂಬಂಧಿಗಳು

ಹೊಸ ಪ್ಲ್ಯಾನ್ ಪ್ರಕಾರ, ‘ಸಿಕಂದರ್’ ಸಿನಿಮಾದ ಟೀಸರ್​ ಡಿಸೆಂಬರ್​ 28ರಂದು ರಿಲೀಸ್ ಮಾಡಲಾಗುವುದು. ಈ ಬಗ್ಗೆ ಚಿತ್ರತಂಡದಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಸಾಜಿದ್ ನಾಡಿಯದ್ವಾಲಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅವರ ನಿರ್ಮಾಣ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಟೀಸರ್​ ಬಗ್ಗೆ ಅಪ್​ಡೇಡ್​ ನೀಡಲಾಗಿದೆ.

‘ಗೌರವಾನ್ವಿತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ನಮ್ಮ ಸಿಕಂದರ್ ಚಿತ್ರದ ಟೀಸರ್​ ರಿಲೀಸ್ ಸಮಯವನ್ನು ಡಿಸೆಂಬರ್​ 28ರ ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಮುಂದೂಡಲಾಗಿದೆ. ಅವರ ನಿಧನದ ನೋವಿನಲ್ಲಿ ನಾವು ಸಹ ಇದ್ದೇವೆ. ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು’ ಎಂದು ಪೋಸ್ಟ್​ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us