
ಕಿಯಾತಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಜುಲೈ 15ರಂದು ಪಾಲಕರಾಗಿ ಬಡ್ತಿ ಪಡೆದಿದ್ದು ಗೊತ್ತೇ ಇದೆ. ಕಿಯಾರಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮುಂಬೈನಲ್ಲಿರುವ ರಿಲಾಯನ್ಸ್ ಆಸ್ಪತ್ರೆಗೆ ಕಿಯಾರಾ ಅವರನ್ನು ಅಡ್ಮಿಟ್ ಮಾಡಲಾಗಿತ್ತು. ಅಲ್ಲಿ ಅವರು ಮಗುವನ್ನು ಹೆತ್ತರು. ಈಗ ತಾಯಿ ಹಾಗೂ ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಿರುವಾಗಲೇ ಕಿಯಾರಾ ಹಾಗೂ ಸಿದ್ದಾರ್ಥ್ನ ಸಲ್ಲು ನೋಡಲು ಬಂದಿದ್ದಾರೆ ಎಂದು ಹೇಳಲಾದ ಫೋಟೋ ವೈರಲ್ ಆಗಿದೆ. ಆದರೆ, ಫೇಕ್ ಫೋಟೋ.
ಕಿಯಾರಾ ಅಡ್ವಾಣಿ ಅವರು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಗ್ ಆಗಿದ್ದಾರೆ. ಅವರು ಈವರೆಗೆ ಮಗಳ ಫೋಟೋವನ್ನು ಹಂಚಿಕೊಂಡಿಲ್ಲ. ಈ ವಿಚಾರದಲ್ಲಿ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಹೀಗಿರುವಾಗಲೇ ಕಿಯಾರಾ ಮಗಳು ಎಂದು ಕೆಲವರು ಫೋಟೋ ಹಂಚಿಕೊಳ್ಳುತ್ತಿದ್ದಾರೆ.
ಈ ಫೋಟೋದಲ್ಲಿ ಕಿಯಾರಾ ಅಡ್ವಾಣಿ ಅವರು ಮಗುವನ್ನು ಹಿಡಿದು ನಿಂತಿದ್ದಾರೆ. ಪಕ್ಕದಲ್ಲಿ ಸಿದ್ದಾರ್ಥ್ ಹಾಗೂ ಸಲ್ಮಾನ್ ಖಾನ್ ಇದ್ದಾರೆ. ಸಲ್ಮಾನ್ ಖಾನ್ ಅವರು ಕಿಯಾರಾ ಆರೋಗ್ಯ ವಿಚಾರಿಸಲು ಬಂದಿರಬಹುದು ಎಂದು ಅನೇಕರು ಊಹಿಸಿದ್ದರು. ಆದರೆ, ಅದರಲ್ಲಿ ನಿಜವಿಲ್ಲ.
ಈ ಫೋಟೋವನ್ನು ಸಂಪೂರ್ಣವಾಗಿ ಎಡಿಟ್ ಮಾಡಲಾಗಿದೆ. ಫೋಟೋದಲ್ಲಿರೋದು ಸಿದ್ದಾರ್ಥ್ ಹಾಗೂ ಕಿಯಾರಾ ಮಗುವಲ್ಲ. ಈ ಮೂವರು ಯಾವಾಗಲೂ ಒಟ್ಟಿಗೆ ಪೋಸ್ ನೀಡಿಲ್ಲ. ಆದಾಗ್ಯೂ ಫೇಕ್ ಫೋಟೋವನ್ನು ಅನೇಕರು ನಂಬಿದ್ದಾರೆ. ಆದರೆ, ಕೆಲವರು ಈ ಬಗ್ಗೆ ಜಾಗೃತಿ ಮೂಡುವ ಕೆಲಸ ಮಾಡುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾ ಯುಗ. ಫೇಕ್ ಸುದ್ದಿಗಳು ಬಹುಬೇಗ ಹಬ್ಬಿ ಬಿಡುತ್ತವೆ ಅನ್ನೋದು ಬೇಸರದ ವಿಚಾರ.
ಕಿಯಾರಾ ಹಾಗೂ ಸಿದ್ದಾರ್ಥ್ 2023ರ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಅದ್ದೂರಿ ವಿವಾಹ ಆದರು. ಈ ಮದುವೆ ಫೋಟೋಗಳನ್ನು ಹಂಚಿಕೊಂಡು ವಿಷಯ ಅಧಿಕೃತ ಮಾಡಿದರು. ಇವರು ‘ಶೇರ್ಷಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು ಮತ್ತು ಆ ಸಂದರ್ಭದಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು. ಸದ್ಯ ಕಿಯಾರಾ ಹಾಗೂ ಅವರ ಮಗು ಆರೋಗ್ಯವಾಗಿದ್ದಾರೆ, ಮಗುವಿನ ಫೋಟೋ ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ಕಿಯಾರಾ ಅವರು ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ