ಜೂಹಿ ಮನೆಗೆ ಹೋಗಿ ಹೆಣ್ಣು ಕೇಳಿದ್ದ ಸಲ್ಮಾನ್ ಖಾನ್; ವಿರೋಧಿಸಿದ್ದು ಯಾರು?

ಸಲ್ಮಾನ್ ಖಾನ್ ಅವರು ಬಾಲಿವುಡ್​ನಲ್ಲಿ ಬೇಡಿಕೆಯ ಹೀರೋ. ಅವರಿಗೆ ಬೇಕಷ್ಟು ಆಸ್ತಿ ಇದೆ. ಮುಂಬೈನಲ್ಲಿ ಹಲವು ಕಡೆ ಅವರು ಪ್ರಾಪರ್ಟಿ ಕೂಡ ಹೊಂದಿದ್ದಾರೆ. ಅನೇಕ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಆದರೆ, ಆರಂಭದಲ್ಲಿ ಅವರು ಸಾಕಷ್ಟು ಕಷ್ಟಪಟ್ಟಿದ್ದರು. ಅವರ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.

ಜೂಹಿ ಮನೆಗೆ ಹೋಗಿ ಹೆಣ್ಣು ಕೇಳಿದ್ದ ಸಲ್ಮಾನ್ ಖಾನ್; ವಿರೋಧಿಸಿದ್ದು ಯಾರು?
ಸಲ್ಮಾನ್-ಜೂಹಿ
Edited By:

Updated on: Nov 13, 2024 | 7:58 AM

ನಟಿ ಜೂಹಿ ಚಾವ್ಲಾ ಅವರಿಗೆ ಇಂದು (ನವೆಂಬರ್ 13) ಹುಟ್ಟುಹಬ್ಬ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಲ್ಮಾನ್ ಖಾನ್ ಅವರು ಜೂಹಿ ಚಾವ್ಲಾ ಅವರನ್ನು ಮದುವೆ ಆಗಿರಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈ ಬಗ್ಗೆ ಸಲ್ಮಾನ್ ಖಾನ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ.

ಬಾಲಿವುಡ್​ನ ಬಹುತೇಕ ಸೆಲೆಬ್ರಿಟಿಗಳು ಮದುವೆ ಆಗಿ ಮಕ್ಕಳ ಜೊತೆ ಹಾಯಾಗಿ ಸಮಯ ಕಳೆಯುತ್ತಾ ಇದ್ದಾರೆ. ಆದರೆ, ಸಲ್ಮಾನ್ ಖಾನ್ ಅವರಿಗೆ ಈವರೆಗೆ ಮದುವೆ ಆಗಿಲ್ಲ. ಅವರ ವಯಸ್ಸು 60 ಆಗುತ್ತಾ ಬಂದರೂ ಮದುವೆ ಆಲೋಚನೆ ಬಂದಿಲ್ಲ. ಇನ್ಮುಂದೆ ಅವರು ಮದುವೆ ಆಗುತ್ತಾರೆ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಸೋಮಿ ಅಲಿ, ಐಶ್ವರ್ಯಾ ರೈ, ಕತ್ರಿನಾ ಕೈಫ್ ಹೀಗೆ ಅನೇಕರ ಜೊತೆ ಅವರು ಸುತ್ತಾಡಿದ್ದರು. ಸಲ್ಮಾನ್​ಗೆ ನಟಿ ಜೂಹಿ ಚಾವ್ಲಾ ಅವರನ್ನು ಮದುವೆ ಆಗಬೇಕು ಎಂದಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ.

ಸಲ್ಮಾನ್ ಖಾನ್ ಅವರು ಬಾಲಿವುಡ್​ನಲ್ಲಿ ಬೇಡಿಕೆಯ ಹೀರೋ. ಅವರಿಗೆ ಬೇಕಷ್ಟು ಆಸ್ತಿ ಇದೆ. ಮುಂಬೈನಲ್ಲಿ ಹಲವು ಕಡೆ ಅವರು ಪ್ರಾಪರ್ಟಿ ಕೂಡ ಹೊಂದಿದ್ದಾರೆ. ಅನೇಕ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಆದರೆ, ಆರಂಭದಲ್ಲಿ ಅವರು ಸಾಕಷ್ಟು ಕಷ್ಟಪಟ್ಟಿದ್ದರು. ಅವರ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.

ಜೂಹಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಪ್ರಶ್ನೆ ಮಾಡಿದಾಗ ಸಲ್ಮಾನ್ ತಮ್ಮ ಅಭಿಪ್ರಾಯ ಹೇಳಿದ್ದರು. ‘ಜೂಹಿ ತುಂಬಾನೇ ಸ್ವೀಟ್. ನಾನು ಅವರ ತಂದೆಯ ಬಳಿ ನಿಮ್ಮ ಮಗಳ ನನಗೆ ಮದುವೆ ಮಾಡಿಕೊಡಿ ಎಂದು ಕೇಳಿದ್ದೆ. ಆದರೆ, ಅವರು ಈ ಪ್ರಪೋಸಲ್ ರಿಜೆಕ್ಟ್ ಮಾಡಿದರು. ಬಹುಶಃ ನಾನು ಸ್ಯೂಟೆಬಲ್ ಅಲ್ಲ ಅನ್ನೋದು ಅವರ ಅಭಿಪ್ರಾಯ ಆಗಿತ್ತು ಅನಿಸುತ್ತದೆ. ಅವರಿಗೆ ಏನು ಬೇಕಿತ್ತು ಗೊತ್ತಿಲ್ಲ’ ಎಂದಿದ್ದರು ಸಲ್ಲು.

ಇದನ್ನೂ ಓದಿ: ಜೂಹಿ ಚಾವ್ಲಾ ಆಸ್ತಿ 4600 ಕೋಟಿ ರೂಪಾಯಿ; ಇಷ್ಟೆಲ್ಲ ಹಣ ಬಂದಿದ್ದು ಎಲ್ಲಿಂದ?

1995ರಲ್ಲಿ ಜಯ್ ಮೆಹ್ತಾ ಅವರನ್ನು ಜೂಹಿ ಚಾವ್ಲಾ ಅವರು ವಿವಾಹ ಆದರು. ಈ ದಂಪತಿಗೆ ಜಾನ್ವಿ ಮೆಹ್ತಾ ಹಾಗೂ ಅರ್ಜುನ್ ಮೆಹ್ತಾ ಹೆಸರಿನ ಮಕ್ಕಳಿದ್ದಾರೆ. ಜೂಹಿ ನಟನೆಯ ‘ದೀವಾನಾ ಮಸ್ತಾನಾ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ಮಾಡಿದ್ದರು. ಅದನ್ನು ಹೊರತುಪಡಿಸಿ ಇವರು ಒಟ್ಟಾಗಿ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us