ಜೂಹಿ ಚಾವ್ಲಾ ಆಸ್ತಿ 4600 ಕೋಟಿ ರೂಪಾಯಿ; ಇಷ್ಟೆಲ್ಲ ಹಣ ಬಂದಿದ್ದು ಎಲ್ಲಿಂದ?
1987ರಲ್ಲಿ ಬಂದ ರವಿಚಂದ್ರನ್ ನಟನೆಯ ‘ಪ್ರೇಮಲೋಕ’ ಸಿನಿಮಾದಲ್ಲಿ ನಟಿಸಿದ್ದರು ಜೂಹಿ. ಈ ಸಿನಿಮಾ ಹಿಟ್ ಆಯಿತು. ಆ ಬಳಿಕ ರವಿಚಂದ್ರನ್ ಜೊತೆ ‘ರಣಧೀರ’, ‘ಕಿಂದರಿ ಜೋಗಿ’ ಹೆಸರಿನ ಸಿನಿಮಾ ಮಾಡಿದರು. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದ್ದಾರೆ. ಆದರೆ, ಯಾವುದೂ ದೊಡ್ಡ ಹಿಟ್ ಆಗಿಲ್ಲ

ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರಿಗೆ ಇಂದು (ನವೆಂಬರ್ 13) ಜನ್ಮದಿನ. ಅವರು ಬಾಲಿವುಡ್ನಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿ ನಂಬರ್ 1 ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. ಅವರ ಆಸ್ತಿ ಅಮಿತಾಭ್ ಬಚ್ಚನ್ ಅವರಿಗಿಂತಲೂ ಅಧಿಕವಾಗಿದೆ ಅನ್ನೋದು ವಿಶೇಷ. 90ರ ದಶಕದಲ್ಲಿ ಗ್ಲಾಮರ್ ಬ್ಯೂಟಿಯಾಗಿ ಮಿಂಚಿದ ಅವರ ಆಸ್ತಿ ಬರೋಬ್ಬರಿ 4600 ಕೋಟಿ ರೂಪಾಯಿ. ಈ ಸುದ್ದಿ ಅನೇಕರಿಗೆ ಶಾಕಿಂಗ್ ಎನಿಸಿದೆ.
1986ರಲ್ಲಿ ‘ಸುಲ್ತನತ್’ ಹೆಸರಿನ ಸಿನಿಮಾ ಮಾಡಿದರು. ಈ ಸಿನಿಮಾ ಹೆಸರು ಮಾಡಿಲ್ಲ. ಆ ಬಳಿಕ ಅವರು ನಟಿಸಿದ್ದು 1987ರಲ್ಲಿ ಬಂದ ರವಿಚಂದ್ರನ್ ನಟನೆಯ ‘ಪ್ರೇಮಲೋಕ’ ಸಿನಿಮಾದಲ್ಲಿ. ಈ ಸಿನಿಮಾ ಹಿಟ್ ಆಯಿತು. ಆ ಬಳಿಕ ರವಿಚಂದ್ರನ್ ಜೊತೆ ‘ರಣಧೀರ’, ‘ಕಿಂದರಿ ಜೋಗಿ’ ಹೆಸರಿನ ಸಿನಿಮಾ ಮಾಡಿದರು. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದ್ದಾರೆ. ಆದರೆ, ಯಾವುದೂ ದೊಡ್ಡ ಹಿಟ್ ಆಗಿಲ್ಲ. ಆದಾಗ್ಯೂ ಜೂಹಿ ಚಾವ್ಲಾ ಅವರ ಆಸ್ತಿ ಕಡಿಮೆ ಆಗಿಲ್ಲ.
ಜುಹಿ ಚಾವ್ಲಾ ಅವರು ‘ಹುರುನ್ ರಿಚ್ ಲಿಸ್ಟ್ 2024’ನಲ್ಲಿ ಸ್ಥಾನ ಪಡೆದಿದ್ದಾರೆ. ಶಾರುಖ್ ಖಾನ್ ಅವರು 7 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದರೆ, ಜುಹಿ 4 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇವರಿಗೆ ಹಣ ಬಂದಿದ್ದು ಉದ್ಯಮದಿಂದ. ಶಾರುಖ್ ಖಾನ್ ಜೊತೆ ಸಾಕಷ್ಟು ವೆಂಚರ್ಗಳಲ್ಲಿ ಪಾಲು ಹೊಂದಿದ್ದಾರೆ.
ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಗ್ರೂಪ್’ನ ಸಹ ಸಂಸ್ಥಾಪಕಿ ಆಗಿದ್ದಾರೆ ಅವರು. ‘ಕೋಲ್ಕತ್ತಾ ನೈಟ್ ರೈಡರ್ಸ್’ನ ಸಹ ಮಾಲಕಿ ಆಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅವರು ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಅವರ ಪತಿ ಜಯ್ ಮೆಹ್ತಾ ಕೂಡ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
ಶ್ರೀಮಂತ ನಟಿಯರ ಸಾಲಿನಲ್ಲಿ ಜೂಹಿ ಚಾವ್ಲಾ ಮೊದಲ ಸ್ಥಾನದಲ್ಲಿ ಇದ್ದರೆ ಎರಡನೇ ಸ್ಥಾನದಲ್ಲಿ ಐಶ್ವರ್ಯಾ ರೈ (850 ಕೋಟಿ ರೂಪಾಯಿ), ಮೂರನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ (650 ಕೋಟಿ ರೂಪಾಯಿ) ಆಸ್ತಿ ಹೊಂದಿದ್ದಾರೆ.
ಇದನ್ನೂ ಓದಿ: EMI ಕಟ್ಟದೇ ಶಾರುಖ್ ಖಾನ್ ಕಾರು ಸೀಜ್; ಶಾಕಿಂಗ್ ವಿಷಯ ತಿಳಿಸಿದ ಜೂಹಿ ಚಾವ್ಲಾ
ಜೂಹಿ ಚಾವ್ಲಾ ಅವರ ಬಳಿ ಹಲವು ದುಬಾರಿ ಕಾರುಗಳು ಇವೆ. ಆದರೆ, ಇದನ್ನು ಎಲ್ಲಿಯೂ ಅವರು ಶೋ ಆಫ್ ಮಾಡುವುದಿಲ್ಲ. ಸದ್ಯ ಅವರು ಐಷಾರಾಮಿ ಆಗಿ ಜೀವನ ನಡೆಸುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಯಾವುದೇ ಹೊಸ ಸಿನಿಮಾ ಇಲ್ಲ. ಉದ್ಯಮದ ಕಡೆ ಅವರ ಗಮನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



