EMI ಕಟ್ಟದೇ ಶಾರುಖ್​ ಖಾನ್​ ಕಾರು ಸೀಜ್; ಶಾಕಿಂಗ್ ವಿಷಯ ತಿಳಿಸಿದ ಜೂಹಿ ಚಾವ್ಲಾ

ಶಾರುಖ್​ ಖಾನ್​ ಜೊತೆ ಜೂಹಿ ಚಾವ್ಲಾ ಅವರು ಹಲವು ವರ್ಷಗಳ ಒಡನಾಟ ಹೊಂದಿದ್ದಾರೆ. ಶಾರುಖ್​ ಖಾನ್​ ಅವರ ಕಷ್ಟದ ದಿನಗಳಲ್ಲಿ ಜೂಹಿ ಚಾವ್ಲಾ ಹತ್ತಿರದಿಂದ ನೋಡಿದ್ದಾರೆ. ಕಾರಿನ ಇಎಂಐ ಕಟ್ಟಲು ಕೂಡ ಶಾರುಖ್​ ಖಾನ್​ ಬಳಿ ಹಣ ಇರಲಿಲ್ಲ ಎಂಬುದನ್ನು ಜೂಹಿ ಚಾವ್ಲಾ ಈಗ ಬಹಿರಂಗಪಡಿಸಿದ್ದಾರೆ. ಆ ಕುರಿತು ಇಲ್ಲಿದೆ ಹೆಚ್ಚಿನ ವಿವರ..

EMI ಕಟ್ಟದೇ ಶಾರುಖ್​ ಖಾನ್​ ಕಾರು ಸೀಜ್; ಶಾಕಿಂಗ್ ವಿಷಯ ತಿಳಿಸಿದ ಜೂಹಿ ಚಾವ್ಲಾ
ಶಾರುಖ್​ ಖಾನ್​, ಜೂಹಿ ಚಾವ್ಲಾ
Follow us
ಮದನ್​ ಕುಮಾರ್​
|

Updated on: Jul 01, 2024 | 5:49 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಇಂದು ಸೂಪರ್​ ಸ್ಟಾರ್​ ಆಗಿ ಮೆರೆಯುತ್ತಿದ್ದಾರೆ. ಅವರ ಬಳಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಐಷಾರಾಮಿ ಕಾರು, ಬಂಗಲೆ ಇದೆ. ಆದರೆ ಆರಂಭದ ದಿನಗಳಲ್ಲಿ ಇದ್ಯಾವುದೂ ಅವರ ಬಳಿ ಇರಲಿಲ್ಲ. ಸಾಮಾನ್ಯ ಕುಟುಂಬದಿಂದ ಬಂದ ಅವರು ನಂತರ ಚಿತ್ರರಂಗದಲ್ಲಿ ಯಶಸ್ಸು ಕಂಡರು. ಅವರ ಜೊತೆ ಮೊದಲಿನಿಂದಲೂ ಸ್ನೇಹ ಹೊಂದಿರುವ ನಟಿ ಜೂಹಿ ಚಾವ್ಲಾ (Juhi Chawla) ಅವರು ಈಗ ಒಂದು ಅಚ್ಚರಿಯ ವಿಷಯ ತಿಳಿಸಿದ್ದಾರೆ. ಶಾರುಖ್​ ಖಾನ್​ ಅವರು ಕಾರಿನ ಇಎಂಐ ಕಟ್ಟಲು ಕೂಡ ಕಷ್ಟಪಡುತ್ತಿದ್ದರು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

ಶಾರುಖ್​ ಖಾನ್​ ಅವರನ್ನು ಹತ್ತಿರದಿಂದ ಕಂಡವರಲ್ಲಿ ಚೂಹಿ ಚಾವ್ಲಾ ಕೂಡ ಪ್ರಮುಖರು. ಸಿನಿಮಾಗಳಲ್ಲಿ ಅವರು ಜೋಡಿಯಾಗಿ ನಟಿಸಿದ್ದಾರೆ. ಅಲ್ಲದೇ ಬಿಸ್ನೆಸ್​ ಪಾರ್ಟ್ನರ್​ ಕೂಡ ಹೌದು. ಕೊಲ್ಕತ್ತ ನೈಟ್​ ರೈಡರ್ಸ್​ ತಂಡದ ಮಾಲಿಕತ್ವವನ್ನು ಶಾರುಖ್​ ಖಾನ್​ ಮತ್ತು ಜೂಹಿ ಚಾವ್ಲಾ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೂಹಿ ಚಾವ್ಲಾ ಅವರು ಹಳೇ ದಿನಗಳ ಬಗ್ಗೆ ಮಾತನಾಡಿದ್ದಾರೆ.

‘ಶಾರುಖ್​ ಖಾನ್​ ಬಳಿ ಕಪ್ಪು ಬಣ್ಣದ ಒಂದು ಜಿಪ್ಸಿ ಇತ್ತು. ಅದರ ಇಎಂಐ ಕಟ್ಟಲಿಲ್ಲ ಎಂಬ ಕಾರಣಕ್ಕೆ ಒಂದು ದಿನ ಅದನ್ನು ಸೀಜ್​ ಮಾಡಿದರು. ಆ ದಿನ ಶಾರುಖ್​ ಖಾನ್​ ತುಂಬ ಬೇಸರದಲ್ಲಿ ಶೂಟಿಂಗ್​ಗೆ ಬಂದರು. ಚಿಂತೆ ಮಾಡಬೇಡಿ, ನೀವು ಒಂದು ದಿನ ಹಲವು ಕಾರುಗಳನ್ನು ಖರೀದಿಸುತ್ತೀರಿ ಅಂತ ನಾನು ಅವರಿಗೆ ಸಮಾಧಾನ ಮಾಡಿದ್ದೆ. ಅದನ್ನು ಅವರು ಈಗಲೂ ನೆನಪಿಟ್ಟುಕೊಂಡಿದ್ದಾರೆ. ಅದು ನಿಜ ಕೂಡ. ಈಗ ಅವರು ಹೇಗಿದ್ದಾರೆ ನೋಡಿ’ ಎಂದು ಜೂಹಿ ಚಾವ್ಲಾ ಹೇಳಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ವೇಳೆ ಪರಸ್ಪರ ತಬ್ಬಿಕೊಂಡ ಅಕ್ಷಯ್, ಶಾರುಖ್

ಆರಂಭದಲ್ಲಿ ಶಾರುಖ್​ ಖಾನ್​ ಅವರಿಗೆ ಮುಂಬೈನಲ್ಲಿ ಸ್ವಂತ ಮನೆ ಇರಲಿಲ್ಲ. ಆ ಬಗ್ಗೆಯೂ ಜೂಹಿ ಚಾವ್ಲಾ ಅವರು ಮಾತಾಡಿದ್ದಾರೆ. ‘ಶಾರುಖ್​ ಖಾನ್​ ಅವರಿಗೆ ಮುಂಬೈನಲ್ಲಿ ಮನೆ ಇಲ್ಲದ ಆ ದಿನಗಳು ಕೂಡ ನನಗೆ ನೆನಪಿದೆ. ಶೂಟಿಂಗ್​ಗಾಗಿ ದೆಹಲಿಯಿಂದ ಬರುತ್ತಿದ್ದ ಅವರು ಮುಂಬೈನಲ್ಲಿ ಎಲ್ಲಿ ಉಳಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಊಟ, ತಿಂಡಿ ಶೂಟಿಂಗ್​ ಸೆಟ್​ನಲ್ಲಿ ಮಾಡುತ್ತಿದ್ದರು. 2-3 ಶಿಫ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದರು’ ಎಂದಿದ್ದಾರೆ ಜೂಹಿ ಚಾವ್ಲಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ