ಕ್ರಿಕೆಟರ್ ಆಗಲಿದ್ದಾರೆ ಬಾಲಿವುಡ್ನ ಸ್ಟಾರ್ ಹೀರೋ ಮಗ; ಹೇಗಿದೆ ನೋಡಿ ತಯಾರಿ
ತೈಮೂರ್ ಮುಂದೊಂದು ದಿನ ಕ್ರಿಕೆಟರ್ ಆದರೂ ಅಚ್ಚರಿ ಏನಿಲ್ಲ. ಏಕೆಂದರೆ ಆತನ ಕುಟುಂಬಕ್ಕೂ ಕ್ರಿಕೆಟ್ಗೂ ನಂಟಿದೆ. ಕ್ರಿಕೆಟ್ ಅವರ ರಕ್ತದಲ್ಲೇ ಇದೆ. ಸೈಫ್ ಅಲಿ ಖಾನ್ ತಂದೆ, ತೈಮೂರ್ ತಾತ ನವಾಬ್ ಮೊಹ್ಮದ್ ಮನ್ಸೂರ್ ಅಲಿ ಖಾನ್ ಪಟೌಡಿ ಭಾರತದ ಪರ ಆಡಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ಕೂಡ ಆಗಿದ್ದರು.
ಹೀರೋ ಮಕ್ಕಳು ಚಿತ್ರರಂಗಕ್ಕೆ ಕಾಲಿಡೋಕೆ ಹೆಚ್ಚು ಇಷ್ಟಪಡುತ್ತಾರೆ. ಆದರೆ ಬಾಲಿವುಡ್ನ ಸ್ಟಾರ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿ ಮಗ ತೈಮೂರ್ ಕ್ರಿಕೆಟರ್ ಆಗುವ ಕನಸು ಕಂಡನೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಸಾಕ್ಷಿ ಒದಗಿಸೋ ರೀತಿಯಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ. ತೈಮೂರ್ ಕ್ರಿಕೆಟ್ ಪ್ರ್ಯಾಕ್ಟಿಸ್ ಮಾಡುತ್ತಿದ್ದಾನೆ. ಆತನ ಆಟಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ನೆಟ್ ಒಳಗೆ ಸೈಫ್ ಅಲಿ ಖಾನ್, ತೈಮೂರ್ ಹಾಗೂ ಕೆಲ ಕ್ರಿಕೆಟರ್ಗಳು ತೆರಳಿ ಕ್ರಿಕೆಟ್ ಪ್ರ್ಯಾಕ್ಟಿಸ್ ಮಾಡಿದ್ದಾರೆ. ತೈಮೂರ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಿಂಚಿದ್ದಾನೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ತೈಮೂರ್ ಮುಂದೊಂದು ದಿನ ಕ್ರಿಕೆಟರ್ ಆದರೂ ಅಚ್ಚರಿ ಏನಿಲ್ಲ. ಏಕೆಂದರೆ ಕ್ರಿಕೆಟ್ ಅನ್ನೋದು ಅವರ ರಕ್ತದಲ್ಲೇ ಇದೆ. ಸೈಫ್ ಅಲಿ ಖಾನ್ ತಂದೆ, ತೈಮೂರ್ ತಾತ ನವಾಬ್ ಮೊಹ್ಮದ್ ಮನ್ಸೂರ್ ಅಲಿ ಖಾನ್ ಪಟೌಡಿ ಭಾರತದ ಪರ ಆಡಿದ್ದಾರೆ. ಅವರು ಭಾರತದ ತಂಡದ ಕ್ಯಾಪ್ಟನ್ ಕೂಡ ಆಗಿದ್ದರು. 1941ರಲ್ಲಿ ಜನಿಸಿದ ಅವರು 2011ರಲ್ಲಿ ಮೃತಪಟ್ಟರು.
View this post on Instagram
View this post on Instagram
View this post on Instagram
View this post on Instagram
1961ರಿಂದ 75ರ ಅವಧಿಯಲ್ಲಿ ಮನ್ಸೂರ್ ಅಲಿ ಖಾನ್ ಅವರು ಭಾರತದ ಪರ 46 ಟೆಸ್ಟ್ ಪಂದ್ಯಗಳನ್ನು ಆಡಿ, 2793 ರನ್ ಕಲೆ ಹಾಕಿದ್ದಾರೆ. ಟೆಸ್ಟ್ ಪಂದ್ಯಗಳ ಸರಾಸರಿ 34.91 ಇದೆ. ಈ ಪೈಕಿ 40 ಮ್ಯಾಚ್ಗಳನ್ನು ಕ್ಯಾಪ್ಟನ್ ಆಗಿ ಅವರು ಆಡಿದ್ದಾರೆ. ಈ ಪೈಕಿ 9 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, 19 ಸೋತಿದ್ದಾರೆ. ಉಳಿದವು ಡ್ರಾನಲ್ಲಿ ಅಂತ್ಯ ಕಂಡಿದೆ.
ಇದನ್ನೂ ಓದಿ: ‘ಮಗನಿಗೆ ಒಳ್ಳೇ ಬುದ್ಧಿ ಕಲಿಸಿ’ ಎಂದು ಕರೀನಾ ಕಪೂರ್ ಖಾನ್ಗೆ ತಿವಿದ ನೆಟ್ಟಿಗರು: ತೈಮೂರ್ ಮಾಡಿದ ತಪ್ಪೇನು?
ಮನ್ಸೂರ್ ಅಲಿ ಖಾನ್ ಅವರು 1971ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು. ವಿಶಾಲ್ ಹರಿಯಾಣ ಪಕ್ಷದಿಂದ ಅವರು ಗುರುಗ್ರಾಮ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಅವರು ಸೋತರು. ಅವರು ರಾಜಕೀಯದಲ್ಲಿ ಹೆಚ್ಚು ಆಸಕ್ತಿ ತೋರಿಸಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.