ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾ ಟ್ರೈಲರ್ ರಿಲೀಸ್
‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಈ ಸಿನಿಮಾ ಚೀನಾ ಮತ್ತು ಭಾರತದ ಯೋಧರ ನಡುವೆ ಗಲ್ವಾನ್ನಲ್ಲಿ ನಡೆದ ಸಂಘರ್ಷದ ಕತೆಯನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಈ ಸಿನಿಮಾಕ್ಕೆ ‘ಬ್ಯಾಟಲ್ ಆಫ್ ಗಾಲ್ವಾನ್’ ಎಂದು ಹೆಸರಿಡಲಾಗಿತ್ತು. ಆದರೆ ಸಿನಿಮಾದ ಹೆಸರನ್ನು ಆ ನಂತರದಲ್ಲಿ ಬದಲಾವಣೆ ಮಾಡಲಾಯ್ತು. ಸಿನಿಮಾಕ್ಕೆ ‘ಮಾತೃಭೂಮಿ’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಟ್ರೈಲರ್ ಇದೀಗ ರಿಲೀಸ್ ಆಗಿದೆ.

ಮುಖ್ಯಾಂಶಗಳು
- ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾ
- ‘ಮಾತೃಭೂಮಿ’ ಸಿನಿಮಾದ ಟ್ರೈಲರ್ ರಿಲೀಸ್
- ಡಿಸೆಂಬರ್ 4ಕ್ಕೆ ಹೊಸ ಸಿನಿಮಾ
ಸಲ್ಮಾನ್ ಖಾನ್ ನಟಿಸಿರುವ ಭಾರತೀಯ ಸೈನಿಕರ ಕುರಿತಾದ ಸಿನಿಮಾ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಈ ಸಿನಿಮಾ ಚೀನಾ ಮತ್ತು ಭಾರತದ ಯೋಧರ ನಡುವೆ ಗಲ್ವಾನ್ನಲ್ಲಿ ನಡೆದ ಸಂಘರ್ಷದ ಕತೆಯನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಈ ಸಿನಿಮಾಕ್ಕೆ ‘ಬ್ಯಾಟಲ್ ಆಫ್ ಗಾಲ್ವಾನ್’ ಎಂದು ಹೆಸರಿಡಲಾಗಿತ್ತು. ಆದರೆ ಸಿನಿಮಾದ ಹೆಸರನ್ನು ಆ ನಂತರದಲ್ಲಿ ಬದಲಾವಣೆ ಮಾಡಲಾಯ್ತು. ಸಿನಿಮಾಕ್ಕೆ ‘ಮಾತೃಭೂಮಿ’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಟ್ರೈಲರ್ ಇದೀಗ ರಿಲೀಸ್ ಆಗಿದೆ.
ಇದೀಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಸಲ್ಮಾನ್ ಖಾನ್ ಭಾರತೀಯ ಸೇನಾ ತುಕಡಿಯೊಂದರ ಬೆಟಾಲಿಯನ್ ನಾಯಕನಾಗಿ ನಟನೆ ಮಾಡಿದ್ದಾರೆ. ಚೀನಾ ಮತ್ತು ಭಾರತದ ಗಡಿಯನ್ನು ಕಾಯುವುದು ಸಲ್ಮಾನ್ ಮತ್ತು ಅವರ ತಂಡದ ಕೆಲಸ. ಚೀನಾ ಸೈನಿಕರ ಉದ್ಧಟತನ, ಆದರೆ ಶಾಂತಿ ಕಾಪಾಡುವ ಜವಾಬ್ದಾರಿ ಎರಡನ್ನೂ ನಿಭಾಯಿಸುವ ಸೈನಿಕರ ಧೈರ್ಯ, ಸಂಯಮ, ದೇಶ ಪ್ರೇಮದ ಕತೆಯನ್ನು ‘ಮಾತೃಭೂಮಿ’ ಒಳಗೊಂಡಿದೆ. ಇದೀಗ ಬಿಡುಗಡೆ ಆಗಿರುವ ಟ್ರೈಲರ್ ಸುಮಾರು 4 ನಿಮಿಷ 43 ಸೆಕೆಂಡ್ ಉದ್ದವಿದೆ. ಸೆನ್ಸಾರ್ ಮಂಡಳಿ ಸಿನಿಮಾಕ್ಕೆ U/A 16+ ಪ್ರಮಾಣಪತ್ರ ನೀಡಿದೆ. ಚಿತ್ರವೂ ಯಾವುದೇ ಕಟ್ ಇಲ್ಲದೆ ಪಾಸಾಗಿದೆ ಎಂದು ಸಲ್ಮಾನ್ ತಿಳಿಸಿದ್ದಾರೆ.
2020 ರ ಜೂನ್‌ನಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಲ್ಮಾನ್ ಅವರು 16 ಬಿಹಾರ್ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಅವರಿಂದ ಪ್ರೇರಿತವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಂತೋಷ್ ಬಾಬು ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ನೀಡಲಾಗಿತ್ತು. ಗಲ್ವಾನ್ನಲ್ಲಿ ಚೀನಾ ಮತ್ತು ಭಾರತದ ಯೋಧರ ನಡುವೆ ಬಂದೂಕು ಯುದ್ಧದ ಬದಲಿಗೆ ಕೈ-ಕೈ ಮಿಲಾಯಿಸಿ ಘರ್ಷಣೆ ನಡೆದಿತ್ತು. ಅತ್ಯಂತ ಭೀಕರವಾಗಿ ನಡೆದಿದ್ದ ಈ ಜಗಳದಲ್ಲಿ ಎರಡೂ ಕಡೆಯವರಿಗೆ ಸಾಕಷ್ಟು ಹಾನಿ ಆಗಿತ್ತು.
ಇದನ್ನೂ ಓದಿ:‘ಮಾತೃಭೂಮಿ ಚೀನಾ ವಿರೋಧಿ ಸಿನಿಮಾ ಅಲ್ಲ, ಸರ್ಕಾರದ ಒತ್ತಡ ಬಂದಿಲ್ಲ’; ಸಲ್ಮಾನ್ ಖಾನ್
ಯುದ್ಧದ ದೃಶ್ಯಗಳ ಜೊತೆಗೆ ಸೈನಿಕರ ಧೈರ್ಯ, ತ್ಯಾಗ ಮತ್ತು ಅವರ ಕುಟುಂಬಗಳ ಭಾವನಾತ್ಮಕ ಕೋನವನ್ನು ಸಹ ಈ ಚಿತ್ರ ತೋರಿಸುತ್ತದೆ ಎಂಬುದು ಟ್ರೈಲರ್ನಿಂದ ತಿಳಿಯುತ್ತಿದೆ. ಚಿತ್ರಾಂಗದಾ ಸಿಂಗ್, ಸಲ್ಮಾನ್ ಖಾನ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಸಾಕಷ್ಟು ಹಾಸ್ಯವೂ ಸಹ ಇದೆ. ಟ್ರೈಲರ್ನಲ್ಲಿ ಸಹ ಅದರ ಝಲಕ್ ಅನ್ನು ತೋರಿಸಲಾಗಿದೆ. ಸಲ್ಮಾನ್ ಖಾನ್, ಚೀನಾದ ಸೈನ್ಯಾಧಿಕಾರಿಗೆ ಭಾರತದ ಚೈನೀಸ್ ಖಾದ್ಯ ತಿನ್ನಿಸುವ ಸೀನ್ ನಗು ತರಿಸುತ್ತದೆ. ಸಿನಿಮಾದ ಚಿತ್ರೀಕರಣ ಲಡಾಖ್‌ನಲ್ಲಿ ನಡೆದಿದ್ದು, ನೈಜ ಸ್ಥಳಗಳಿಗೆ ವಿಎಫ್ಎಕ್ಸ್ ಅನ್ನು ಸಹಜವಾಗಿ ಬೆರೆಸಲಾಗಿದೆ.
ಇತ್ತೀಚೆಗೆ ಸಿನಿಮಾ ಸಂಭಂಧವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್ ಇದು ಬಯೋಪಿಕ್ ಅಲ್ಲ ಎಂದು ಸ್ಪಷ್ಟಪಡಿಸಿದರು. ಚಿತ್ರದ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದೆ ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದರು. ಚಿತ್ರದ ಸಂದೇಶ ಶಾಂತಿ ಎಂದು ಹೇಳಿದ ಅವರು, ಮಾತುಕತೆಯಿಂದ ಸಮಸ್ಯೆ ಬಗೆಹರಿಯುವುದಿದ್ದರೆ ಯುದ್ಧ ಏಕೆ ಎಂದು ಪ್ರಶ್ನಿಸಿದರು. ಬಿಡುಗಡೆ ವಿಳಂಬಕ್ಕೆ VFX ಕೆಲಸ ಪೂರ್ಣಗೊಳಿಸುವುದೇ ಕಾರಣ ಎಂದರು. ಸಿನಿಮಾ ಡಿಸೆಂಬರ್ 4 ಕ್ಕೆ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




