‘ಕಬೀರ್ ಸಿಂಗ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಆಫರ್ ಕಳೆದುಕೊಂಡ ನಟ

Kabir Singh: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಕಬೀರ್ ಸಿಂಗ್’ ಸಿನಿಮಾದಲ್ಲಿ ನಟಿಸಿದ್ದ ನಟನೊಬ್ಬನಿಗೆ ದೊಡ್ಡ ನಿರ್ಮಾಣ ಸಂಸ್ಥೆಯೊಂದು ತಮ್ಮ ಸಿನಿಮಾದಲ್ಲಿ ಅವಕಾಶ ಕೊಡಲು ನಿರಾಕರಿಸಿತಂತೆ. ಈ ಬಗ್ಗೆ ಸಂದೀಪ್ ರೆಡ್ಡಿ ವಂಗಾ ಹೇಳಿಕೊಂಡಿದ್ದಾರೆ. ‘ಕಬೀರ್ ಸಿಂಗ್’ ಅಲ್ಲಿ ನಟಿಸಿದ್ದಕ್ಕೆ ನಿನಗೆ ಅವಕಾಶ ಕೊಡುತ್ತಿಲ್ಲ ಎಂದು ನೇರವಾಗಿ ಹೇಳಲಾಗಿತ್ತಂತೆ.

‘ಕಬೀರ್ ಸಿಂಗ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಆಫರ್ ಕಳೆದುಕೊಂಡ ನಟ
Kabir Singh
Edited By:

Updated on: Feb 26, 2025 | 6:54 PM

‘ಕಬೀರ್ ಸಿಂಗ್’ ಸಿನಿಮಾ ತೆಲುಗಿನ ‘ಅರ್ಜುನ್ ರೆಡ್ಡಿ’ ಚಿತ್ರದ ರಿಮೇಕ್ ಆಗಿದೆ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಹಿಂದಿ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿತು. ಈ ಚಿತ್ರದಿಂದ ನಟ ಶಾಹಿದ್ ಕಪೂರ್ ಮಾರುಕಟ್ಟೆ ಹಿರಿದಾಯಿತು. ಶಾಕಿಂಗ್ ವಿಚಾರ ಎಂದರೆ ಈ ಸಿನಿಮಾ ಮಾಡಿದ್ದಕ್ಕೆ ನಟನೊಬ್ಬನಿಗೆ ಆಫರ್​​ಗಳು ಕೈ ತಪ್ಪಿ ಹೋದವು.

‘ಕಬೀರ್ ಸಿಂಗ್’ ಚಿತ್ರವನ್ನು ಮಾಡಿದ್ದು ಸಂದೀಪ್ ರೆಡ್ಡಿ ವಂಗ. ಈ ಚಿತ್ರದಲ್ಲಿ ಪುರುಷರದ್ದೇ ಮೇಲುಗೈ ಎಂದು ತೋರಿಸಿದ್ದಕ್ಕೆ ಟೀಕೆ ಎದುರಿಸಬೇಕಾಯಿತು. ಆದರೆ, ಇದನ್ನು ಅವರು ನಿಲ್ಲಿಸಿಲ್ಲ. ‘ಅನಿಮಲ್’ ಚಿತ್ರದಲ್ಲೂ ಇದನ್ನು ಮುಂದುವರಿಸಿದರು. ಈಗ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ದೊಡ್ಡ ಪ್ರೊಡಕ್ಷನ್ ಕಂಪನಿಯೊಂದು ‘ಕಬೀರ್ ಸಿಂಗ್’ ಸಿನಿಮಾದ ಕಲಾವಿದನಿಗೆ ನೀಡಿದ್ದ ಆಫರ್​ನ ಕಸಿದುಕೊಂಡಿತ್ತು ಎಂದಿದ್ದಾರೆ.

‘ಕಬೀರ್ ಸಿಂಗ್ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಸಿನಿಮಾ ಆಫರ್​​​ನ ರಿಜೆಕ್ಟ್ ಮಾಡಲಾಯಿತು. ಅದೂ ದೊಡ್ಡ ನಿರ್ಮಾಣ ಸಂಸ್ಥೆ. ನನಗೆ ಈ ವಿಚಾರ ಬೇರೆಯವರಿಂದ ತಿಳಿಯಿತು. ನನಗೆ ಆಗ ತುಂಬಾನೇ ಕೋಪ ಬಂದಿತ್ತು’ ಎಂದು ಸಂದೀಪ್ ರೆಡ್ಡಿ ವಂಗ ಹೇಳಿದ್ದಾರೆ. ಆದರೆ, ಎಲ್ಲಿಯೂ ಅವರು ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಿಲ್ಲ. ಕಲಾವಿದನ ಹೆಸರನ್ನೂ ಅವರು ರಿವೀಲ್ ಮಾಡಿಲ್ಲ.

ಇದನ್ನೂ ಓದಿ:ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್​’ ಸಿನಿಮಾದಲ್ಲಿ ಜೋಡಿ ಆಗ್ತಾರಾ ತ್ರಿಶಾ-ಪ್ರಭಾಸ್​?

ಸಂದೀಪ್ ರೆಡ್ಡಿ ಅವರು ಈ ವೇಳೆ ಒಂದು ಚಾಲೆಂಜ್ ಮಾಡಿದ್ದಾರೆ. ‘ಅವರಿಗೆ ಧೈರ್ಯ ಇದ್ದರೆ ನನ್ನ ಜೊತೆ ಕೆಲಸ ಮಾಡಿದ ರಣಬೀರ್ ಕಪೂರ್, ತೃಪ್ತಿ ದಿಮ್ರಿ, ರಶ್ಮಿಕಾ ಮಂದಣ್ಣ ಅಥವಾ ಇನ್ಯಾರೇ ಸ್ಟಾರ್ ಕಲಾವಿದರನ್ನು ರಿಜೆಕ್ಟ್ ಮಾಡಲಿ’ ಎಂದು ಹೇಳಿದ್ದಾರೆ.

ಸಂದೀಪ್ ರೆಡ್ಡಿ ಅವರನ್ನು ಇಂಡಸ್ಟ್ರಿಯ ಕೆಲವರು ಹೇಟ್ ಮಾಡುತ್ತಾರೆ. ಇದಕ್ಕೆ ಕಾರಣ ಹಲವು. ಅವರು ಸಿನಿಮಾಗಳಲ್ಲಿ ಆಲ್ಫಾ ಮೇಲ್​​ನ ಹೆಚ್ಚು ಹೈಲೈಟ್ ಮಾಡುತ್ತಾರೆ. ಇದು ಅನೇಕರಿಗೆ ಇಷ್ಟ ಆಗುವುದಿಲ್ಲ. ಈ ಕಾರಣಕ್ಕೆ ‘ಅನಿಮಲ್’ ಹಾಗೂ ‘ಕಬೀರ್ ಸಿಂಗ್’ ಚಿತ್ರವನ್ನು ಟೀಕೆ ಮಾಡಿದ್ದು ಇದೆ.

ಸಂದೀಪ್ ರೆಡ್ಡಿ ಅವರು ಸದ್ಯ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ