ಬಾಲಿವುಡ್ನ ನಿರ್ಮಾಪಕ ಕರಣ್ ಜೋಹರ್ (Karan Johar) ಅನೇಕ ಸ್ಟಾರ್ ಮಕ್ಕಳಿಗೆ ಗಾಡ್ ಫಾದರ್. ಯಾವುದಾದರೂ ಸ್ಟಾರ್ ಕುಟುಂಬದ ಮಕ್ಕಳು ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ ಎಂದರೆ ಅವರನ್ನು ಪರಿಚಯಿಸೋಕೆ ಕರಣ್ ತುದಿಗಾಲಿನಲ್ಲಿ ನಿಂತಿರುತ್ತಾರೆ. ಸ್ಟಾರ್ ಕಿಡ್ಗಳಿಗೆ ಸರಿ ಹೊಂದುವ ಕಥೆಯನ್ನು ಆಯ್ಕೆ ಮಾಡಿಕೊಂಡು ಅವರನ್ನು ಪರಿಚಯಿಸುತ್ತಾರೆ. ನಟಿ ಆಲಿಯಾ ಭಟ್ (Alia Bhatt), ಅನನ್ಯಾ ಪಾಂಡೆ (Ananya Panday) ಸೇರಿ ಅನೇಕ ಸ್ಟಾರ್ ಮಕ್ಕಳಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದ ಖ್ಯಾತಿ ಕರಣ್ಗೆ ಇದೆ. ಈಗ ಮತ್ತೋರ್ವ ಸ್ಟಾರ್ ನಟನ ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸೋಕೆ ಕರಣ್ ರೆಡಿ ಆಗಿದ್ದಾರೆ. ಇದರ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ನಿರೀಕ್ಷೆ ಹುಟ್ಟುಹಾಕಿದೆ.
ಶನಾಯಾ ಕಪೂರ್, ಲಕ್ಷ್ಯ ಲಲ್ವಾಣಿ ಹಾಗೂ ಗುರ್ಫತೇ ಪಿರ್ಜಾದಾ ಅವರನ್ನು ಲಾಂಚ್ ಮಾಡೋಕೆ ರೆಡಿ ಆಗಿದ್ದಾರೆ ಕರಣ್. ಈ ಮೂವರು ‘ಬೇಧಡಕ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿರುವ ಕರಣ್, ಈ ಮೂವರನ್ನು ಪರಿಚಯಿಸುತ್ತಿರುವ ಬಗ್ಗೆ ಬರೆದುಕೊಂಡಿದ್ದಾರೆ.
ಈ ಸಿನಿಮಾವನ್ನು ಶಂಶಾಕ್ ಖೈತಾನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜಾನ್ವಿ ಕಪೂರ್ ಹಾಗೂ ಇಶಾನ್ ಖಟ್ಟರ್ ಅವರನ್ನು ಪರಿಚಯಿಸಿದ್ದ ‘ಧಡಕ್’ ಚಿತ್ರವನ್ನು ಶಶಾಂಕ್ ನಿರ್ದೇಶನ ಮಾಡಿದ್ದರು. ಇದು ರಿಮೇಕ್ ಆದರೂ ಬಾಲಿವುಡ್ನ ಶೈಲಿಗೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಸಿನಿಮಾ ಮಾಡಿದ್ದರು ಶಶಾಂಕ್. ‘ಧಡಕ್’ನಿಂದ ಜಾನ್ವಿ ಹಾಗೂ ಇಶಾನ್ ಇಬ್ಬರಿಗೂ ಹಿಂದಿ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಬಂತು. ಈಗ ಇದೇ ನಿರ್ದೇಶಕನ ಹೆಗಲಿಗೆ ಹೊಸ ಜವಾಬ್ದಾರಿ ನೀಡಿದ್ದಾರೆ ಕರಣ್ ಜೋಹರ್.
ಲಕ್ಷ್ಯ ಈ ಮೊದಲು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಹೀರೋ ಆಗುತ್ತಿದ್ದಾರೆ. ಶನಾಯಾಗೆ ಚಿತ್ರರಂಗದ ಹಿನ್ನೆಲೆ ಇದೆ. ಅವರು ನಟ ಸಂಜಯ್ ಕಪೂರ್ ಮಗಳು. ಶನಾಯಾ ತಮ್ಮ ಮೊದಲ ಸಿನಿಮಾದಲ್ಲಿ ನಿಮೃತ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಮಗಳು ಚಿತ್ರರಂಗಕ್ಕೆ ಕಾಲಿಡುತ್ತಿರುವ ಬಗ್ಗೆ ಸಂಜಯ್ ಕಪೂರ್ ಖುಷಿಪಟ್ಟಿದ್ದಾರೆ.
ಈ ಮೊದಲು ನಿರ್ದೇಶಕ ಶಶಾಂಕ್ ಹಾಗೂ ನಿರ್ಮಾಪಕ ಕರಣ್ ಅವರು ಹೊಸ ಸಿನಿಮಾ ಘೋಷಣೆ ಬಗ್ಗೆ ಮಾಹಿತಿ ನೀಡಿದ್ದರು. ಸ್ಟಾರ್ ನಟಿಯ ಮಗಳು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸೂಚನೆ ನೀಡಿದ್ದರು. ಆಲಿಯಾ ಭಟ್, ವರುಣ್ ಧವನ್, ಜಾನ್ವಿ ಕಪೂರ್ ಸೇರಿ ಅನೇಕರನ್ನು ಬಾಲಿವುಡ್ಗೆ ಪರಿಚಯಿಸಿದ ಖ್ಯಾತಿ ಕರಣ್ಗೆ ಇದೆ. ಈಗ ಸಂಜಯ್ ಕಪೂರ್ ಮಗಳನ್ನೂ ಕರಣ್ ಲಾಂಚ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Karan Johar: ‘ಯಾವುದೇ ಯಶಸ್ಸು ಪಡೆಯದವರೂ ₹ 20- 30 ಕೋಟಿ ಡಿಮ್ಯಾಂಡ್ ಮಾಡುತ್ತಾರೆ’; ಕರಣ್ ತಿವಿದಿದ್ದು ಯಾರಿಗೆ?
ಮನಸಾರೆ ದಕ್ಷಿಣ ಭಾರತದ ಸಿನಿಮಾ ಹೊಗಳಿದ ಕರಣ್ ಜೋಹರ್; ಸ್ಕ್ರೀನ್ಶಾಟ್ ಹಂಚಿಕೊಂಡ ನಟ