ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಬಾಲಿವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ತಮ್ಮದೇ ನಿಯಮಗಳನ್ನು ಹಾಕಿಕೊಂಡಿರುವ ಅವರಿಗೆ ಸ್ಟಾರ್ ನಟರ ಜೊತೆ ಅಭಿನಯಿಸುವ ಅವಕಾಶ ಸಿಗುತ್ತಿದೆ. ಇತ್ತೀಚೆಗೆ ಅವರು ನಟಿಸಿದ ‘ಅತರಂಗೀ ರೇ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಆ ಸಿನಿಮಾದಲ್ಲಿ ಅವರು ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆ ನಟಿಸಿದ್ದಾರೆ. ‘ಅತರಂಗಿ ರೇ’ ಚಿತ್ರದ ಗೆಲುವಿನ ನಂತರದಲ್ಲಿ ಸಾರಾ ಅಲಿ ಖಾನ್ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಅವರು ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿರುವುದು ಹೈಲೈಟ್ ಆಗಿದೆ. ಸೈಫ್ ಅಲಿ ಖಾನ್ (Saif Ali Khan) ಪುತ್ರಿಯ ಈ ಭಕ್ತಿ ಕಂಡು ಕೆಲವರು ಫಿದಾ ಆಗಿದ್ದಾರೆ. ಅವರ ಜೊತೆಗೆ ತಾಯಿ ಅಮೃತಾ ಸಿಂಗ್ (Amrita Singh) ಕೂಡ ಸಾಥ್ ನೀಡಿದ್ದಾರೆ.
ಮಧ್ಯ ಪ್ರದೇಶದಲ್ಲಿ ಇರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಸಾರಾ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಭೇಟಿ ನೀಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಇಬ್ಬರೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಸಾರಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಜೈ ಮಹಾಕಾಳ, ಜೈ ಭೋಲೇನಾಥ್ ಎಂಬ ಹ್ಯಾಶ್ಟ್ಯಾಗ್ಗಳನ್ನು ಅವರು ಬಳಸಿದ್ದಾರೆ.
ಈ ಫೋಟೋಗಳಿಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಎಲ್ಲ ಧರ್ಮಗಳನ್ನೂ ಸಾರಾ ಅಲಿ ಖಾನ್ ಅವರು ಸಮನಾಗಿ ಗೌರವಿಸುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಅವರು ಕೇದಾರನಾಥ ದೇವಸ್ಥಾನಕ್ಕೆ ತೆರಳಿದ್ದು ದೊಡ್ಡ ಸುದ್ದಿ ಆಗಿತ್ತು. ಒಂದು ವರ್ಗದ ನೆಟ್ಟಿಗರು ಸಾರಾ ಅಲಿ ಖಾನ್ ಅವರ ನಡೆಯನ್ನು ವಿರೋಧಿಸಿದ್ದರು. ಆದರೆ ಅದಕ್ಕೆಲ್ಲ ಸಾರಾ ತಲೆ ಕೆಡಿಸಿಕೊಂಡಿಲ್ಲ. ತಮಗೆ ಇಷ್ಟ ಬಂದ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಿದ್ದಾರೆ.
ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಪುತ್ರಿಯಾಗಿರುವ ಸಾರಾ ಅವರು, ತಂದೆ-ತಾಯಿ ವಿಚ್ಛೇದನ ಪಡೆದ ಸಂದರ್ಭವನ್ನು ಈ ಹಿಂದೆ ನೆನಪಿಸಿಕೊಂಡಿದ್ದರು. ಸೈಫ್ ಹಾಗೂ ಅಮೃತಾ ವಿಚ್ಛೇದನ ಪಡೆಯುವಾಗ ಸಾರಾಗೆ ಕೇವಲ ಒಂಬತ್ತು ವರ್ಷ. ‘ಅಪ್ಪ-ಅಮ್ಮ ಜೊತೆಯಿದ್ದಾಗ ಏನೇನೂ ಸಂತಸವಾಗಿರಲಿಲ್ಲ. ಆದ್ದರಿಂದಲೇ ಅವರ ಬೇರ್ಪಡುವಿಕೆ ಒಂದರ್ಥದಲ್ಲಿ ಇಬ್ಬರಿಗೂ ಒಳ್ಳೆಯದೇ ಆಯಿತು’ ಎಂದು ಸಾರಾ ಹೇಳಿದ್ದರು.
ಇದನ್ನೂ ಓದಿ:
ಫ್ಯೂಚರ್ ಗಂಡನಿಗೆ ಷರತ್ತು ಹಾಕಿದ ಸಾರಾ ಅಲಿ ಖಾನ್; ಇದನ್ನು ಪಾಲಿಸದಿದ್ದರೆ ಇಲ್ಲ ಮದುವೆ
Atrangi Re: ಮಗಳ ಚಿತ್ರ ನೋಡಿ ಕಣ್ಣೀರು ಹಾಕಿದ ಸೈಫ್- ಅಮೃತಾ; ಇದೊಂದು ರೀತಿಯ ಸಾಧನೆ ಎಂದ ಸಾರಾ ಅಲಿ ಖಾನ್
Published On - 9:57 am, Sun, 16 January 22