ವಿಮಾನದಲ್ಲಿ ಸಾರಾ ಮೈಮೇಲೆ ಜ್ಯೂಸ್ ಚೆಲ್ಲಿದ ಗಗನಸಖಿ; ನಡೆಯಿತು ಹೈಡ್ರಾಮಾ

|

Updated on: Jul 25, 2024 | 7:05 AM

ನಟಿ ಸಾರಾ ಅಲಿ ಖಾನ್ ಅವರು ಆಗಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ. ಇದರ ಜೊತಗೆ ಅವರು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ನಾನಾ ಕಾರ್ಯಕ್ರಮಗಳಿಂದ ಅವರಿಗೆ ಆಮಂತ್ರಣ ಬರುತ್ತಾ ಇರುತ್ತದೆ. ಹೀಗಾಗಿ ಸಾಕಷ್ಟು ಬಾರಿ ಅವರು ವಿಮಾನದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ.

ವಿಮಾನದಲ್ಲಿ ಸಾರಾ ಮೈಮೇಲೆ ಜ್ಯೂಸ್ ಚೆಲ್ಲಿದ ಗಗನಸಖಿ; ನಡೆಯಿತು ಹೈಡ್ರಾಮಾ
ಸಾರಾ ಅಲಿ ಖಾನ್
Follow us on

ಸಾರಾ ಅಲಿ ಖಾನ್ ಅವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಾರಾ ಅಲಿ ಖಾನ್ ಅವರು ವಿಮಾನದ ಮೇಲೆ ಕೂತಿದ್ದರು. ಈ ವೇಳೆ ಏರ್​ ಹೋಸ್ಟಸ್ ಅವರ ಮೈ ಮೇಲೆ ಜ್ಯೂಸ್ ಚೆಲ್ಲಿದ್ದಾರೆ. ಇದರಿಂದ ಸಾರಾ ಅಲಿ ಖಾನ್ ಸಿಟ್ಟಾಗಿದ್ದಾರೆ. ಅವರು ಗಗನಸಖಿಯರ ವಿರುದ್ಧ ಕೂಗಾಡಿದ್ದಾರೆ ಎಂದು ಕೂಡ ವರದಿ ಆಗಿದೆ. ಸದ್ಯ ಸಾರಾ ಅವರು ಸಿಟ್ಟಲ್ಲಿರೋ ವಿಡಿಯೋ ಎಲ್ಲ ಕಡೆಗಳಲ್ಲಿ ವೈರಲ್ ಆಗಿದೆ.

ಸಾರಾ ಅಲಿ ಖಾನ್ ಅವರು ಆಗಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ. ಇದರ ಜೊತಗೆ ಅವರು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ನಾನಾ ಕಾರ್ಯಕ್ರಮಗಳಿಂದ ಅವರಿಗೆ ಆಮಂತ್ರಣ ಬರುತ್ತಲೇ ಇರುತ್ತದೆ. ಹೀಗಾಗಿ ಸಾಕಷ್ಟು ಬಾರಿ ಅವರು ವಿಮಾನದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಇತ್ತೀಚೆಗೆ ಸಾರಾ ಅಲಿ ಖಾನ್ ಅವರು ಸುತ್ತಾಟ ನಡೆಸಲು ವಿಮಾನ ಏರಿದ್ದರು. ಈ ಸಂದರ್ಭದಲ್ಲಿ ವಿಮಾನದಲ್ಲಿ ಸಮಸ್ಯೆ ಆಗಿದೆ.

ಸಾರಾ ಅಲಿ ಖಾನ್ ಅವರು ವಿಮಾನದ ಮೇಲೆ ಕುಳಿತಿದ್ದರು. ಈ ವೇಳೆ ಅವರು ಜ್ಯೂಸ್ ಕೇಳಿದ್ದಾರೆ. ಅದನ್ನು ಕೊಡುವಾಗ ಆ ಜ್ಯೂಸ್ ಸಾರಾ ಅವರ ಮೈ ಮೇಲೆ ಚೆಲ್ಲಿದೆ. ಆ ಬಳಿಕ ಎಲ್ಲಾ ಗಗನಸಖಿಯರ ಅವರ ಎದುರು ನಿಂತಿರೋ ರೀತಿಯಲ್ಲಿ ವಿಡಿಯೋ ಇದೆ. ಆ ಬಳಿಕ ಸಾರಾ ಅಲಿ ಖಾನ್ ಅವರು ಗಗನಸಖಿಯರತ್ತ ಸಿಟ್ಟಿನಿಂದ ನೋಡುತ್ತಾ ವಾಶ್​ರೂಂನತ್ತ ತೆರಳಿದ್ದಾರೆ. ತಮ್ಮ ದುಬಾರಿ ಬಟ್ಟೆ ಹಾಳಾಯಿತಲ್ಲ ಎಂದು ಅವರು ಬೇಸರ ಮಾಡಿಕೊಂಡಿದ್ದಾರೆ.

ಇನ್ನು, ಇದು ಸಿನಿಮಾ ಶೂಟ್ ಇರಬಹುದು ಎಂದು ಕೂಡ ಕೆಲವು ಭಾವಿಸಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಕೆಲವೊಮ್ಮೆ ಸೆಲೆಬ್ರಿಟಿಗಳು ಈ ರೀತಿ ವಿಡಿಯೋಗಳನ್ನು ವೈರಲ್ ಮಾಡಿದ ಉದಾಹರಣೆ ಸಾಕಷ್ಟಿದೆ. ಹೀಗಾಗಿ ಇದು ಸಿನಿಮಾ ಶೂಟಿಂಗ್ ಇರಬಹುದು ಎಂದು ಕೂಡ ಕೆಲವರು ಭಾವಿಸಿದ್ದಾರೆ.

ಇದನ್ನೂ ಓದಿ: ನಟಿ ಸಾರಾ ಅಲಿ ಖಾನ್​ ಧರಿಸಿದ ಈ ಮಿನಿ ಡ್ರೆಸ್​ ಬೆಲೆ 25 ಸಾವಿರ ರೂಪಾಯಿ

ಸಾರಾ ಅಲಿ ಖಾನ್ ಅವರ ನಟನೆಯ ‘ಮರ್ಡರ್ ಮುಬಾರಕ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಸಾರಾ ಅವರ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರವನ್ನು ಹೋಮಿ ಅದಜಾನಿಯಾ ಅವರು ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಆಯುಷ್ಮಾನ್ ಖುರಾನಾ ನಟನೆಯ ಸಿನಿಮಾದಲ್ಲೂ ಸಾರಾ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:05 am, Thu, 25 July 24