‘ಹೀರೋಗಳ ಸಂಭಾವನೆ ಮಾತ್ರ ಹೆಚ್ಚಿಲ್ಲ’; ನಿರ್ಮಾಪಕರ ಹೇಳಿಕೆಗೆ ರೋಹಿತ್ ಶೆಟ್ಟಿ ಖಡಕ್ ಉತ್ತರ
ಕರಣ್ ಜೋಹರ್ ಅವರು ಬಾಲಿವುಡ್ನ ಹಲವು ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ನಿರ್ಮಾಪಕರಿಂದ ಆಗುತ್ತಿರುವ ಸಮಸ್ಯೆಗಳು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ನಟರು ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ರೋಹಿತ್ ಕೌಂಟರ್ ಕೊಟ್ಟಿದ್ದಾರೆ.
ಬಾಲಿವುಡ್ನಲ್ಲಿ ಸಿನಿಮಾ ನಿರ್ಮಾಣಕ್ಕೆ ದೊಡ್ಡ ಬಜೆಟ್ಗಳು ಬೇಕಾಗುತ್ತಿವೆ. ಸಿನಿಮಾ ನಿರ್ಮಾಣ ಮಾಡೋದು ಬಲುಕಷ್ಟ ಎಂಬಂತಾಗಿದೆ. ಈ ಬಗ್ಗೆ ಅನೇಕರು ತಕರಾರು ತೆಗೆದಿದ್ದಾರೆ. ಹೀರೋಗಳು ದೊಡ್ಡ ಮೊತ್ತದ ಸಂಭಾವನೆ ಕೇಳೋದೆ ಇದಕ್ಕೆ ಕಾರಣ ಎಂದು ಅನೇಕರು ಕಿಡಿಕಾರಿದ್ದಾರೆ. ಈ ಮಧ್ಯೆ ರೋಹಿತ್ ಶೆಟ್ಟಿ ಅವರು ಹೀರೋಗಳ ಪರ ವಹಿಸಿಕೊಂಡು ಬಂದಿದ್ದಾರೆ. ಕೇವಲ ಹೀರೋಗಳ ಸಂಭಾವನೆ ಮಾತ್ರವಲ್ಲ ಸಿನಿಮಾ ನಿರ್ಮಾಣದ ಸಂಪೂರ್ಣ ವೆಚ್ಛವೇ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ನಿರ್ಮಾಪಕರ ಬಾಯಿ ಮುಚ್ಚಿಸಿದ್ದಾರೆ.
ರೋಹಿತ್ ಶೆಟ್ಟಿ ಅವರು ಬಾಲಿವುಡ್ನಲ್ಲಿ ಹಲವು ಬಿಗ್ ಬಜೆಟ್ ಚಿತ್ರಗಳನ್ನು ನೀಡಿದ್ದಾರೆ. ಅನೇಕವು ಹಿಟ್ ಆಗಿವೆ. ‘ಗೋಲ್ಮಾಲ್ ಸೀರಿಸ್’, ‘ಸಿಂಗಂ’, ‘ಸೂರ್ಯವಂಶಿ’ ಹಾಗೂ ‘ಸಿಂಬಾ’ ಸೀರಿಸ್ಗಳು ಗಮನ ಸೆಳೆದಿವೆ. ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮೆಚ್ಚುಗೆ ಪಡೆದಿವೆ. ಆದರೆ, ಇತ್ತೀಚೆಗೆ ಯಾವ ಸಿನಿಮಾಗಳೂ ಅಷ್ಟು ಕಲೆಕ್ಷನ್ ಮಾಡುತ್ತಿಲ್ಲ. ಅನೇಕ ನಿರ್ಮಾಪಕರು ಬಾಲಿವುಡ್ ಹೀರೋಗಳನ್ನು ತೆಗಳುತ್ತಿದ್ದಾರೆ. ಅವರು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಾರೆ ಎಂದಿದ್ದಾರೆ. ನಿರ್ಮಾಪಕ ಕರಣ್ ಜೋಹರ್ ಕೂಡ ಇದೇ ಮಾತನ್ನು ಹೇಳಿದ್ದರು.
ಸೆಲೆಬ್ರಿಟಿಗಳು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಇದು ಚಾಲೆಂಜ್ ಆಗಿದೆಯೇ ಎಂದು ರೋಹಿತ್ ಶೆಟ್ಟಿಗೆ ಕೇಳಲಾಗಿದೆ. ಅವರು ಇಲ್ಲ ಎನ್ನುವ ಉತ್ತರ ಕೊಟ್ಟಿದ್ದಾರೆ. ‘ಸಿನಿಮಾ ಮಾಡೋದು ದುಬಾರಿ ಆಗುತ್ತಿದೆ. ಆದರೆ, ಅದು ಕೇವಲ ಹೀರೋಗಳಿಂದ ಮಾತ್ರವಲ್ಲ. ಪ್ರಯಾಣ ಮಾಡೋದು, ಟಿಕೆಟ್ ದರ, ಹೋಟೆಲ್ ಹೀಗೆ ಎಲ್ಲವೂ ದುಬಾರಿ ಆಗಿವೆ. ಹೀಗಾಗಿ ನಟರನ್ನು ಮಾತ್ರ ದೂರೋದು ಸರಿ ಅಲ್ಲ. ಕಲಾವಿದರಿಗೆ ಹೆಚ್ಚು ಹಣ ನೀಡಲಾಗಿದೆ ಎಂಬುದು ಸರಿ ಅಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಸ್ಟಾರ್ ನಟರು ಸೂರ್ಯ, ಚಂದ್ರರನ್ನೇ ಕೇಳುತ್ತಾರೆ’; ಕರಣ್ ಜೋಹರ್ ಅಸಮಾಧಾನ
ಇತ್ತೀಚೆಗೆ ಮಾತನಾಡಿದ್ದ ಕರಣ್ ಜೋಹರ್ ಅವರು ನಟರ ವಿರುದ್ಧ ಕಿರಿಕಾಡಿದ್ದರು. ‘ಸ್ಟಾರ್ ಹೀರೋಗಳು ಸೂರ್ಯ-ಚಂದ್ರರನ್ನೇ ಕೇಳುತ್ತಾರೆ’ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆ ಆಗಿತ್ತು. ಕರಣ್ ಜೋಹರ್ ಅವರಂಥ ನಿರ್ಮಾಪಕರಿಗೆ ಹೀರೋಗಳು ಹೊರೆ ಆಗುತ್ತಿದ್ದಾರೆ ಎಂದಾಗ ಉಳಿದವರ ಪರಿಸ್ಥಿತಿ ಏನು ಎನ್ನುವ ಪ್ರಶ್ನೆ ಮೂಡಿತ್ತು. ಇನ್ನು ಅಕ್ಷಯ್ ಕುಮಾರ್ ಅವರ ಸಿನಿಮಾಗಳನ್ನು ನಿರ್ಮಿಸಿರೋ ‘ಪೂಜಾ ಎಂಟರ್ಟೇನ್ಮೆಂಟ್’ ಸಂಕಷ್ಟಕ್ಕೆ ಸಿಲುಕಿದೆ. ಸಂಬಳ ನೀಡಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.